Monday, July 5, 2021

ಸ್ಯಾಂಡಲ್ವುಡ್ ನಲ್ಲಿ ಸದ್ದಿಲ್ಲದೆ ಪಾದರ್ಪಣೆ ಮಾಡಿರುವ ಕರಾವಳಿಯ ಅಪೂರ್ವ ಕೋಟ್ಯಾನ್

 ಚಿತ್ರರಂಗ ಎನ್ನುವ ಬಣ್ಣದ ಲೋಕದಲ್ಲಿ ಅದೆಷ್ಟೋ ತುಳುನಾಡಿನ ಮಂದಿ ಸಾಧನೆ ಮಾಡಿದ್ದಾರೆ. ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೇ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಯುವ ಪ್ರತಿಭೆಯೆ ಅಪೂರ್ವ ಕೋಟ್ಯಾನ್..

ಬರಹ:-ಸುಪ್ರೀತಾ ಎಸ್ ಪೂಜಾರಿ

ಮೂಲತಃ ಮಂಗಳೂರಿನವರಾದ ಇವರು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಶಂಕರ್ ಹಾಗೂ ಸ್ವಾತಿ ದಂಪತಿಗಳ ಸುಪುತ್ರಿಯೆ ಈ ಯುವ ಪ್ರತಿಭೆ ಅಪೂರ್ವ ಕೋಟ್ಯಾನ್...ಇವರ ತಂದೆಯವರು ಮೈಸೂರಿನ ಪ್ರಜಾ ಸತ್ಯ ಎನ್ನುವ ವಾರ್ತಾಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ತಾಯಿ ಗೃಹಿಣಿಯಾಗಿದ್ದಾರೆ.ಬಾಲ್ಯದಿಂದಲೇ ಚಟುವಟಿಕೆಯಿಂದ ಇರುತ್ತಿದ್ದ ಇವರು ಚಿತ್ರರಂಗದಲ್ಲಿ ಸಾಧನೆ ಮಾಡಬೇಕೆಂಬ ಕನಸು ನನಸಾಗುತ್ತಿದೆ.ಕರಾವಳಿಯ ಅದೆಷ್ಟೋ ಪ್ರತಿಭೆಗಳು ದೇಶಾದ್ಯಂತ ಹೆಸರು ಮಾಡುತ್ತಿದ್ದಾರೆ ಅವರಂತೆ ತಾನು ಬೆಳೆಯಬೇಕು ಎಂಬುದು ಇವರ ಕನಸು.ಓಂ ಪ್ರಕಾಶ್ ಅವರ ಪರಿ ಎನ್ನುವ ಕನ್ನಡ ಸಿನಿಮಾದಲ್ಲಿ ನಟಿಸಿದ್ದು  ಪಂಚಮ ಅಧ್ಯಾಯ ಎನ್ನುವ ಸಿನಿಮಾ ಬಿಡುಗಡೆಗೆ ಸಿಧ್ಧವಾಗಿದೆ..ಧಾರಾವಾಹಿಯಲ್ಲಿ ಕೂಡಾ ನಟಿಸಲಿದ್ದು ಶೂಟಿಂಗ್ ಇನ್ನೆನು ಪ್ರಾರಂಭವಾಗಬೇಕಿದೆ.ಮುಂದೆ ಕೂಡಾ ಚಿತ್ರರಂಗದಲ್ಲಿ ಹೆಚ್ಚಿನ ಸಾಧನೆ ಇವರಿಂದ ಮೂಡಿ ಬರಲಿ ಎಂದು ಆಶಿಸುವ ಟೀಮ್ ನಮ್ಮ ಬಿಲ್ಲವೆರ್
1 comment:

  1. Betting on the MLB - Sports Toto - Sporting 100
    It also features the NBA playoffs in 토토 사이트 홍보 a unique way and has become a must-play for any betting enthusiast. The BetMGM Sportsbook app also

    ReplyDelete