ಕುಂದಾಪುರ : ತುಳುನಾಡಿನ ಆರಾಧ್ಯ ದೈವ ಕೋಟಿ ಚೆನ್ನಯರ ಭಾವ ಚಿತ್ರವನ್ನು ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿರುವುದಕ್ಕೆ ಉಡುಪಿ ಜಿಲ್ಲಾ ಬ್ರಹ್ಮ ಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘ ವಿರೋಧ ವ್ಯಕ್ತಪಡಿಸಿದ್ದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.
ಅವಳಿ ವೀರರಾದ ಕೋಟಿ ಚೆನ್ನಯರ ಭಾವಚಿತ್ರವನ್ನು ಪುತ್ತೂರು ಬಿಜೆಪಿ ಘಟಕವು ಬಿಜೆಪಿ ರಾಜಕೀಯ ನಾಯಕರುಗಳ ಜತೆಗೆ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡು ಅಗೌರವ ತೋರಿರುವುದು ಖಂಡನೀಯ .ವೋಟಿಗಾಗಿ ಬಿಲ್ಲವರ ಆರಾಧ್ಯ ದೈವಗಳಾದ ಅವಳಿ ವೀರರ ಚಿತ್ರಗಳನ್ನು ಯಾವುದೇ ರಾಜಕೀಯ ಪಕ್ಷಗಳು ಉಪಯೋಗಿಸಿಕೊಳ್ಳುವುದನ್ನು ಬ್ರಹ್ಮ ಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘ ಸಹಿಸಲಾರದು.ಬಿಜೆಪಿ ಪಕ್ಷವು ಮಾಡಿದ ಈ ದುರುದ್ದೇಶಪೂರಿತ ತಪ್ಪಿಗೆ ಈ ಕೂಡಲೇ ಕ್ಷಮೆ ಯಾಚಿಸದಿದ್ದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಬ್ರಹ್ಮ ಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘದ ಅಧ್ಯಕ್ಷ ಮಹೇಶ್ ಪೂಜಾರಿ ಬಡಾಕೆರೆ ತಿಳಿಸಿದ್ದಾರೆ.
0 comments: