ಮಂಗಳೂರ ಹಾದಿ ಬೀದಿಗಳಿಗೆ ಯಾವುದೇ ಐತಿಹ್ಯವಿರದ ಕೇವಲ ರಾಜಕೀಯ ಮೇಲಾಟದಿಂದ , ಜಾತಿ ತೋಳ್ಬಲದಿಂದ ಇತ್ತೀಚೆಗೆ ಮರುನಾಮಕರಣಗೊಂಡದನ್ನು ಕಂಡಿದ್ದೇವೆ. ಆದರೂ ಧರ್ಮಸಹಿಷ್ಣುವತೆಗೆ ಹೆಸರಾದ ತುಳುನಾಡಿನ ಬಹುಸಂಖ್ಯಾದ ಬಿಲ್ಲವರ ಜಾಣ ಮೌನವೇ ಅವರ ದೌರ್ಬಲ್ಯವೆಂದುಕೊಂಡರೆ ಅದು ಮೂರ್ಖತನವಲ್ಲದೆ ಮತ್ತೇನಲ್ಲ.
ಬಿಲ್ಲವರು ತುಳುನಾಡಿನ ಪ್ರಾಬಲ್ಯ ಹಾಗೂ ಬಹುಸಂಖ್ಯಾತರಾಗಿದ್ದರೂ , ಮಂಗಳೂರಿನ ಬೀದಿಗಳಿಗೆ ಸಂಬಂಧ ಪಟ್ಟಂತೆ ಯಾವುದೇ ಹೆಸರಿಡುವಂತಹ ಕೆಲಸ ನಡೆದಿಲ್ಲ ಎನ್ನುವುದು ಬೇಸರದ ಸಂಗತಿ. ಆದುದರಿಂದ ,
. ಕುದ್ರೋಳಿ ಗೋಕರ್ಣನಾಥ ಸಂಪರ್ಕಿಸುವ Ladyhill ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು.
. ಅಪ್ಪಣ್ಣ ಪೂಜಾರಿಯವರು ಮಂಗಳೂರಿಗೆ ಬರುವವರಿಗೆ ನೀರು ಹಾಗೂ ಬೆಲ್ಲವನ್ನು ನೀಡುತ್ತಿದ್ದ , ಅಪ್ಪಣ್ಣಕಟ್ಟೆಗೆ , ಅಪ್ಪಣ್ಣ ಪೂಜಾರಿ ವೃತ್ತವೆಂದೂ.
. ತುಳುನಾಡಿನ ಕಂಬಳಕ್ಕೆ ಪ್ರೋತ್ಸಾಹ ಹಾಗೂ ಬಡವರಿಗೆ ಉಚಿತವಾಗಿ ಊಟವನ್ನು ಹಂಚುತ್ತಿದ್ದ , ಕಂಕನಾಡಿ ರಾಮಣ್ಣ ಪೂಜಾರಿ ಹೆಸರಿನಲ್ಲಿ ಮಂಗಳೂರ ಹಾದಿಗೆ ನಾಮಕರಣ .
. ಜಾತಿ , ಮತ ಭೇದವಿಲ್ಲದೆ ಆರಾಧಿಸುವ ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರ ಹೆಸರನ್ನು ಮಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ.
ಮಂಗಳೂರು ಮಹಾನಗರ ಪಾಲಿಕೆ , ಕರ್ನಾಟಕ ರಾಜ್ಯ ಅಧಿಕಾರರೂಢ ಪಕ್ಷ ಹಾಗೂ ಕೇಂದ್ರ ಸರ್ಕಾರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಇದರಲ್ಲಿ ಯಾವುದೇ ತೊಡಕಾಗುವುದಿಲ್ಲ ಎನ್ನುವ ನಂಬಿಕೆ ನಮ್ಮದು.
ಬಿಲ್ಲವರು ನಿರ್ಣಾಯಕರಾಗಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಇಂತಹ ನಿರ್ದಾರಕ್ಕೆ ಪೂರಕವಾಗಿ ಸ್ಪಂದಿಸುವಂತಾಗಲಿ.
Add
ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಶ್ರೀ ದೈವಜ್ಞ ಕೃಷ್ಣಪ್ಪ : 9880877747
ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಅಖಂಡ ಬಲಿಷ್ಠ ಪೂಜೆಯಿಂದ ಮೋಡಿ ಪದ್ದತಿಯಿಂದ ಗ್ಯಾರಂಟಿ ಪರಿಹಾರಕ್ಕೆ ಸಂಪರ್ಕಿಸಿ.
ಹಣಕಾಸು ವ್ಯಾಪಾರ ಅಭಿವೃದ್ಧಿ, ಗಂಡ ಹೆಂಡತಿ ಸಮಸ್ಯೆ, ದೃಷ್ಟಿದೋಷ, ಶತ್ರುಗಳ ತೊಂದರೆ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ, ಶಕ್ತಿಯ ವಿಶೇಷ ಪೂಜೆಯಿಂದ 2 ದಿನದಲ್ಲಿ ಶ್ರೀ ಕ್ಷೇತ್ರದಂದ ಪರಿಹಾರ ಮಾಡಿಕೊದಲಾಗುತ್ತದೆ.
ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ.ಶ್ರೀ ದೈವಜ್ಞ ಕೃಷ್ಣಪ್ಪ 9880877747
0 comments: