Saturday, December 9, 2017

ಕರಾಟೆಗೂ ಸೈ, ಡ್ಯಾನ್ಸ್‌ಗೂ ಸೈ ನಮ್ಮ ಮೇಯರ್ ಕವಿತಾ ಸನಿಲ್

ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಬರೀ ಕರಾಟೆ ಮಾತ್ರ ಕಲಿತಿಲ್ಲ. ಮ್ಯೂಸಿಕ್ ಹಾಕಿದ್ರೆ ಹೆಜ್ಜೆ ಹಾಕುವುದರಲ್ಲಿಯೂ ಇವರು ಪ್ರವೀಣೆ.ಹೌದು, ಮಹಾನಗರ ಪಾಲಿಕೆ ಆಡಳಿತ ಮಂಡಳಿ ಮತ್ತು ನೌಕರರ ಸಂಘಗಳ ಆಶ್ರಯದಲ್ಲಿ ಪುರಭವನದಲ್ಲಿ ಆಯೋಜಿಸಿದ್ದ ಮಹಾನಗರ ಪಾಲಿಕೆ ದಿನಾಚರಣೆಯಲ್ಲಿ ಮೇಯರ್ ಡ್ಯಾನ್ಸ್ ಗಮನ ಸೆಳೆದಿದೆ.

ಉಳ್ಳಾಲ ಶ್ರೀನಿವಾಸ ಮಲ್ಯ ಸ್ಮಾರಕ ಪ್ರಶಸ್ತಿ ಸಮಾರಂಭ ಮತ್ತು ಮಹಾನಗರ ಪಾಲಿಕೆ ದಿನಾಚರಣೆಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ಮಂಗಳೂರು ಮೇಯರ್ ಕೂಡ ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ಮೂಲಕ ಎಲ್ಲರ ಚಿತ್ತ ತನ್ನತ್ತ ಸೆಳೆದುಕೊಂಡಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷೆಯರಾದ ಪ್ರತಿಭಾ ಕುಳಾಯಿ ಹಾಗೂ ಸಬಿತಾ ಮಿಸ್ಕಿತ್ ಮೇಯರ್ ಅವರಿಗೆ ವೇದಿಕೆಯಲ್ಲಿ ಸಾಥ್ ನೀಡಿದರು.

ಮೂಜಿ ಮಲೆ ತೋಜೊಂದುಂಡು ಎನ್ನುವ ತುಳು ಹಾಡಿಗೆ ಮೇಯರ್ ಹೆಜ್ಜೆ ಹಾಕಿದ್ದು, ಈ ನೃತ್ಯಕ್ಕೆ ಕಳೆದ 4-5 ದಿನಗಳಿಂದ ಅಭ್ಯಾಸ ನಡೆಸಿದ್ದರು. ಈಗಾಗಲೇ ಕರಾಟೆಯಲ್ಲಿ ಸೈ ಎನಿಸಿಕೊಂಡಿದ್ದ ಮೇಯರ್ ಕವಿತಾ ಸನಿಲ್, ಇದೀಗ ಹೆಜ್ಜೆ ಹಾಕುವ ಮೂಲಕ ನೃತ್ಯ ಕ್ಷೇತ್ರದಲ್ಲೂ ಕಮ್ಮಿ ಇಲ್ಲ ಅನ್ನೋದನ್ನು ತೋರಿಸಿ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೇ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮೇಯರ್ ನಾಡಗೀತೆ ಕೂಡ ಹಾಡಿದ್ದು, ಎಲ್ಲಾ ಕ್ಷೇತ್ರದಲ್ಲೂ ಛಾಪು ಮೂಡಿಸಿ ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದಾರೆ. via-dajjiworld

0 comments: