Thursday, November 9, 2017

ಬಿಲ್ಲವ ಸಮಾಜದ ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೊಂದು ಸುವರ್ಣಾವಕಾಶ


ಯುವವಾಹಿನಿ ಕೇಂದ್ರ ಸಮಿತಿ ಇದರ ಆಶ್ರಯ ದಲ್ಲಿ ಬಂಟ್ವಾಳ ತಾಲೂಕು ಘಟಕದ ಆತಿಥ್ಯದಲ್ಲಿ ಇದೇ ಬರುವ ಡಿಸೆಂಬರ್ 25ಕ್ಕೆ ಮೆಲ್ಕಾರ್ನ ಬಿರ್ವ ಸೆಂಟರ್ ನಲ್ಲಿ ಶೈಕ್ಷಣಿಕ,ವೃತ್ತಿ ಮಾರ್ಗದರ್ಶನ ಹಾಗೂ ಪುನರ್ಮನನ ತರಬೇತಿಯ ರಾಷ್ಟ್ರೀಯ ಕಾರ್ಯಾಗಾರ ಅನ್ವೇಷಣಾ 2017 ದಿನಾಂಕ 25-12-2017 ಸೋಮವಾರ ಸ್ಥಳ: ಬಿರ್ವ ಸೆಂಟರ್,ಮೆಲ್ಕಾರ್ ಪಾಣೆಮಂಗಳೂರು ಸಮಯ: ಬೆಳಿಗ್ಗೆ 9-00ಗಂಟೆಯಿಂದ ಅಪರಾಹ್ನ 3-30ರ ವರೆಗೆ ಅನ್ವೇಷಣಾ 2017ರಲ್ಲಿ ಯಾರು ಭಾಗವಹಿಸಬಹುದು ಪಿಯುಸಿ,ಪದವಿ (ಡಿಗ್ರಿ), ಐಟಿಐ,ಡಿಪ್ಲೊಮಾ, ಎಂಜಿನೀಯರಿಂಗ್,ಯಾವುದೇ ತಾಂತ್ರಿಕ ಶಿಕ್ಷಣ ಮತ್ತು ಸ್ನಾತಕೋತ್ತರ ಪದವಿಯನ್ನು ಓದುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಬಹುದು. ಆಸಕ್ತ ಬಿಲ್ಲವ ಸಮಾಜಕ್ಕೆ ಸೇರಿದ ಯುವಕರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆಯಬಹುದು.ವಿಶೇಷ ಸೂಚನೆ: ಶಿಬಿರವು ಸಂಪೂರ್ಣ ಉಚಿತ ಶಿಬಿರವು ಸಮಯಕ್ಕೆ ಸರಿಯಾಗಿ ಆರಂಭವಾಗುವುದು ಶಿಬಿರಾರ್ಥಿಗಳು ಬೆಳಿಗ್ಗೆ 9-00ಗಂಟೆಗಿಂತ ಮುಂಚಿತವಾಗಿ ಹೆಸರನ್ನು ನೋಂದಾಯಿಸಬೇಕು. ಪೆನ್ನು ಪುಸ್ತಕ ಹಾಗೂ ಫೈಲ್ ನೀಡಲಾಗುವುದು ಲಘ ಉಪಹಾರ ಮತ್ತು ಊಟೋಪಚಾರದ ವ್ಯವಸ್ಥೆ ಇರುತ್ತದೆ * ಭಾಗವಹಿಸಿದವರೆಲ್ಲರಿಗೂ ಪ್ರಮಾಣ ಪತ್ರವನ್ನು ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವುದನ್ನು ಮುಂಚಿತವಾಗಿ ಖಚಿತಪಡಿಸಲು ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿರಿ: 7338505228, 9740884828

0 comments: