Friday, December 29, 2017

ಬಿಲ್ಲವ ಸಮುದಾಯದ ಹಿರಿಯ ನಾಯಕ ಜನಾರ್ಧನ ಪೂಜಾರಿ ಅವರನ್ನು ನಿಂದನೆಗೈದ ರಮಾನಾಥ ರೈ ಗೆ ಬಿಲ್ಲವರು ಯಾವ ರೀತಿ ಬುದ್ದಿ ಕಲಿಸಬಹುದು

ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಜನಾರ್ಧನ ಪೂಜಾರಿಯವರು ತನ್ನ ತಾಯಿ ಹೆಸರು ಹೇಳಿಕೊಂಡು ಗದ್ಗದಿತರಾಗಿದ್ದು, ನನ್ನ ತಾಯಿ ಚೆನ್ನಮ್ಮ. ತಾಯಿಯ ತಾಯಿ ನನ್ನ ಅಜ್ಜಿ ದೇಯಿ ಬೈದೆತಿ. ಅದೇ ರೀತಿ ಕೋಟಿ ಚೆನ್ನಯರ ತಾಯಿಯೂ ದೇಯಿ ಬೈದೆತಿ. ಹಾಗಾದ್ರೆ ರಮಾನಾಥ ರೈ ಹೇಳಿದಂತೆ ನನ್ನ ತಾಯಿ ****, ನಾನು **** ಮಗ ಎಂಬ ಪ್ರಶ್ನೆ ಮುಂದಿಟ್ಟು ಗದ್ಗದಿತರಾಗಿ ಕಣ್ಣೀರಿಟ್ಟಿದ್ದಾರೆ.

ಬಿಲ್ಲವ ಸಮುದಾಯದ ಹಿರಿಯ ನಾಯಕರೊಬ್ಬರು ವೇದಿಕೆಯಲ್ಲಿ ಕಣ್ಣೀರು ಹಾಕಲು ಕಾರಣರಾದ ರಮಾನಾಥ ರೈ ಅವರಿಗೆ ಬಿಲ್ಲವರು ಶಕ್ತಿ ಪ್ರದರ್ಶನ ಮಾಡಿ ಬುದ್ದಿ ಕಲಿಸಬೇಕಿದೆ .ಮುಂಬರುವ ಚುನಾವಣೆಯಲ್ಲಿ ರಮಾನಾಥ್ ರೈ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಬಿಲ್ಲವರೊಬ್ಬರನ್ನು ಕಣಕ್ಕೆ ಇಳಿಸಿ ಬಿಲ್ಲವ ಸಮುದಾಯದ ಶಕ್ತಿ ಪ್ರದರ್ಶನ ಮಾಡಬೇಕಿದೆ .ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಬಹುಸಂಖ್ಯಾತರಾದ ಬಿಲ್ಲವರ ವಿರುದ್ಧ ರಮಾನಾಥ ರೈ ಗೆ ಬಿಲ್ಲವ ಶಕ್ತಿಯ ಅರಿವು ಮೂಡಿಸುವ ದಿನ ಹತ್ತಿರ ಬಂದಿದೆ . ಪಕ್ಷೇತರ ಅಭ್ಯರ್ಥಿ ಯಾಕೆ ? ನಾವು ಬಿಜೆಪಿಯನ್ನು ಬೆಂಬಲಿಸಬಹುದಲ್ಲವೇ ? ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡುತ್ತಿದೆಯೇ ? ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಬಿಲ್ಲವ ಸಮುದಾದಯದ ಬೆನ್ನ ಹಿಂದೆ ಚೂರಿ ಇರಿದಿದೆ ಹೊರತು ಬಿಲ್ಲವರ ಏಳಿಗೆ ಬಯಸಿಲ್ಲ ,ಈ ಬಗ್ಗೆ ಉದಾಹರಣೆಯ ಮೇಲೆ ಉಧಾಹರಣೆ ನೀಡಿ ಸುಸ್ತಾಗಿ ಬಿಟ್ಟಿದೆ,

ರಮಾನಾಥ ರೈ ಈ ರೀತಿಯ ನೀಚ ಹೇಳಿಕೆ ನೀಡಿದ್ದಾರೆ ಎಂಬ ಆಡಿಯೋ ಅಥವಾ ವಿಡಿಯೋ ಈ ವರೆಗೆ ಹರಿಕೃಷ್ಣ ಬಂಟ್ವಾಳ್ ಬಿಡುಗಡೆ ಮಾಡಿಲ್ಲ,ಹರಿಕೃಷ್ಣ ಬಂಟ್ವಾಳ್ ಬಿಜೆಪಿಗೆ ಸೇರಿದ ನಂತರದ ಬೆಳವಣಿಗೆಯಲ್ಲಿ ಈ ಎಲ್ಲ ಬೆಳವಣಿಗೆಗಳು ನಡೆದಿದ್ದು ,ಕಾಲ ಕಾಲಕ್ಕೆ ಬದಲಾಗುವ ಹರಿಕೃಷ್ಣ ಬಂಟ್ವಾಳ್ ಅವರ ತತ್ವ ಸಿದ್ಧಾಂತದಿಂದ ರಾಜಕೀಯದಲ್ಲಿ ದಿಕ್ಕು ದಿಶೆ ಇಲ್ಲದೆ ಕಂಗಾಲಾದ ಇವರಿಗೆ ಬಿಲ್ಲವ ಸಮುದಾಯದ ನೆನಪಾಗಿದೆ .ಗೆಜ್ಜೆ ಗಿರಿಯಲ್ಲಿ ವಿನೋದ್ ಅಲ್ವ ಜೊತೆ ಇವರು ಮಾಡಿದ ನಾಟಕಗಳು ನಾವು ಮರೆತಿಲ್ಲ ,ರಾಜಕೀಯ ಸ್ವಾರ್ಥ ಸಾಧನೆಗೆ ಮಾತ್ರ ಇವರಿಗೆ ಬಿಲ್ಲವ ಸಮುದಾಯದ ನೆನಪು ಆಗುತ್ತದೆ.

ಬಂಟ್ವಾಳ ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜೇಶ್ ನಾಯ್ಕ್ ಉಳಿಪಾಡಿ ರಾಜಕೀಯ ದಾಳವಾಗಿ ಹರಿಕೃಷ್ಣ ಬಂಟ್ವಾಳ್ ಬಳಕೆಯಾಗುತ್ತಿದ್ದಾರೆಯೇ ಎಂಬ ಶಂಕೆ ನಮ್ಮಲ್ಲಿ ಕಾಡುತ್ತದೆ .ಕಳೆದ ಲೋಕ ಸಭಾ ಚುನಾವಣೆಯಲ್ಲಿ ರುಕ್ಮಯ ಪೂಜಾರಿ ಅವರನ್ನು ಬಿಲ್ಲವ ನಾಯಕನನ್ನಾಗಿ ಮುಂದಿಟ್ಟು ನಂತರ ಮೂಲೆ ಗುಂಪು ಮಾಡಿದ ಪರಿಸ್ಥಿತಿ ಹರಿಕೃಷ್ಣ ಬಂಟ್ವಾಳ ಅವರಿಗೆ ಬರಬಾರದು ಎಂಬ ನಮ್ಮ ಆಶಯ .ಕಳೆದ ಲೋಕ ಸಭಾ ಚುನಾವಣೆಯಲ್ಲಿ ಜನಾರ್ಧನ ಪೂಜಾರಿ ಕೇಸರಿ ವಿರೋಧಿ ಅವರೊಬ್ಬ ಬ್ಯಾರಿ ಇನ್ನೇನೋ ಅವಹೇಳನ ಗೈದ ಕೆಲ ದುಷ್ಟ ಆತ್ಮಗಳು ಇಂದು ಜನಾರ್ಧನ ಪೂಜಾರಿ ಅವರ ಕಣ್ಣೀರನ್ನು ಒಂದು ಪಕ್ಷದ ವೋಟ್ ಬ್ಯಾಂಕ್ ಆಗಿ ಬಳಸಲು ಸಿದ್ಧತೆ ನಡೆಸುತ್ತಿದೆ .ನಾಚಿಗೆಯಾಗಬೇಕು ಅಂತ ದುಷ್ಟ ಆತ್ಮಗಳಿಗೆ , ಆದರೂ ನಾವು ನಮ್ಮ ಹಿರಿಯರಾದ ಜನಾರ್ಧನ ಪೂಜಾರಿ ಅವರ ಮಾತನ್ನು ನಾವು ಒಪ್ಪಿಕೊಳ್ಳುತೇವೆ,ಅವರಿಗೆ ಮಾಡಿದ ನಿಂದನೆ ಇಡೀ ಬಿಲ್ಲವ ಸಮುದಾಯಕ್ಕೆ ಮಾಡಿದ ನಿಂದನೆಗೆ ಸಮ ,

ಆ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಬಿಲ್ಲವರು ಜನಾರ್ಧನ ಪೂಜಾರಿ ಅವರ ಮಾರ್ಗ ದರ್ಶನದಲ್ಲಿ ರಮಾನಾಥ ರೈ ವಿರುದ್ಧ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ರಮಾನಾಥ ರೈಗೆ ಸೂಕ್ತ ಬುದ್ದಿ ಕಲಿಸೋಣ

0 comments: