Friday, September 18, 2020

ಬಿಲ್ಲವ ಸಮಾಜ ಮಾತ್ರವಲ್ಲದೇ, ಉಡುಪಿ , ದಕ್ಣಿಣಕನ್ನಡ ಜಿಲ್ಲೆಯ ಜನರ ಮನವಿ ರಾಜ್ಯ ಸರಕಾರಕ್ಕೆ.


 ಮಾನ್ಯ ಸಂಸದರು ಶಾಸಕರುಗಳಿಗೆ.!

ಮಂಗಳೂರು ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ "ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು" ಎಂಬ ಹೆಸರಿನಿಂದ ನಾಮಕರಣ ಮಾಡುವ ಕುರಿತು ಮನವಿ. 


✒️ ಪ್ರಶಾಂತ್ ಪೂಜಾರಿ ಮಸ್ಕತ್, ಪಜೀರ್ 


ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಿವೇದಿಸಿಕೊಳ್ಳುವುದೇನೆಂದರೆ ಸುಮಾರು ಐದು ಶತಮಾನಗಳ ಹಿಂದೆ ತುಳುನಾಡ ಮಣ್ಣಲ್ಲಿ ಅವತಾರ ತಾಳಿ ತಮ್ಮ ಜೀವಿತಾವಧಿಯ ಕಾಲದಲ್ಲಿಯೇ 66 ಗರಡಿ ಮತ್ತು 33 ತಾವು(ಶಿಬಿರ) ಗಳನ್ನು ನಿರ್ಮಿಸಿ ಸತ್ಯ, ಧರ್ಮಕ್ಕಾಗಿ ಹೋರಾಡಿ ಅಮರರಾದ ಕಾಯ ಬಿಟ್ಟು ಮಹಾ ಶಕ್ತಿಗಳಾಗಿ ಬ್ರಹ್ಮೈಖ್ಯರಾದ ಕೋಟಿ ಚೆನ್ನಯರನ್ನು ಇಂದಿಗೂ ಕರ್ನಾಟಕದ ಕರಾವಳಿ ಭಾಗ, ಮಡಿಕೇರಿ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ನೆರೆಯ ರಾಜ್ಯವಾದ ಮಹರಾಷ್ಟ್ರದ ಮುಂಬೈ, ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಸೇರಿದಂತೆ ವಿವಿಧ ಧರ್ಮದವರು ಸುಮಾರು 250 ಕ್ಕೂ ಹೆಚ್ಚು ಗರಡಿಗಳನ್ನು ನಿರ್ಮಿಸಿ ಕೋಟಿ ಚೆನ್ನಯರನ್ನು ಆರಾಧಿಸುತ್ತಿದ್ದು, ಸದರಿ ಗರಡಿಗಳಿಗೆ ಜಾತಿ ಭೇದ ಮರೆತು ಜಾತ್ರಮಹೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ನಾಡಿನಾದ್ಯಂತ ದೇಶ, ವಿದೇಶಗಳಲ್ಲಿ ಕೋಟ್ಯಾಂತರ ಭಕ್ತರಿರುತ್ತಾರೆ. ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕ್ಷೇತ್ರದ ವರ್ಷಂಪ್ರತಿ ಜಾತ್ರೆಗೆ ಜಾತಿ ಭೇದ ಮರೆತು ಲಕ್ಷಾಂತರ ಭಕ್ತರು ದೇಶ ವಿದೇಶಗಳಿಂದ ಆಗಮಿಸುವ ಭಕ್ತಜನ ಸಮೂಹವೇ ಇದಕ್ಕೆ ಸಾಕ್ಷಿಯಾಗಿರುತ್ತದೆ. 

           ಪ್ರಸ್ತುತ ಕೋಟಿ ಚೆನ್ನಯರು ಹುಟ್ಟಿ ಬೆಳೆದ ಸ್ಥಳವಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತ್'ಲ್ ಎಂಬಲ್ಲಿ ಮೂಲಸ್ಥಾನ ಗರಡಿ 2020 ರ ಫೆಬ್ರುವರಿ 28 ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವದೊಂದಿಗೆ ಲೋಕಾರ್ಪಣೆಗೊಂಡಿದೆ. ಈ ಕಾರ್ಯಕ್ರಮದಲ್ಲಿ 15 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದು ಇದು ತುಳುನಾಡಿನ ಇತಿಹಾಸ ಪುಟದಲ್ಲಿ ಚರಿತ್ರೆ ನಿರ್ಮಾಣ ಆಗಿತ್ತು. ಈ ಸಂದರ್ಭದಲ್ಲಿ ಅವರುಗಳ ಭಕ್ತಾದಿಗಳೆಲ್ಲರ ಅಭಿಲಾಷೆಯಂತೆ, ಸರ್ವ ಧರ್ಮೀಯರು ಆರಾಧಿಸುವ ಆರಾಧ್ಯ ಪುರುಷರು, ಅವಳಿ ವೀರರೆಂದು ವಿರಾಜಮಾನರಾಗಿರುವ ಕೋಟಿ ಚೆನ್ನಯರ ಹೆಸರು ವಿಶ್ವ ಮಟ್ಟದಲ್ಲಿ ಬೆಳಗುವಂತೆ ಮಾಡಲು ಮಂಗಳೂರು ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ "ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು" ಎಂಬ ಹೆಸರಿನಲ್ಲಿ ನಾಮಕರಣಗೊಳಿಸಿ ಆದೇಶ ಹೊರಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸುವಂತೆ ವಿನಯ ಪೂರ್ವಕವಾಗಿ ವಿನಂತಿಸುತ್ತೇವೆ.


ಗಮನಕ್ಕೆ :- 

1, ಬಜಪೆ ವಿಮಾನ ನಿಲ್ದಾಣದ ಸ್ಥಳೀಯ ಮಳವೂರು ಗ್ರಾಮ ಪಂಚಾಯತ್ ನ ನಿರ್ಣಯ ಪ್ರತಿಯನ್ನು ಲಗತ್ತಿಸಲಾಗಿದೆ. 

2, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನೇತೃತ್ವದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಲು ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು ಪ್ರಸ್ತಾವಣೆಯು ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದೆ..

ಆದುದರಿಂದ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ತಾವುಗಳು ಶ್ರೀ ಕೋಟಿ ಚೆನ್ನಯರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಇದೇ ಬರುವ ವಿಧಾನ ಮಂಡಲದ ಅಧಿವೇಶನದಲ್ಲಿ ಶಿಫಾರಸು ಮಾಡುವ ನಿರ್ಧಾರವನ್ನು ಕೈಗೊಳ್ಳುವಂತೆ ಮನವಿ.. 

ಕೋಟಿ ಚೆನ್ನಯ ಸಂಚಲನಾ ಸಮಿತಿ



Add

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಶ್ರೀ ದೈವಜ್ಞ ಕೃಷ್ಣಪ್ಪ : 9880877747

 ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಅಖಂಡ ಬಲಿಷ್ಠ ಪೂಜೆಯಿಂದ ಮೋಡಿ ಪದ್ದತಿಯಿಂದ ಗ್ಯಾರಂಟಿ ಪರಿಹಾರಕ್ಕೆ ಸಂಪರ್ಕಿಸಿ. 

ಹಣಕಾಸು ವ್ಯಾಪಾರ ಅಭಿವೃದ್ಧಿ, ಗಂಡ ಹೆಂಡತಿ ಸಮಸ್ಯೆ, ದೃಷ್ಟಿದೋಷ, ಶತ್ರುಗಳ ತೊಂದರೆ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ, ಶಕ್ತಿಯ ವಿಶೇಷ ಪೂಜೆಯಿಂದ 2 ದಿನದಲ್ಲಿ ಶ್ರೀ ಕ್ಷೇತ್ರದಂದ ಪರಿಹಾರ ಮಾಡಿಕೊದಲಾಗುತ್ತದೆ. 

ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ.

ಶ್ರೀ ದೈವಜ್ಞ ಕೃಷ್ಣಪ್ಪ 9880877747



0 comments: