ಬಿರುವೆರ್ ಕುಡ್ಲ (ರಿ.) ಮಹಿಳಾ ಘಟಕ ಉದ್ಘಾಟನಾ ಕಾರ್ಯಕ್ರಮ.
ಬಿರುವೆರ್ ಕುಡ್ಲ(ರಿ) ಮಹಿಳಾ ಘಟಕದ ಉದ್ಘಾಟನಾ ಕಾರ್ಯಕ್ರಮ
ಬಿರುವೆರ್ ಕುಡ್ಲ(ರಿ) ಮಹಿಳಾ ಘಟಕವು ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿದ್ದು ಇದರ ಅಧಿಕೃತ ಉದ್ಘಾಟನಾ ಸಮಾರಂಭವು ದಿನಾಂಕ 10-12-2017 ರಂದು ಮಾಡುವುದೆಂದು ತೀರ್ಮಾನಿಸಲಾಗಿದೆ. ಘಟಕದ ಉದ್ಘಾಟನಾ ಪ್ರಯುಕ್ತ ಸಮಾಜ ಸೇವೆಯೆ ಉಸಿರಾಗಿಸಿಕೊಟ್ಟ ಈ ಸಂಘಟನೆಯು ಘಟಕದ ವತಿಯಿಂದ ಡಿಸೆಂಬರ್ ತಿಂಗಳಲ್ಲಿ ಸಾಮೂಹಿಕ/ಸರಳ ವಿವಾಹ ಕಾರ್ಯಕ್ರಮ ಆಯೋಜಿಸಿದ್ದು ಹಿಂದೂ ಸಮಾಜದ ಬಡ ಕುಟುಂಬದ ಜೋಡಿಗಳು ಇಲ್ಲಿ ವಿವಾಹ ಆಗಲಿಚ್ಚಿಸುವ ವಧುವಿಗೆ ಬಂಗಾರದ ತಾಳಿ ಮತ್ತು ವಧುವರರಿಗೆ ಮದುವೆಯ ವಸ್ತ್ರಗಳನ್ನು ನೀಡಲಾಗುವುದು ಹಾಗೂ ಎರಡು ಕಡೆಯಿಂದ ಐವತ್ತು ಜನಕ್ಕೆ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ ಹಿಂದೂ ಸಮಾಜದ ಅಂತರ್ಜಾತೀಯ ವಿವಾಹಕ್ಕೆ ಅವಕಾಶ ಇದೆ. ಹಿಂದುಳಿದ ಕುಟುಂಬದ ಮದುವೆಗೆ ಆದ್ಯತೆ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಿಗದಿಯಾಗಿರುತ್ತದೆ ತಮ್ಮ ಆಸುಪಾಸಿನ ಬಡ ಕುಟುಂಬದ ಅವಿವಾಹಿತರಿಗೆ ಈ ಬಗ್ಗೆ ಮಾಹಿತಿ ನೀಡಿ.
ಮಾಹಿತಿಗಾಗಿ ಮಣ್ಣಗುಡ್ಡೆ ಬಲ್ಲಾಳ್ ಭಾಗ್ ಅಶ್ವಿನ್ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಬಿರುವೆರ್ ಕುಡ್ಲ(ರಿ) ಮಹಿಳಾ ವೇದಿಕೆಯ ಕಛೇರಿಯನ್ನು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಸಂಪರ್ಕಿಸಬಹುದು. ಅದೇ ರೀತಿ ಮದುವೆಯಾಗಲಿಚ್ಚಿಸುವವರು ಆಧಾರ್ ಕಾರ್ಡ್ ಪ್ರತಿ, ಗ್ರಾಮ ಪಂಚಾಯತ್ ಧೃಡೀಕರಣ ಪತ್ರ, ಫೋಟೊದೊಂದಿಗೆ ಸಂಪರ್ಕಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.,+918618600953
0 comments: