Sunday, May 16, 2021

ದೂರದೂರಿನ ಮುಂಬೈನಲ್ಲಿ ನೆಲೆಸಿರುವ ಅಸಾಧಾರಣ ಪ್ರತಿಭೆಯೇ ಶ್ರುತಿ ಪೂಜಾರಿ

 ಇಂದು ನಾವು ಪರಿಚಯಿಸುತ್ತಿರುವ ಕಲಾ ಪ್ರತಿಭೆ -ಶ್ರುತಿ ಪೂಜಾರಿ 


ಪ್ರತಿಭೆ ಎಂದರೆ ಭೂತ -ಭವಿಷ್ಯ, ವರ್ತಮಾನಗಳನ್ನು ಸಮನ್ವಯ ಮಾಡುವಂತಹ ಒಂದು ಭೌದ್ಧಿಕ ಕ್ರೀಯೆ ಎಂದರೆ ತಪ್ಪಾಗಲಾರದು. 

ಚಿತ್ರಕಲೆಯಲ್ಲಿ ಆಳ ಎಷ್ಟಿದೆ ಎಂಬುದನ್ನು ಯಾರು ಅರಿತವರಿಲ್ಲ. ಈಗಿನ ಯುವ ಜನಾಂಗ ಆ ಆಳಕ್ಕಿಳಿದು ಚಿತ್ರಕಲೆಯಲ್ಲಿ ಹೊಸ ಹೊಸ ಪ್ರಯತ್ನ ಮಾಡಿ ಗುರುತಿಸಿಕೊಳ್ಳುತ್ತಿರುವುದು ನಮಗೆಲ್ಲ ತಿಳಿದ ಸಂಗತಿ. ತೆರೆಮರೆಯ ಹಿಂದೆ ಅವಕಾಶಕ್ಕಾಗಿ ಮಿಡಿಯುತ್ತಿರುವ  ಅನೇಕ ರೀತಿಯ ಯುವ ಕಲಾವಿದರನ್ನು ನಾವು ಕಂಡಿದ್ದೇವೆ. ಅಂತವರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿರುವ ' ತಾನು ಭವಿಷ್ಯತ್ತಿನಲ್ಲಿ ಚಿತ್ರಕಲೆಯಲ್ಲಿ ಉತ್ತಮ "ಚಿತ್ರಕಲಾಗಾರ್ತಿ "ಆಗಬೇಕೆಂದು 'ಬೆಟ್ಟದಷ್ಟು ಆಸೆ ಹೊತ್ತು ನಿಂತಿರುವ ಯುವ ಚಿತ್ರ ಕಲಾವಿದೆ.... ಪ್ರಸ್ತುತ "ಸೀನಿಯರ್ ಕ್ರಿಯೇಟಿವ್ ಡಿಸೈನರ್ " ಲಿಡೊ ಮುಂಬೈನಲ್ಲಿ ವಾಸವಾಗಿರುವ ಶ್ರುತಿ ಪೂಜಾರಿ. 


ತನ್ನ ಶಾಲಾ ದಿನಗಳಿಂದಲೂ ಭಾವೊದ್ರಿಕ್ತತೆಯಿಂದ ಕಲಾಕೃತಿಯನ್ನು ಬಿಡಿಸುತ್ತಾ ಅನೇಕ ಚಿತ್ರಗಳನ್ನು ಬಿಡಿಸಿ ಸೈ ಎನಿಸಿಕೊಂಡಿರುವವರು. ತನ್ನ ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ  ಚಿಂತಿಸುವ ಇವರಿಗೆ ಚಿತ್ರಕಲೆಯಲ್ಲಿ ಅಪರಿಮಿತ ಎಲ್ಲಿಲ್ಲದ ಆಸಕ್ತಿ. 

ಇವರು ಕ್ಯಾನ್ವಸ್ ಪೈಂಟಿಂಗ್, ವಾಲ್ ಪೈಂಟಿಂಗ್, ಕಲೆ ಮತ್ತು ಕ್ರಾಫ್ಟ್, ಅಕ್ರಿಲಿಕ್, ವಾಟರ್ ಕಲರ್, ಆಯಿಲ್ ಪೈಂಟಿಂಗ್ನಲ್ಲಿ ತನ್ನ ಅಧ್ಭುತವಾದ ಕೈ ಚಳಕದಿಂದ ಚಿತ್ರಬಿಡಿಸುವಲ್ಲಿ ಪ್ರಾವೀಣ್ಯತೆ ಹೊಂದಿರುವವರು. 


ಕಲೆ,  ಕಲಾವಿದರು, ಪ್ರತಿಭೆ, ಪ್ರತಿಭಾವಂತರೆಂದು ಪೋಷಿಸುವಲ್ಲಿ, ಪಾತ್ರರನ್ನು ಗುರುತಿಸಿ ಹೆಜ್ಜೆ ಇಡಬೇಕಾದ್ದಕ್ಕಿಂತ ಮುಖ್ಯವಾದದ್ದು ಆ ಎಲ್ಲವನ್ನೂ, ಆ ಎಲ್ಲರನ್ನೂ ಪ್ರೋತ್ಸಾಹಿಸಲು ನಾವೆಷ್ಟು ಪಾತ್ರರೆಂದು  ಅರಿತಿರಬೇಕು ಅಲ್ಲವೇ?... 


ಆದ್ದರಿಂದ ನಿಮಗೆ ಕಲಾಕೃತಿಯಲ್ಲಿ ಆಸಕ್ತಿ ಇದ್ದು, ನಿಮ್ಮ ಮನೆ, ಕಚೇರಿಗಳನ್ನು ಕಲಾಕೃತಿಯಿಂದ ಅಂದಗಾಣಿಸಬೇಕೇ ಅಥವಾ ಹುಟ್ಟುಹಬ್ಬ ಇನ್ನಿತರ ಸಮಾರಂಭಗಳಿಗೆ   ಕಲಾಕೃತಿಯನ್ನು ಉಡುಗೊರೆಯಾಗಿ  ಕೊಡಲು...... ನಿಮಗೆ ಯಾವ ತರಹದ ಪೈಂಟಿಂಗ್ ಚಿತ್ರಗಳು,  ಇನ್ನಿತರ ಚಿತ್ರಗಳು ಬೇಕು ಆ ರೀತಿಯ ಕಲಾಕೃತಿ ಬೇಕಾದಲ್ಲಿ ಸಂಪರ್ಕಿಸಿ... 

ಶ್ರುತಿ ಪೂಜಾರಿ -contact no -9029830098(ವಿ.ಸೂಚನೆ:-ಮೆಸೇಜ್ ಮಾತ್ರ ಮಾಡಬೇಕಾಗಿ ವಿನಂತಿ)


ನೂರಾರು ಕನಸನ್ನು ಹೊತ್ತು ಸಾಗುತ್ತಿರುವ ಇವರ "ಚಿತ್ರಕಲಾಗಾರ್ತಿ " ಆಗಬೇಕೆನ್ನುವ ಕನಸು ಆದಷ್ಟು ಬೇಗ ನೆರವೇರಲಿ ಎಂದು ಹಾರೈಸೋಣ.
































0 comments: