Tuesday, January 16, 2018

ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದ ಮಹಿಮೆ ,ಗೆಜ್ಜೆಗಿರಿ ಕ್ಷೇತ್ರದಲ್ಲಿ ಶಿಲಾನ್ಯಾಸದ ಹಿಂದಿನ ದಿನದಲ್ಲಿ ನಡೆದ ಸತ್ಯ ಘಟನೆ

ಗೆಜ್ಜೆಗಿರಿಯ ತುತ್ತ ತುದಿಯ ಶಿಖರಾಗ್ರದಲ್ಲಿ ಗರೋಡಿ ನಿರ್ಮಾಣ, ಬೆರ್ಮೆರೆ ಗುಂಡದ ಶಿಲಾನ್ಯಾಸಕ್ಕೆ ಪೂರಕವಾಗಿ ಕ್ಷೇತ್ರದ ಜಾಗವನ್ನು ಸಮತಟ್ಟು ಮಾಡುವ ಕೆಲಸ ಕಾರ್ಯವು ಸುಮಾರು ಒಂದು ತಿಂಗಳಿನಿಂದ್ದ ಭರದಿಂದ್ದ ಸಾಗುತಿತ್ತು. ಹೀಗೆ ಜೆಸಿಬಿಯಿಂದ್ದ ಸಮತಟ್ಟು ಮಾಡುವ ಕೆಲಸ ಕಾರ್ಯವು ಮುಂದುವರಿಸುತ್ತ ಹೋದಂತ್ತೆ "ಎರಡು ಜೋಡಿ ಬಿಳಿ ಕೊಕ್ಕರೆ (ಕೊರುಂಗು) ಯು ಸಂಜೆಯ ಹೊತ್ತಿಗೆ ದಿನಾಲು ಜೆಸಿಬಿ ಯ ಮೇಲೆ ಕುಳಿತು ಸ್ಥಳಗಳನ್ನು ವೀಕ್ಷಣೆ ಮಾಡುತ್ತ ಒಟ್ಟಿಗೆ ಹೋಗುತ್ತಿದ್ದವು.

ಕೊಕ್ಕರೆಯು ದಿನಾಲು ಬರುವುದನ್ನು ಗಮನಿಸುತ್ತಿದ್ದ ಜೆಸಿಬಿ ಮತ್ತು ಟಿಪ್ಪರಿನ ಡ್ರೈವರ್ ಇದು ಸಮಾನ್ಯ ಕೊಕ್ಕರೆ ಆಗಿರಬಹುದು ಅಂತ ಹೇಳಿ ತಮ್ಮಷ್ಟಕ್ಕೆ ತಾವು ಸಮತಟ್ಟು ಮಾಡುವ ಕೆಲಸದಲ್ಲಿ ಮಗ್ನರಾಗಿರುತ್ತಿದ್ದರು. ಹೀಗೆ ದಿನಗಳು ಕಳೆದಂತ್ತೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಒಂದೇ ವಾರ ಬಾಕಿ ಇರುವಂತ್ತೆ ಜೋಡಿ ಕೊಕ್ಕರೆಯು ಸಂಜೆಯ ಹೊತ್ತಿಗೆ ಸರಿಯಾದ ಸಮಯಕ್ಕೆ ಬಂದು ಜೆಸಿಬಿಯಲ್ಲಿ ಕುಳಿತು ಸ್ಥಳಗಳನ್ನು ವೀಕ್ಷಣೆ ಮಾಡಿ ಹೋಗುವುದನ್ನು ಪುನಃ ಗಮನಿಸಿದ ಜೆಸಿಬಿ ಮತ್ತು ಟಿಪ್ಪರಿನ ಡ್ರೈವರ್ ಸಂಜೆಯ ಹೊತ್ತಿಗೆ ಕುಳಿತು ಇವರಿಗೆ ಆಶ್ಚರ್ಯವಾಯಿತು ಸಮಾನ್ಯ ಕೊಕ್ಕರೆಗಳು ಸಮತಟ್ಟು ಮಾಡಿದ ಜಾಗದಲ್ಲಿ ಕ್ರಿಮಿಕೀಟಗಳನ್ನು ತಿನ್ನುವುದು ಸರ್ವೆ ಸಾಮಾನ್ಯ ಆದರೆ ಗೆಜ್ಜೆಗಿರಿಯ ಶಿಖರಾಗ್ರಕ್ಕೆ ಬಂದಂತಹ ಜೋಡಿ ಕೊಕ್ಕರೆಯು ಏನನ್ನೂ ತಿನ್ನುತ್ತಿರಲಿಲ್ಲ. ಎಂದು ಹೇಳುತ್ತ ನಾವು ಇಷ್ಟು ಎತ್ತರದ ಜಾಗದಲ್ಲಿ ಉರಿ ಬಿಸಿಲಿನಲ್ಲಿ ಬೆಳಿಗ್ಗೆಯಿಂದ್ದ ಸಂಜೆಯವರೆಗೂ ಕೆಲಸ ಮಾಡಿದರೂ ಧನಿವು (ಆಯಾಸ) ಆಗುವುದಿಲ್ಲ ಈ ಜಾಗ ತುಂಭಾ ವಿಶೇಷವಾಗಿದೆ ಅವರೊಳಗೆ ಮಾತನಾಡ ತೊಡಗಿದರು.

ಸಮತಟ್ಟು ಮಾಡುವ ಜಾಗದ ಸಮೀಪದಲ್ಲಿ ಕಣ್ಣು ಹಾಯಿಸಿದರೆ ಕಾಣಸಿಗುವುದು ವಿಶೇಷವಾದ ಬಿಳಿ ಕುಂಟಳ ಮರ (ಬೊಲ್ದು ಕುಂಟಳ ಮರ) ಹೀಗೆ ಜೋಡಿ ಕೊಕ್ಕರೆಯು ನಿರಂತರವಾಗಿ ಸಂಜೆಯ ಹೊತ್ತಿಗೆ ಗೆಜ್ಜೆಗಿರಿಯ ಶಿಖರಾಗ್ರಕ್ಕೆ ಬಂದು ಹೋಗುತ್ತಿದ್ದವು. ಎರಡು ಜೋಡಿ ಕೊಕ್ಕರೆಗಳು ಸಂಜೆಯ ಹೊತ್ತಿಗೆ ಬಂದು ಹೋಗುವುದು ಇದು ಸಾಮಾನ್ಯದ ಕೊಕ್ಕರೆ ಅಲ್ಲ ಎಂಬುವುದು ಜೆಸಿಬಿ ಮತ್ತು ಟಿಪ್ಪರ್ ನ ಡ್ರೈವರ್ ಗೆ ಮನವರಿಕೆ ಆಯಿತು. ಕೃಷ್ಣಪ್ಪ ಅಮೀನ್ ವಿವರವಾಗಿ ತಿಳಿಸಿದರು.

ಶಿಲಾನ್ಯಾಸದ ಮುಂದಿನ ದಿನ ಅಂದರೆ ಫೆ 18 ರಂದ್ದು ಸಂಜೆ ನಾನು ಮತ್ತು ರಾಜೇಂದ್ರ ಚಿಲಿಂಬಿ ಇವರೊಟ್ಟಿಗೆ ಚಪ್ಪರದ ಕೆಳಗೆ ಕುಳಿತು ಕೊಂಡು ಧಾಮೋದರ ಕಲ್ಮಾಡಿಯವರ ಲೇಖನವನ್ನು ನಾನು ಬರೆಯುತ್ತಿದ್ದೆ. ನಾವು ಇದ್ದ ಸ್ಥಳಕ್ಕೆ ಪ್ರವೀಣ್ ಅಂಚನ್ ಬಂದು ಪ್ರಶಾಂತೆರೆ ಇತ್ತೆ ಒಂಜಿ ಅಚಾತುರ್ಯ ಘಟನೆ ನಡತ್ಂಡ್ ಮಾರ್ರೆ ಮಿತ್ತ್ ಡ್ ತಟ್ಟ್ ಲೆವೇಲ್ ಮಲ್ಪುನ ಸೈಡ್ ಡ್ ಜಾರ್ದ್ ಜೆಸಿಬಿ ನೇಲೊಂದು ಇತ್ತ್ಂಡ್ 150 ಮೀಟರ್ ಗುಂಡಿಗ್ ಡ್ರೈವರ್ ಲ ಜೆಸಿಬಿ ಲ ಒಟ್ಟುಗು ಬೂರ್ದುವೆರ್ ಮಾರ್ರೆ ದಾನೆನ ಬೈದೆರ್ಲೆನ ಶಕ್ತಿಡ್ ದಾಲ ಆಯಿಜಿ ಮಾರ್ರೆ ಅಂತ ನಡೆದ ಘಟನೆಯನ್ನು ಹೇಳಿಕೊಂಡರು. ಹೀಗೆ ಲೇಖನವನ್ನು ಮುಕ್ತಯಗೊಳಿಸಿದ ನಾನು ಮೇಲುಗಡೆ ಇರುವಂತಹ ಗೆಜ್ಜೆಗಿರಿಯ ಶಿಖರಾಗ್ರಕ್ಕೆ ಹೋಗಿ ಜೆಸಿಬಿ ಯ ಡ್ರೈವರನ್ನು ವಿಚಾರಿಸಿದೆ ಹೀಗೆ ನಡೆದ ಘಟನೆಯನ್ನು ವಿವರವಾಗಿ ಹೇಳಿದ ಜೆಸಿಬಿಯ ಡ್ರೈವರ್ ಕೊನೆಗೆ ಹೇಳುತ್ತಾರೆ ನಾನು ಮತ್ತು ಜೆಸಿಬಿ ಕೆಳಗಡೆ ಬಿದ್ದೆವು ಎನ್ನುವಷ್ಟರಲ್ಲಿ ಯಾವುದೇ ಬ್ರೆಕ್ ಗೇರು ಒತ್ತದೆ ಜೆಸಿಬಿಯು ತನ್ನಷ್ಟಕ್ಕೆ ಇದ್ದ ಜಾಗಕ್ಕೆ ಬಂದು ನಿಂತ್ತಿತು.

ಜೆಸಿಬಿ ಯು ಇದ್ದ ಜಾಗಕ್ಕೆ ಬಂದು ನಿಲ್ಲುವುದಕ್ಕೆ ಗೆಜ್ಜೆಗಿರಿ ಕ್ಷೇತ್ರದ ಸರ್ವ ಶಕ್ತಿಗಳ ಪವಾಡ ಕೋಟಿ-ಚೆನ್ನಯರ ಮಹಿಮೆಯಿಂದ್ದ ಹೊರತು ನನ್ನಿಂದ್ದ ಅಲ್ಲ ಅಂತ ಜೆಸಿಬಿಯ ಡ್ರೈವರ್ ಹೇಳುತ್ತಾರೆ.

ಗೆಜ್ಜೆಗಿರಿ ಕ್ಷೇತ್ರಕ್ಕೆ ಭಕ್ತಿಯಿಂದ್ದ ಬರುವಂತಹ ಭಕ್ತರು ಗೆಜ್ಜೆಗಿರಿಯ ಮೇಲಿನ ಶಿಖರಾಗ್ರದಲ್ಲಿ ಇರುವಂತಹ ಬಿಳಿ ಕುಂಟಳ ಮರದ ಕೆಳಗಡೆ ನಿಂತಾಗ ಆಗುವಂತಹ ಅನುಭವ, ಮಾತೆ ದೇಯಿ ಬೈದ್ಯೆತಿ ಸಮಾಧಿ ಸ್ಥಳದಲ್ಲಿ ನಿಂತಾಗ ಆಗುವಂತಹ ಅನುಭವ, ಆದಿ ಧರ್ಮದೈವ ಧೂಮಾವತಿ ದೈವಸ್ಥಾನದ ಎದುರು ನಿಂತಾಗ ಆಗುವಂತಹ ಅನುಭವಗಳನ್ನು ಅದೆಷ್ಟೊ ಭಕ್ತರು ಹೇಳಿಕೊಂಡಿದ್ದಾರೆ. ಹೀಗೆ ಗೆಜ್ಜೆಗಿರಿ ಕ್ಷೇತ್ರದ ಸರ್ವ ಶಕ್ತಿಗಳಿಂದ್ದ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರವು ಮಹಿಮೆಯ ಕಲೆ ಕಾರಣಿಕದ ಕ್ಷೇತ್ರವಾಗಿ ಬೆಳಗುತ್ತಿದೆ. ಸ್ವಾಮಿ ಬ್ರಹ್ಮ ಬೈದೆರ್ಲೆ ಬರಹ:- ಪ್ರಶಾಂತ್ ಪೂಜಾರಿ ಮಸ್ಕತ್

1 comment: