Monday, January 15, 2018

ದಕ್ಷಿಣ ಕನ್ನಡದಲ್ಲಿ ಕನಿಷ್ಠ 3 ಸ್ಥಾನ :ಬೇಡಿಕೆಗೆ ಬಿಲ್ಲವರು ಸಜ್ಜು

ರಾಜಕೀಯವಾಗಿ ಜಾತಿ ಲೆಕ್ಕಾಚಾರ ವರಿಷ್ಠರ ಗಮನಕ್ಕೆ ತರಲು ಬಿಲ್ಲವ ಮುಖಂಡರ ನಿರ್ಧಾರ ಗೌಪ್ಯವಾಗಿ ನಡೆಯುತ್ತಿದೆ ಸಭೆ ಚುನಾವಣೆಗೆ ಪೂರಕವಾಗಿ ರಾಜಕೀಯ ಪಕ್ಷಗಳು ಜಾತಿ ಸಂಘಟನೆಗಳು ಚುರುಕಾಗಿವೆ.ಜಾತಿ ಆಧಾರಿತದಲ್ಲಿ ಟಿಕೆಟ್ ಕೋಟಾದ ಬಗ್ಗೂ ಅಹವಾಲು ಸಲ್ಲಿಕೆ ಆರಂಭವಾಗಿದೆ.

ಜಾತಿ ಲೆಕ್ಕಾಚಾರದಲ್ಲಿ ದ.ಕ. ಜಿಲ್ಲೆಯಲ್ಲಿ ಅಧಿಕ ಬಿಲ್ಲವ ಮತದಾರರಿದ್ದಾರೆ ರಾಷ್ಟೀಯ ಪಕ್ಷಗಳು ತಲಾ ಮೂರು ಸ್ಥಾನಗಳನ್ನು ನೀಡಬೇಕೆಂದು ಮುಂಬೈ ಮತ್ತು ದ.ಕ.ಜಿಲ್ಲೆಯ ಬಿಲ್ಲವರು ಒಟ್ಟು ಸೇರಿ ಪಕ್ಷಗಳ ದುಂಬಾಲು ಬಿದ್ದಿದ್ದಾರೆ.ಬೇಡಿಕೆ ಸಲ್ಲಿಸಲು ನಿರ್ಧರಿಸಿದ್ದಾರೆ.ಬಿಜೆಪಿಯಿಂದ ರುಕ್ಮಯ ಪೂಜಾರಿ,ಉಮಾನಾಥ ಕೋಟ್ಯಾನ್,ಹರಿಕೃಷ್ಣ ಬಂಟ್ವಾಳ್,ಸತ್ಯಜಿತ್ ಸುರತ್ಕಲ್,ಸತೀಶ್ ಕುಂಪಲ ಹಾಗೂ ಕಾಂಗ್ರೆಸ್ಸ್ನಿಂದ ವಸಂತ್ ಬಂಗೇರ,ಮೇಯರ್ ಕವಿತಾ ಸನಿಲ್,ಡಿ.ಸಿ.ಸಿ ಅಧ್ಯಕ್ಷ,ಬಿಲ್ಲವ ಮುಖಂಡ ಹರೀಶ್ ಕುಮಾರ್ ಹೆಸರು ಪ್ರಸ್ತಾಪಿಸಲಾಗುತ್ತಿದೆ.

ಬಿಲ್ಲವರೇ ಬಹುಪಾಲು:ದ.ಕ.ಜಿಲ್ಲೆಯ ಒಟ್ಟು ಎಂಟು ಕ್ಷೇತ್ರಗಳಲ್ಲಿ ಪುತ್ತೂರು,ಸುಳ್ಯ ಹೊರತುಪಡಿಸಿದರೆ ಮಂಗಳೂರು ಉತ್ತರ ಮಂಗಳೂರು ದಕ್ಷಿಣ,ಮೂಡಬಿದ್ರೆ,ಬೆಳ್ತಂಗಡಿ,ಬಂಟ್ವಾಳದಲ್ಲಿ ಬಿಲ್ಲವ ಮತಗಳೇ ಅಧಿಕವಾಗಿವೆ.

ಯಾವ ಕ್ಷೇತ್ರಕ್ಕೆ ಬೇಡಿಕೆ :ದ.ಕ.ಜಿಲ್ಲೆಯ ಬಂಟ್ವಾಳ,ಮೂಡಬಿದ್ರೆ,ಮತ್ತು ಬೆಳ್ತಂಗಡಿ ಕ್ಷೇತ್ರಕ್ಕೆ ಬಿಜೆಪಿ ಕೊಡಬೇಕು.ಬೆಳ್ತಂಗಡಿ,ಪುತ್ತೂರು,ಮಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ ಕೊಡಬೇಕು ಎಂಬ ಆಗ್ರಹವನ್ನು ಬಿಲ್ಲವ ಮುಖಂಡರು ವ್ಯಕ್ತಪಡಿಸಲಿದ್ದಾರೆಂದು ತಿಳಿದು ಬಂದಿದೆ.

ಲೋಕಸಭೆಗೆ ಬಿಲ್ಲವರಿಗೆ ಪ್ರಾತಿನಿಧ್ಯ?:ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಗಳೂರಿನಿಂದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಥವಾ ಪ್ರಕಾಶ್ ರೈ ಅವರು ಅಖಾಡಕ್ಕೆ ಇಳಿಸುವ ಯೋಜನೆ ಕಾಂಗ್ರೆಸ್ಸಿನದು.ಆದರೆ ಇನ್ನೊಂದು ಲೆಕ್ಕಾಚಾರ ಪ್ರಕಾರ ವಿಧಾನಸಭೆ ಚುನಾವಣೆಯಲ್ಲಿ ಬಿಲ್ಲವರಿಗೆ ಕಾಂಗ್ರೆಸ್ಸ್ನಿಂದ ಒಂದು ಅಥವಾ ೨ ಸೀಟುಗಳನ್ನು ನೀಡಿ,ಲೋಕಸಭೆಗೆ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್,ವಸಂತ್ ಬಂಗೇರ,ಅವರನ್ನೇ ಆಯ್ಕೆ ಮಾಡುವ ಲೆಕ್ಕಾಚಾರವೂ ಇದೆ.ಈ ಮದ್ಯೆ ಚಿತ್ರನಟ ರಾಜಶೇಖರ್ ಕೋಟ್ಯಾನ್ ಕೂಡ ಪ್ರಯತ್ನ ಮಾಡುತ್ತಿದ್ದಾರೆ.

ಜಯ ಸಿ ಸುವರ್ಣ ಅಭಿಪ್ರಾಯವೇನು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ೧೯೮೫ ರಲ್ಲಿ ೬ ಬಿಲ್ಲವ ಶಾಸಕರಿದ್ದರು .ಎರಡು ಜಿಲ್ಲೆಯಲ್ಲಿ ರಾಷ್ಟೀಯ ಪಕ್ಷಗಳು ಬಿಲ್ಲವರನ್ನು ಬಳಸಿಕೊಳ್ಳುತ್ತಿದೆಯೇ ಹೊರತು ಅಧಿಕಾರ ವಿಷಯದಲ್ಲಿ ಕಡೆಗಣಿಸುತಿವೆ .ಕನಿಷ್ಠ ೩ ಕ್ಷೇತ್ರಗಳಲ್ಲಿ ಎರಡು ಪಕ್ಷಗಳು ಪ್ರಾತಿನಿಧ್ಯ ನೀಡಬೇಕು.

ಉಭಯ ಜಿಲ್ಲೆಯಲ್ಲಿ ೬ ಶಾಸಕರಿದ್ದರು ೧೯೮೫ ರ ಅವಧಿಯಲ್ಲಿ ಉಭಯ ಜಿಲ್ಲೆಗಳಲ್ಲಿ ಬಸವರಾಜು (ಬ್ರಹ್ಮಾವರ) ವಸಂತ್ ಸಾಲಿಯಾನ್ ಕಾಪು ) ಸೋಮಪ್ಪ ಸುವರ್ಣ ( ಮುಲ್ಕಿ ) ವಿನಯ್ ಕುಮಾರ್ ಸೊರಕೆ ( ಪುತ್ತೂರು ) ರುಕ್ಕಯ್ಯ ಪೂಜಾರಿ ( ವಿಟ್ಲ ) ವಸಂತ್ ಪೂಜಾರಿ ( ಬೆಳ್ತಂಗಡಿ ) ಶಾಸಕರಾಗಿದ್ದರು . -ವಿಜಯಕರ್ನಾಟಕ

0 comments: