Tuesday, November 7, 2017

ಬಿಲ್ಲವ ಸಾಲ್ಯಾನ್ ಕುಟುಂಬ ಮಿತ್ತಡ ಮನೆ ಪೂರ್ವಜರ ಇತಿಹಾಸ

ಬಿಲ್ಲವ ಸಮಾಜದ ಆದಿಕಾಲದ 160 ಗುತ್ತುಬಾರಿಕೆಯಲ್ಲಿ ಸ್ಥಾನ ಹೊಂದಿರುವ ಸುಮಾರು 400 ವರ್ಷಗಳ ಇತಿಹಾಸ ಇರುವಂತಹ ಈ ಮನೆತನದವರು. ಕುಂಬಳೆಸೀಮೆಯ ರಾಜರಸರ ಕಾಲದಲ್ಲಿ ದಂಡನಾಯಕನ ಸ್ಥಾನದಲ್ಲಿ ಧಳಪತಿಯಾಗಿ ಮೆರೆದಂತಹ (ಉಮ್ಮಣ್ಣ ಬೈದ್ಯ) ವಂಶಸ್ಥರಾದ ನಾವು. ಕುಟುಂಬದ ಗುರುಸಾನಿಧ್ಯದ ದೈವ ಕುಂದಾಯ ದಾರುವಿನ ನಾಮಾಂಕಿತದೊಂದಿಗೆ ವೈದ್ಯಸೇವೆಯನ್ನು ಸಮಾಜಕ್ಕೆ ನೀಡಿ ಮೆರೆದ ಮನೆತನ ಕಿನ್ಯಗ್ರಾಮದ ಧರ್ಮದೈವ ಮಲರಾಯನ ಪಾತ್ರಿಯಾಗಿ ಸೇವೆಯನ್ನು ನೀಡುವಂತಹ ಕುಟುಂಬ. ತಲಪಾಡಿ ದುರ್ಗಾಪರಮೇಶ್ವರಿ ಅಮ್ಮನ ಜಾತ್ರಾ ಮಹೋತ್ಸವದಂದು ಬಟ್ಟಲ್ ಕಾಣಿಕೆಯ ಗೌರವ ಪ್ರಸಾದವನ್ನು ಸ್ವೀಕರಿಸುವ ಮೊದಲ ಕುಟುಂಬ ಬಿಲ್ಲವ ಸಾಲ್ಯಾನ್ ಮಿತ್ತಡಮನೆ ಕಿನ್ಯ.

27 ಅಜ್ಜಿಯಂದಿರ ದಾಖಲೆಯನ್ನು ಕಂಡ ಮೂಲಚಾವಡಿ ಮನೆಯ ಪುನರ್ ನಿರ್ಮಾಣದ ಗ್ರಹಪ್ರವೇಶ ಕುಟುಂಬದ ಆರಾಧ್ಯ ದೈವಗಳ ಪ್ರತಿಷ್ಠೆ ಕಲಶಾಭಿಷೇಕವನ್ನು 140 ದಿನಗಳಲ್ಲಿ ಕಾರ್ಯಗತಗೊಳಿಸಿ ಸಕುಟುಂಬ ದೈವಗಳಿಗೆ ಅರ್ಪಿಸಿ ಕುಟುಂಬಕ್ಕೆ ಸಮರ್ಪಣೆ ಗೊಳಿಸಿ ಹೆಗ್ಗಳಿಕೆಗೆ "ಬಿಲ್ಲವ ಸಾಲ್ಯಾನ್ ಕುಟುಂಬ ಮಿತ್ತಡ ಮನೆಗೆ ಸಲ್ಲುತ್ತದೆ. Courtesy --Prashanth K Poojari.

0 comments: