Wednesday, November 15, 2017

ಬಿಲ್ಲವ ಎಲ್ಲವನ್ನು ಬಲ್ಲವ ,ಬಿಲ್ಲವ ಬಾಂಧವರೇ ಒಮ್ಮೆ ಯೋಚಿಸಿ

ಬಿಲ್ಲವ ಸಮುದಾಯದವರು ರಾಜಕೀಯ ಮತ್ತು ಸಾಮಾಜಿಕ ರಂಗಳಲ್ಲಿ ಗುರುತಿಸಿಕೊಂಡು ತಮ್ಮದೇ ಆದ ಚಾಪು ಮೂಡಿಸಿಕೊಂಡಿದ್ದಾರೆ ದುರಂತವೆಂದರೆ ಬಿಲ್ಲವ ಸಮುದಾಯದ ಏಳಿಗೆಯನ್ನು ನೋಡಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಕೆಲ ದುಷ್ಟರು ಮಾಡುತ್ತಿದ್ದಾರೆ,ಬಿಲ್ಲವ ಸಮುದಾಯಕ್ಕೆ ಸೇರಿದ ಮುಖಂಡರು ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರು ಕುಲಕ್ಷ ಕಾರಣಕ್ಕೆ ಅವರ ತೇಜೋವಧೆ ಮಾಡುವ ಯತ್ನ ಈ ದಿನಗಳಲ್ಲಿ ನಡೆಯುತ್ತಾ ಬಂದಿದೆ .

ಕೆಲ ಉದಾಹರಣೆಗಳು ಇಲ್ಲಿವೆ ನೋಡಿ 2012 ಲೋಕ ಸಭಾ ಉಪಚುನಾವಣೆಯಲ್ಲಿ ಸುನಿಲ್ ಕುಮಾರ್ ಅವರಿಗೆ ಸೋಲು, ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಿದರೆಂಬ ಕಾರಣಕ್ಕೆ ಅವರ ಕಚೇರಿ ಮತ್ತು ಮನೆ ಮೇಲೆ ಕಲ್ಲು ಎಸೆತ, ಕಳೆದ ಲೋಕ ಸಭಾ ಚುನಾವಣೆಯಲ್ಲಿ ಬಿಲ್ಲವ ಹಿರಿಯ ನಾಯಕ ಜನಾರ್ಧನ ಪೂಜಾರಿ ಅವರಿಗೆ ಸೋಲು, ರಾಜಕೀಯ ಪಕ್ಷಗಳ ಸ್ಥಾನೀಯ ಸಮಿತಿ ಪಟ್ಟಿಯಲ್ಲಿ ಬಿಲ್ಲವ ಸಮುದಾಯದ ಕಡೆಗಣನೆ, ಕಾಂಗ್ರೆಸ್ ನಿಂದ ಜನಾರ್ಧನ ಪೂಜಾರಿ ಮೂಲೆ ಗುಂಪು, ಉಮಾನಾಥ್ ಕೋಟ್ಯಾನ್ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಕೈತಪ್ಪಿದ್ದು, ಕಾಂಗ್ರೆಸ್ ಸಂಪುಟದಿಂದ ಬಿಲ್ಲವ ನಾಯಕರುಗಳನ್ನು ಕೈಬಿಟ್ಟಿದ್ದು, ಪ್ರಕಾಶ್ ರೈ ಗೆ ನೀಡುವ ಶಿವರಾಮ ಕಾರಂತ ಪ್ರಶಸ್ತಿ ಹೆಸರಿನಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಷಡ್ಯಂತ್ರ, ಮಂಗಳೂರು ಮೇಯರ್ ಕವಿತಾ ಸನಿಲ್ ತೇಜೋವಧೆಗೆ ಯತ್ನ

ಬಿಲ್ಲವ ಎಲ್ಲವನ್ನು ಬಲ್ಲವ ರೀತಿಯಲ್ಲಿ ಈ ದುಷ್ಟರಿಗೆ ನಾವು ಉತ್ತರನೀಡಬೇಕಿರುವ ಅಗತ್ಯವಿದೆ ಈ ಕಾರಣಕೋಸ್ಕರ ಬಿಲ್ಲವರು ಸಂಘಟಿತರಾಗಿ ಉತ್ತರ ನೀಡಿದರೆ ಮುಂದೊಂದು ದಿನ ಬಿಲ್ಲವ ಸಮುದಾಯದ ಮುಖಂಡರ ಮೇಲೆ ಕೈ ತೋರಿಸುವ ದುಷ್ಟರು ಸಾವಿರ ಬಾರಿ ಯೋಚನೆ ಮಾಡುತ್ತಾರೆ.ನಾವು ಯಾವುದೇ ಸಂಘ ಸಂಸ್ಥೆಗಳಲ್ಲಿ ಅದರ ತತ್ವ ಸಿದ್ಧಾಂತವನ್ನು ಬದಿಗಿಟ್ಟು ಮೊದಲು ನಾನು ಬಿಲ್ಲವ ಎಂದು ಯೋಚಿಸಿದರೆ ಮಾತ್ರ ಈ ಬದಲಾವಣೆ ಸಾಧ್ಯ,

ಬಿಲ್ಲವ ಬಾಂಧವರೇ ಬೇರೆ ಸಮುದಾಯದಲ್ಲಿ ಇರುವ ಒಗ್ಗಟ್ಟು ನಮ್ಮಲ್ಲೂ ಇದ್ದರೆ ಮಾತ್ರ ರಾಜಕೀಯ ಮತ್ತು ಎಲ್ಲಾ ರಂಗಳಲ್ಲಿ ನಾವು ಮೇಲೆ ಬರಲು ಸಾಧ್ಯ ,ಚುನಾವಣೆಗಳಲ್ಲಿ ನಾಯಕತ್ವದ ಆಯ್ಕೆ ಸಂದರ್ಭ ಜಾತಿ ರಾಜಕಾರಣವನ್ನು ಪ್ರಮುಖ ಮಾನ ದಂಡವಾಗಿ ವಿವಿಧ ರಾಜಕೀಯ ಪಕ್ಷಗಳು ಪಾಲಿಸುತ್ತ ಬಂದಿವೆ ,ಬಿಲ್ಲವ ಸಮುದಾಯಕ್ಕೆ ಸೇರಿದ ವ್ಯಕ್ತಿ ಯಾವುದೇ ಪಕ್ಷ ಅಥವಾ ಸಂಘನೆಗಳಲ್ಲಿ ಇದ್ದರು ಯಾವು ಮೊದಲು ನಾವು ಪಕ್ಷ ಬೇಧ ಮರೆತು ಒಗ್ಗೂಡೋಣ

0 comments: