Thursday, November 2, 2017

ಬಿಲ್ಲವ ಮಹನೀಯರಿಂದ ಗುರುತಿಸಿಕೊಂಡ ನಗರದ ಕೆಲವು ಪ್ರದೇಶಗಳು


.

ಹಂಪನ ಕಟ್ಟೆ - ಅಪ್ಪಣ ಪೂಜಾರಿಯವರ ಜಮೀನ್ದಾರಿಕೆಯಲ್ಲಿದ್ದ ಈ ಪ್ರದೇಶದಲ್ಲಿ ಅವರು ಕಟ್ಟೆಯಲ್ಲಿ ದಾರಿಹೋಕರಿಗೆ ಬೆಲ್ಲ ನೀರಿನ ವ್ಯವಸ್ಥೆ ಮಾಡಿಸಿದ್ದರು.ಕಂರ್ಬಿಸ್ಥಾನ - ಜಪ್ಪಿನಮೊಗರಿನಲ್ಲಿರುವ ಈ ಪ್ರದೇಶವು ವೈದ್ಯನಾಥ ದೈವದ ದೈವಸ್ಥಾನವಿರುವ ಪ್ರದೇಶ. ಇಲ್ಲಿನ ಕಂರ್ಬಿ ಬೈದ್ಯೆದಿ ಇಲ್ಲಿನ ವೈದ್ಯನಾಥ ದೈವದ ಆರಾಧನೆಗೆ ಮೂಲ ಕಾರಣಕರ್ತಳು.ಬಜಿಲ ಕೇರಿ - ಗಂಗ ಮಿಜಾರು ಎಂಬುವರು ಇಲ್ಲಿ ಮೊದಲ ಬಾರಿಗೆ ಅವಲಕ್ಕಿ ಯ ಉದ್ಯಮ ಆರಂಬಿಸಿದರು.ಬೈದ್ಯೆರೆ ಪಾಲ್ - ಉಳ್ಳಾಲದಲ್ಲಿರುವ ಈ ಸ್ಥಳವು ಸಿದ್ದಿ ಪುರುಷ ಕೋಟೆಕಾರು ಸಿದ್ಧಮರ್ದ ಬೈದ್ಯರು ಹೋಮ ಮಾಡಿದ ಸ್ಥಳ.ಬಿಕರ್ನಕಟ್ಟೆ - ಬಿಕುರು ನಾಯ್ಗ ಎಂಬುವರ ಕಟ್ಟೆ. ಇವರು ಬಿಲ್ಲವರೆಂಬ ವಾದವಿದೆ.

0 comments: