Friday, January 26, 2018

ಬಿಸಿ ರಕ್ತದ ಬಿಲ್ಲವ ಯುವಕರೇ 2012 ರ ಉಡುಪಿ ಚಿಕ್ಕಮಂಗಳೂರು ಲೋಕಸಭಾ ಉಪಚುನಾವಣೆಯ ಅವಲೋಕನ ಮಾಡೋಣ ಬನ್ನಿ

ಉಡುಪಿಯಲ್ಲಿ ನಡೆದ ಆ ಜಾತಿರಾಜಕೀಯವನ್ನು ಬಿಲ್ಲವರು ಎಂದು ಮರೆಯಲು ಸಾಧ್ಯವಿಲ್ಲ. ಯಾಕೆ 2012 ಉಡುಪಿ ಚಿಕ್ಕಮಂಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಹಿಂದುತ್ವವಾದಿ ನಾಯಕನಿಗೆ ಸೋಲಾಯಿತು .ಈಗೀನ ಬಿಸಿ ರಕ್ತದ ಹುಡುಗರಿಗೆ ಬಹುಷಃ ಗೊತ್ತಿಲ್ಲ.ಯಾಕೆ ಹಿಂದುತ್ವದ ಭದ್ರಕೋಟೆಯಲ್ಲಿ ಬಿಜೆಪಿಯ ಕಟ್ಟರ್ ಹಿಂದುತ್ವವಾದಿ ನಾಯಕನಿಗೆ ಸೋಲಾಯಿತು ಎಂಬುದನ್ನು ಈಗಿನ ಬಿಸಿ ರಕ್ತದ ಬಿಲ್ಲವ ಯುವಕರು ಯೋಚಿಸಬೇಕು.

ಉಡುಪಿ ಲೋಕಸಭಾ ಚುನಾವಣೆಯಲ್ಲಿ ಮನೋರಮ ಮದ್ವರಾಜ್ ಭರ್ಜರಿ ಗೆಲುವು ಸಾಧಿಸುತ್ತಾರೆ .ಸದಾನಂದ ಗೌಡ ಗೆಲುವು ಸಾಧಿಸುತ್ತಾರೆ .. ಶೋಭಾ ಕರದ್ಲಾಜೆಯವರು ಬಾರಿ ಅಂತರದಲ್ಲಿ ಗೆಲುವನ್ನು ಸಾಧಿಸುತ್ತಾರೆ. ಯಾರೇ ನಿಂತರೂ ಬಿಜೆಪಿ ಜಯಭೇರಿ ಬಾರಿಸುತಿತ್ತು. ಅದರೆ ಬಿಲ್ಲವ ಸಮುದಾಯದ ಕಟ್ಟರ್ ಹಿಂದುತ್ವವಾದಿ ನಿಂತಾಗ ಜಾತಿ ರಾಜಕೀಯ ಆಟ ಬಾರಿ ಜೋರಾಗಿ ನಡೆದು ಬಿಜೆಪಿಯನ್ನು ಸೋಲಿಸಿತ್ತು.

ಹಿಂದುತ್ವದ ಭದ್ರಕೋಟೆ ಜಾತಿ ರಾಜಕೀಯಕ್ಕೆ ಬಲಿಯಾಗಿತ್ತು. ಅಂದು ಸುನೀಲ್ ಕುಮಾರ್ ಕಂಡ ಸೋಲನ್ನು ಬಿಲ್ಲವ ಸಮಾಜ ಮರೆಯಲು ಸಾದ್ಯವೇ... ಯಾಕೆ ಸೋತರು??? ಹೇಗೆ ಸೋತರು??? .ಬೇರೆ ಜಾತಿಯ ಬಿಸಿ ರಕ್ತದ ಕಟ್ಟರ್ ಹಿಂದುಗಳು ಯಾಕೆ ಜಾತಿ ನೋಡಿ ಕಾಂಗ್ರೇಸ್ ಗೇ ಮತ ಹಾಕಿದರು.???

ಬೇರೆಯವರು ಜಾತಿ ನೋಡಿ ಮತ ಹಾಕುವಾಗ ಬಿಲ್ಲವರು ಮಾತ್ರ ಹಿಂದುತ್ವ ಎಂದು ಮತ ಹಾಕಬೇಕೆ?? ಯಾಕೆ ಬಿಲ್ಲವರನ್ನು ರಾಜಕೀಯವಾಗಿ ತುಳಿಯುತ್ತಿದ್ದಾರೆ. ? ಯಾಕೆ ಬಿಲ್ಲವನಿಗೆ ಜಿಲ್ಲಾದ್ಯಕ್ಷ ಸ್ಥಾನ ಸಿಗದಂತೆ ಮಾಡುತ್ತಾರೆ. ? ಯಾಕೆ ಬಿಜೆಪಿಯಲ್ಲಿರುವ ಬಿಲ್ಲವ ನಾಯಕನಿಗೆ ಪರಿವರ್ತನಾ ಯಾತ್ರೆಯಲ್ಲಿ ಟಿಕೇಟ್ ಘೋಷಣೆಯಾಗುವುದಿಲ್ಲ. ? ಮೂಡಬಿದ್ರೆಯಲ್ಲಿ ಜೆಡಿಎಸ್ ಗೇ ಅಷ್ಟು ಮತ ಎಲ್ಲಿಂದ ಬಿತ್ತು. ಕೇಂದ್ರೀಯ ನಿಗಮ ಮಂಡಲಿ ಪದಾಧಿಕಾರಿ ಆಯ್ಕೆ ಜಾತಿ ಆದಾರದಲ್ಲಿಯೆ ಮಾಡುವುದೇ?? ಯಾಕೆ ಬಿಲ್ಲವ ಸಮುದಾಯದ ವ್ಯಕ್ತಿ ಸಂಸದನಾಗುವುದಿಲ್ಲ. ಎಲ್ಲವನ್ನೂ ಈಗಿನ ಬಿಸಿ ರಕ್ತದ ಬಿಲ್ಲವ ಯುವಕರು ಯೋಚಿಸಬೇಕಾಗಿದೆ.

ಇಲ್ಲಿಯವರೆಗಿನ ರಾಜಕೀಯ ಫಲಿತಾಂಶವನ್ನು ಅವಲೋಕನ ಮಾಡಿ ಬಿಲ್ಲವರು ಈ ಬಾರಿ ಅಭಿಮಾನವನ್ನು ಬದಿಗಿರಿಸಿ,ವಾಸ್ತವ ಸ್ಥಿತಿಯ ಮೇಲೆ ತಂತ್ರಗಾರಿಕೆಯನ್ನು ಪ್ರಯೋಗಿಸಿ ರಾಜಕೀಯವನ್ನು ಗೆಲ್ಲಬೇಕಿದೆ.

1 comment: