Thursday, November 16, 2017

ಪೊಳಲಿ ದೇವಿಗೆ ಬಿಲ್ಲವ ಸಮಾಜದ ಸೇವಾ ರೂಪವಾಗಿ ನೂತನ ಧ್ವಜಸ್ತಂಭ ಸಮರ್ಪಣೆ

ಅತೀ ಪುರಾತನ ಐತಿಹಾಸಿಕ ಹಿನ್ನೆಲೆಯಳ್ಳ ಬಂಟ್ವಾಳ ತಾಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ನ.೧೯ ರಂದು ಶ್ರೀ ಕ್ಷೇತ್ರಕ್ಕೆ ಬಿಲ್ಲವ ಸಮಾಜದ ಸೇವಾ ರೂಪವಾಗಿ ನೂತನ ಧ್ವಜಸ್ತಂಭ ಸಮರ್ಪಿಸುವ ನಿಟ್ಟಿನಲ್ಲಿ ಮರಕ್ಕೆ ಮುಹೂರ್ತದ ವಿಧಿವಿಧಾನಗಳು ನಿನ್ನೆ ನಡೆಯಿತು. ಸುಳ್ಯ ತಾಲೂಕಿನ ಸಂಪಾಜೆ ರಕ್ಷಿತಾರಣ್ಯದಲ್ಲಿ ಈಗಾಗಲೇ ಗುರುತಿಸಲಾದ ಮರವನ್ನು ಕತ್ತರಿಸಲು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು. ಮರ ಕಡಿದು ಸಾಗಿಸಲು ಅರಣ್ಯ ಇಲಾಖೆಗೆ ಧ್ವಜಸ್ತಂಭ ನಿರ್ಮಾಣ ಸಮಿತಿ ಶುಲ್ಕ ಪಾವತಿಸಿ ಅನುಮತಿ ಪಡೆದಿದೆ. ಧ್ಜಜ ಸ್ತಂಭಕ್ಕಾಗಿ ಈ ಮರವನ್ನು ನ. ೧೯ ರಂದು ಬೆಳಿಗ್ಗೆ ೯.೩೦ಕ್ಕೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಅದ್ದೂರಿಯಾಗಿ ಮೆರವಣಿಗೆಯಲ್ಲಿ ಪೊಳಲಿ ಕ್ಷೇತ್ರಕ್ಕೆ ಕೊಂಡೊಯ್ಯಲಾಗುತ್ತಿದೆ. ವಿವಿಧ ವಾದ್ಯಗೋಷ್ಟಿ, ಗೊಂಬೆ ಕುಣಿತ, ಹುಲಿವೇಷ ಕುಣಿತ, ಭಜನೆ ಮೆರವಣಿಗೆಗೆ ವಿಶೇಷ ಮೆರುಗು ನೀಡಲಿದೆ. ಸುಮಾರು ಹತ್ತು ಸಾವಿರ ಮಂದಿ ಈ ಸಂದರ್ಭ ಭಾಗವಹಿಸುವ ನಿರೀಕ್ಷೆ ಇದ್ದು, ಸಕಲ ವ್ಯವಸ್ಥೆಯನ್ನು ಸಮಿತಿ ಕೈಗೊಂಡಿದೆ.

ಬಿಲ್ಲವ ಸಮಾಜ ಸೇವಾರೂಪದಲ್ಲಿ ಧ್ವಜಸ್ತಂಭವನ್ನು ನೀಡಲಾಗುತ್ತಿದೆಯಾದರೂ ಸಮಸ್ತ ಹಿಂದೂ ಸಮಾಜ ಈ ಮಹತ್ಕಾರ್ಯದಲ್ಲಿ ಭಾಗವಹಿಸುವಂತೆ ಸಮಿತಿ ಕೋರಿದೆ. ಜಿಲ್ಲೆಯ ವಿವಿಧ ಮಠಗಳಮಠಾಧೀಶರು, ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರು ಹಾಗೂ ಹಲವಾರು ಗಣ್ಯರು ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಮರ ಮುಹೂರ್ತ ಸಂದರ್ಭ ಧ್ವಜಸ್ತಂಭ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ರಾಮದಾಸ ಕೋಟ್ಯಾನ್ ಮಜಿಲಗುತ್ತು, ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್, ಪ್ರ.ಕಾರ್ಯದರ್ಶಿ ಪುರುಷ ಎನ್. ಸಾಲಿಯಾನ್, ಪದಾಧಿಕಾರಿಗಳಾದ ಬಳ್ಳಿ ಚಂದ್ರಶೇಖರ ಕೈಕಂಬ, ಗೋಪಾಲಕೃಷ್ಣ ಕೈಕಂಬ, ನಾರಾಯಣ ಎಂ.ಅಮ್ಮುಂಜೆ, ಯಶವಂತ ಪೊಳಲಿ, ಚಂದಪ್ಪ ಅಂಚನ್ ಮಜಿಲಗುತ್ತು ಗಂಗಾಧರ ಜೆ.ಪೂಜಾರಿ ಕೊಪ್ಪಲ ಮೊದಲಾದವರು ಉಪಸ್ಥಿತರಿದ್ದರು.

0 comments: