Monday, January 1, 2018

ಬಿಸಿ ರಕ್ತದ ಬಿಲ್ಲವ ಯುವಕರೇ ಒಮ್ಮೆ ಯೋಚಿಸಿ

ಪ್ರೀತಿಯ ಬಿಲ್ಲವ ಸ್ನೇಹಿತರೆ, ಬಿಲ್ಲವರು ಎಲ್ಲವನ್ನೂ ಬಲ್ಲವರು ಶಕ್ತಿವಂತರು ಧೈರ್ಯವಂತರು ಎನ್ನುವ ನಾಲ್ನುಡಿ ಇದೆ. ನಾವು ಎಲ್ಲವನ್ನೂ ಬಲ್ಲವರೆ ಆದರೆ ನಮ್ಮ ಹೃದಯದಲ್ಲಿರೊ ನಂಬಿಕೆ ಪ್ರೀತಿ ಕೆಲವು ಸಲ ಗೊತ್ತಿಲ್ಲದೆ ನಮ್ಮಿಂದ ತಪ್ಪುಗಳು ನಡೆಸುತ್ತದೆ. ಕಾರಣ ನಾವು ಮತ್ತೊಬ್ಬರಲ್ಲಿ ಇಡುವಂತ ನಂಬಿಕೆ. ಆ ನಂಬಿಕೆಯೇ ಕೆಲವರು ನಮ್ಮನ್ನು ದುರುಪಯೊಗಪಡಿಸಿಕೊಳ್ಳುತ್ತಾರೆ . ಒಬ್ಬ ಒಂದು ಕೆಲಸವನ್ನು ಅಥವಾ ಒಂದು ವಿಷಯವನ್ನು ಹೇಳುವಾಗ ನಾವು ಯೋಚನೆ ಮಾಡದೆ ಮುನ್ನುಗ್ಗುತ್ತೆವೆ .ಇದರಿಂದ ಅಪಾರ ನಷ್ಟ ಮಾನಹಾನಿ, ಜೀವಹಾನಿ, ಜೈಲು ಶಿಕ್ಷೆ ಅನುಭವಿಸಬೆಕಾಗುತ್ತದೆ. ದೇಶದ ಎಷ್ಟೋ ಜೈಲುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ನಮ್ಮ ಬಿಲ್ಲವರೆ ಇರುವುದಾಗಿ ಜನ ಸಂಖ್ಯಾ ಸಮೀಕ್ಷೆಯಲ್ಲಿ ತಿಳಿದು ಬಂದಿದೆ .ಕಾರಣ ನಮ್ಮ ವಿಶಾಲವಾದ ಮನಸ್ಸು. ಕೆಟ್ಟದ್ದು ಯಾವುದು ನಮ್ಮ ಗಮನಕ್ಕೆಬರುವುದಿಲ್ಲ, ಬೆಳ್ಳಗೆ ಇರುವುದನ್ನು ಹಾಲು ಎನ್ನುವುದು ನಮ್ಮ ಮೂರ್ಕತನ. ಸ್ನೇಹಿತರೆ ನಾವು ಇನ್ನೂ ಎಚ್ಚೆತ್ತುಕೊಳ್ಳೋಣ ನಮ್ಮ ಬಿಲ್ಲವ ಜನಾಂಗವೇ ಅಲಿವು ಉಳಿವಿನ ಅಂಚಿನಲ್ಲಿದೆ. ಕರಾವಳಿಯ ಭಾಗದ ಇತಿಹಾಸ ತೆಗೆದು ನೋಡಿದಾಗ ಗಲಭೆಗಳಿಗೆ ಸಿಕ್ಕು ಬಲಿಯಾದವರಲ್ಲಿ ಅತ್ಯಂತ ಹೆಚ್ಚು ಬಿಲ್ಲವರು. ಯಾಕೆ ಹೀಗೆ? ಬಿಲ್ಲವರೇನು ಬ್ಯಾನರ್ ಕಟ್ಟಲಿಕ್ಕೆ,ಘೋಷಣೆ ಕೂಗಲಿಕ್ಕೆ,ಗಲಾಟೆಮಾಡಲಿಕ್ಕೆ ಮಾತ್ರ ಸೀಮಿತ?

ಹಿಂದುತ್ವದ ಸಂಘಟನೆಯಲ್ಲಿರುವ ಬಿಲ್ಲವ ಸಮಾಜದ ಯುವಕರು ತಮ್ಮ ಸಮಾಜದ ಸಂಘಟನೆಯಲ್ಲೂ ಸ್ವಲ್ಪ ಕೆಲಸಮಾಡಿ, ಮೀಟಿಂಗ್ ಗೆ, ಸಭೆ ಸಮಾರಂಭಗಳಲ್ಲಿ ಭಾಗವಹಿಸಿ. ಹಿಂದುಸಂಘಟನೆಯಲ್ಲೇ ಇದ್ದವರು ಮಾತ್ರ ಹಿಂದುತ್ವದ ಸೇವೆ ಮಾಡುವವರು ಎಂದು ನಿಮ್ಮ ತಲೆಗೆ ತುಂಬಿರುವ ಭಾವನೆಯಿಂದ ಹೊರಬನ್ನಿ. ಇಂದು ಸಮಾಜಕ್ಕೆ ನಿಜವಾದ ಹಿಂದು ಬಿಲ್ಲವ ಯುವಕರ ಅಗತ್ಯತೆ ಇದೆ. ನಮ್ಮ ಸಮಾಜದಲ್ಲಿರುವ ಸಮಸ್ಯೆಗೆ ಯಾವ ಸಂಘಸಂಸ್ಥೆ, ಸರಕಾರ ಸಹಾಯಮಾಡುವುದಿಲ್ಲ ಮತ್ತು ಬಿಲ್ಲವರು ಇತರರ ಸಹಾಯಕ್ಕೆ ಕೈಚಾಚಿನಿಲ್ಲುವ ಅಗತ್ಯವು ಇಲ್ಲ. ಧರ್ಮಕ್ಕೆ ಉಪಯೋಗವಿಲ್ಲದ ನಾಯಕರಿಗಾಗಿ ಹಗಲು ರಾತ್ರಿ ಎನ್ನದೆ ದುಡಿಯುತ್ತೇವೆ. ಹೀಗೆ ಯುವಕರು ದುಡಿದ ಪರಿಣಾಮವಾಗಿ ಇವತ್ತು ಕೆಲವು ಭಾಷಣ ಮಾಡುವ ಶ್ರಿಮಂತ ನಾಯಕರು ಕಾಣಸಿಗುತ್ತಾರೆ. ಎಷ್ಟೋ ರಾಜಕೀಯ ನಾಯಕರ ಭವಿಷ್ಯವನ್ನು ನಿರ್ಮಿಸಿದ್ದೇವೆ. ಆದರೆ ನಾವು ನಮ್ಮ ಸಮಾಜದ ಏಳಿಗೆಗಾಗಿ, ಸಮಾಜದ ಬಡ ಜನರ ಸಹಾಯಕ್ಕಾಗಿ, ಬಡ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ, ಸಮಾಜದ ಬಡ ಹೆಣ್ಣು ಮಕ್ಕಳ ಮದುವೆ ಮಾಡುವ ಕಾರ್ಯಕ್ಕೆ, ಹೀಗೆ ಸಮಾಜದಲ್ಲಿರುವ ಹಲವು ಸಮಸ್ಯೆಗಳಿಗೆ ದುಡಿಯುವ ಮನಸ್ಸು ಮಾಡಿಲ್ಲ. ಇನ್ನಾದರು ಇದರ ಕಡೆಗೆ ಹಿಂದು ಬಿಲ್ಲವರು ಗಮನ ವಹಿಸಿ. ಮೊದಲು ಮನೆ ಸಮಸ್ಯೆಯನ್ನು ಬಗೆಹರಿಸೋಣ. ನಮ್ಮ ಸಮಾಜದ ಸಮಸ್ಯೆಯನ್ನು ನಾವೇ ಸರಿಮಾಡಬೇಕು. ಇನ್ನಾದರು ಇದನ್ನು ಅರ್ಥ ಮಾಡಿಕೊಳ್ಳಿ.

ಹಿಂದು ಸಂಘಟನೆಯಲ್ಲಿ ಇರುವ ನಾಯಕರ ಹೆಸರನ್ನು ಗಮನಿಸಿ, ಯಾವ ವ್ಯಕ್ತಿಯಾದರೂ ತನ್ನ ಹೆಸರಿನ ಮುಂದೆ ಜಾತಿಯ ಹೆಸರನ್ನು ಬರೆಯದೆ ಇರುವವರನ್ನು ನೋಡಿದ್ದೀರ. ಪ್ರತಿಯೊಬ್ಬರಿಗೂ ಹಿಂದು ನಾಯಕರು ಜಾತಿ ಅಭಿಮಾನದಿಂದ ತುಂಬಿತುಳುಕುತ್ತಿದ್ದಾರೆ. ಕರಾವಳಿಯಲ್ಲಿರುವ ಹಿಂದು ನಾಯಕರು ತಾಕತ್ತಿದ್ದರೆ ತಮ್ಮ ಹೆಸರಿನ ಮುಂದೆ, ಸರಕಾರದ ಅರ್ಜಿಗಳಲ್ಲಿ ತನ್ನ ಹೆಸರಿನ ಮುಂದೆ "ಹಿಂದು" ಎಂದು ಬರೆಯಲಿ. ಪ್ರತಿಯೊಬ್ಬರು ಮೊದಲು ತಮ್ಮ ಜಾತಿಯವನೀಗೆ ಸಹಾಯಮಾಡುತ್ತಾರೆ. ಎಷ್ಟೇ ದೊಡ್ಡ ಹಿಂದುತ್ವವ ಗುರು ಇವತ್ತು ತನ್ನ ಶಿಷ್ಯರನ್ನು ಜಾತಿ ಆದಾರದಲ್ಲಿ ಆರಿಸುತ್ತಾರೆ ನಿನಃ "ಸಾಮರ್ಥ್ಯ" ದ ಆದಾರದಲ್ಲಿ, "ವಿಚಾರದ" ಆದಾರದಲ್ಲಿ ಆರಿಸುವುದಿಲ್ಲ. ಹಾಗೆ ಏನಾದರೂ ಇದ್ದಿದ್ದರೆ ಇವತ್ತು ಹಿಂದು ಸಮಾಜಕ್ಕೆ ಇಂತಹ ಪರಿಸ್ಥಿತಿ ಬರುತ್ತಿರಲ್ಲಿಲ್ಲ.

ಹಿಂದು ಸಂಘಟನೆಯಲ್ಲಿರುವ ಸಮಾಜದ ಯುವಕರ ಮನೆಯ ಕಷ್ಟ, ಅವರ ತಂದೆ ತಾಯಿ ಕಷ್ಟಪಡುವ ರೀತಿ ನೋಡಿದರೆ ದೇವರಿಗೆ ಕಡ ಆಶ್ಚರ್ಯವಾಗಬಹುದು. ತನ್ನ ಮನೆಯ ಜವಬ್ದಾರಿಯನ್ನು ಬದಿಗೆ ಇಟ್ಟು, ಧರ್ಮದ ಹೆಸರಿನಲ್ಲಿ ವಿಚಾರದ ಪೂಜೆ ಮಾಡುವ ಬದಲು, ವ್ಯಕ್ತಿಯ ಪೂಜೆ ಮಾಡುವ ಕಾರ್ಯಕತ್ರರನ್ನು ಸೃಷ್ಟಿಮಾಡುವ ಈ ಸಂಘಟನೆಗಳನ್ನು ಬಿಟ್ಟು ಸಮಾಜದ ಕಡೆಗೆ ಗಮನ ಹರಿಸುವುದೇ ಸೂಕ್ತ. ಇತ್ತೀಚೆಗೆ ನಡೆದ ಘಟನೆ ನಿಮಗೆ ಗೊತ್ತಿರು ಹಾಗೆ ಹಿಂದುತ್ವಕ್ಕೆ ಜೀವವನ್ನೇ ನೀಡಿದ ಸಮಾಜದ ವ್ಯಕ್ತಿಯ ತಂದೆ ಬಸ್ ನಿಲ್ದಾನದಲ್ಲಿ ಇದ್ದರು. ತನ್ನ ಹೆತ್ತ ತಂದೆ ತಾಯಿಯರನ್ನು ದುಃಖದಲ್ಲಿಟ್ಟು ಹಿಂದುತ್ವವಾದಿ ಎಂದು ಯಾವ ಧೈರ್ಯದಿಂದ ಹೇಳುತ್ತಾರೋ ದೇವರೆ ಬಲ್ಲ. ಸ್ವಾಮಿ ವಿವೇಕಾನಂದರನ್ನು, ಬ್ರಹ್ಮಾಶ್ರಿ ನಾರಾಯಣ ಗುರುಗಳನ್ನು ಆದರ್ಶವನ್ನಾಗಿಸಿಕೊಳ್ಳದೆ, ತನ್ನ ಸ್ವಾರ್ಥಕ್ಕಾಗಿ ಬಳಸುವ ನಾಯಕರ ಹಿಂದೆ ಹೋಗುವ ತಪ್ಪನ್ನು ಇನ್ನಾದರು ಬಿಲ್ಲವ ಸಮಾಜದ ಯುವಕರು ತಮ್ಮ ತಲೆಯಲ್ಲಿ ತುಂಬಿಸಿಕೊಳ್ಳಬೇಕು. ಇಂದು ಕರಾವಳಿಯಲ್ಲಿ ಎಷ್ಟೋಜನ ನಾಯಕರು ತಮ್ಮ ಬಳಿ ಯುವಕರು ಇರಬೇಕೆಂದು ಅವರನ್ನು ದುಶ್ಚಟಗಳಿಗೆ ದೂಡುವ ಕೆಲಸವನ್ನು ಮಾಡುತ್ತಿದ್ದಾರೆ. ಡ್ರಗ್ಸ್, ಮಧ್ಯಪಾನ ಮಾಡಲು ಪ್ರೋತ್ಸಾಹ ನೀಡುತ್ತಾರೆ. ಇಂತಹ ವಿಚಾರದಲ್ಲಿ ಕೆಲವು ಬಿಲ್ಲವ ನಾಯಕರೂ ಇದ್ದಾರೆ. ಸ್ವರ್ಥಕ್ಕಾಗಿ ತಮ್ಮ ಸಮಾಜದ ಯುವಕರನ್ನೇ ಬಲಿಪಡೆಯಲು ಹಿಂದೆ ಮುಂದೆ ನೋಡುವುದಿಲ್ಲ.

ಪ್ರತಿಯೊಂದು ವಿಷಯದಲ್ಲೂ ಜಾತಿಯನ್ನು ನೋಡುತ್ತಾರೆ. ಇದು ಬಿಸಿರಕ್ತಿರುವ ಯುವಕರಿಗೆ ಗೊತ್ತಾಗದೆ ಇರಬಹುದು. ಆದರೆ ಸಮಯ ನಿಮಗೆ ಸರಿಯಾದ ಪಾಠವನ್ನು ಕಲಿಸುತ್ತದೆ. ಆದರೆ ಆ ಸಮಯ ಬರುವಾಗ ನಿಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ಕಳೆದುಕೊಂಡಿರುತ್ತೀರಿ. ಬಡ ಹಿಂದುಗಳಿಗೆ ಸಹಾಯಮಾಡುವ ಕಡೆಗೆ ಸಂಘಟನೆಯ ದಾರಿಯನ್ನು ಕೊಂಡೊಯ್ಯಿರಿ. ಬಡ ಬಿಲ್ಲವರ ಸೇವೆಯನ್ನು ಮಾಡಿ, ಹೀಗೆ ಮಾಡಿದರೆ ನೀವು ಭಾಷಣ ಮಾಡಿ ಭೀಗುವ ನಾಯಕರಿಗಿಂತ ಸಾವಿರಾರು ಪಾಲು ಹೆಚ್ಚು ಹಿಂದುತ್ವವಾದಿಗಳಾಗುತ್ತೀರಿ. ಇದಕ್ಕಿಂತ ಹೆಚ್ಚಾಗಿ ಯಾರ ಹಂಗು ಇಲ್ಲದೆ ನಿಮ್ಮ ಜೀವನವನ್ನು ಸಾಗಿಸುವ ಕಡೆಗೆ ಗಮನ ಹರಿಸಿ. ಸಂಘಟನೆಯಲ್ಲಿ ಇರುವ ಕಾರ್ಯಕ್ರರ ರಲ್ಲಿ 50% ನಿರುದ್ಯೋಗಿಗಳೇ ಇರುತ್ತಾರೆ. ಇಂತವರು ಯಾವ ಹಿಂದುತ್ವದ ಕೆಲಸ ಮಾಡಲು ಸಾದ್ಯ, ತನ್ನ ಜೀವನದ ಪಥವನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಶಕ್ತಿಇಲ್ಲದ ಕಾರ್ಯಕತ್ರರನ್ನು ಇಂದಿನ ನಾಯಕರು ಸೃಷ್ಟಿಸುತ್ತಿದ್ದಾರೆ. ಇವರಿಗೆ ಬೇಕಾಗಿರುವುದು ಹಿಂದು ಧರ್ಮಕ್ಕೆ ದುಡಿಯುವ ಕಾರ್ಯಕತ್ರರಲ್ಲ ಬದಲಾಗಿ ಗುಲಾಮರಂತೆ ಆಜ್ಞೆಯನ್ನು ಪಾಲಿಸುವ ಗುಲಾಮರು.

ಮುಸ್ಲಿಂ ಸಂಘಟನೆ, ಕ್ರಿಶ್ಚನ್ ಸಂಘಟನೆಗಳಿಗೂ ಮತ್ತು ರಾಜಕೀಯಪಕ್ಷಗಳಿಗೂ ಇದು ಕೊನೇಯ ಎಚ್ಚರಿಕೆ. ಬಿಲ್ಲವ ಸಮಾಜದ ಯುವಕರ ವಿಷಯಕ್ಕೆ ಬರಬೇಡಿ. ನಿಮ್ಮ ಕುತಂತ್ರಗಳಿಗೆ ನಿಮ್ಮ ಮನೆಯ ಯುವಕರನ್ನು ಬಲಿ ಕೊಡಿ. ಅಮಾಯಕ ಬಡ ಕುಟುಂಬದ ಯುವಕರನ್ನು ಅವರಪಾಡಿಗೆ ಬದುಕಲು ಬಿಡಿ. ಬಿಲ್ಲವ ಸಮಾಜ ತನ್ನ ಸಮಾಜದ ಯುವಕರನ್ನು ಇನ್ನು ಯಾವ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಪ್ರತಿಯೊಂದು ಕಷ್ಟಗಳಿಗೂ ಸಮಾಜ ಅವರೊಂದಿಗೆ ಗಟ್ಟಿಯಾಗಿ ನಿಲ್ಲುತ್ತದೆ.

ಇನ್ನಾರದು ಇಂತಹ ನಾಯಕರನ್ನು ಹಿಂಬಾಲಿಸುವುದನ್ನು ನಿಲ್ಲಿಸಿ ಬಿಲ್ಲವ ಯುವಕರೇ, ಸಮಾಜದ ಕಡೆ ಸ್ವಲ್ಪ ಗಮನ ಹರಿಸಿ. ಸಮಾಜದ ಬಡ ಜನರ ಸಹಾಯವನ್ನು ಮಾಡುವಷ್ಟು ಬಲಿಷ್ಠರಾಗಿ. ಬ್ರಹ್ಮಶ್ರೀ ನಾರಾಯಣ ಗುರುಗಳನ್ನು, ಅವರ ಸಮಾಜಿಕ ಸುಧಾರಣೆಗಳನ್ನು, ಮುಖ್ಯ ತತ್ವವನ್ನು ಆದರ್ಶವಾಗಿ ತೆಗೆದುಕೊಳ್ಳಿ. ಅವರ ಇಚ್ಚೆಯಂತೆ ಬಾಳುವ ನಿಮ್ಮ ಸಂಕಲ್ಪ ಈ ಕಪಟ ಹಿಂದುತ್ವ ನಾಯಕರಿಗಿಂತ ಲಕ್ಷ ಪಟ್ಟು ವಾಸಿಯಾಗಿರುತ್ತದೆ.

4 comments:


 1. ಬಿಲ್ಲವ ಯುವಕರು ಹಿಂದುತ್ವ ಹಾದಿ ಹಿಡಿದೇ ಹಾಳಾದದ್ದು ಹೆಚ್ಚು ಎಂಬಂತೆ ಇಲ್ಲಿ ಬಿಂಬಿಸಲಾಗಿದೆ. ಸುಮಾರು ೧೫ ವರುಷಗಳಿಂದ ನಮ್ಮ ಕರಾವಳಿಯಲ್ಲಿ ಹಿಂದುತ್ವದ ಏಲ್ ಸ್ವಲ್ಪ ಜೋರಾಗಿಯೇ ಇದೆ. ಕರಾವಳಿಯಲ್ಲಿ ನಾವು ಯಾವತ್ತಿದ್ದರೂ ಬಹುಸಂಖ್ಯಾತರು. ಸೆಕ್ಯುಲರ್ , ಹಿಂದುತ್ವ ಎಂದೇ ನಾವು ಹಾಳಾದೆವು ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸ್ಪಷ್ಟವಾಗಿ ನಮ್ಮ ಸಂಘ ಸಂಸ್ಥೆಗಳಲ್ಲಿ ಯುವಕರು ತಮ್ಮನ್ನು ಒಗ್ಗಿಸಿ ಕೊಳ್ಳುವುದಿಲ್ಲ ಎಂಬುದು ಅಷ್ಟೇ ಪ್ರಾಮುಖ್ಯವಾಗಿದೆ. ಈ ಬಗ್ಗೆ ಎಲ್ಲೂ ಚರ್ಚೆಗಳು ನಡೆಯುವುದೇ ಇಲ್ಲ . ಅಥವಾ ಯುವಕರು ಅಧಿಕಾರ , ಮುಂದಾಳುತ್ವ ವಹಿಸುವುದು ನಮಗೂ ಬೇಕಿಲ್ಲ. ನಮ್ಮ ಸಂಘ ಸಂಸ್ಥೆಗಳು ನಾಯಿ ಕೊಡೆಯಂತೆ ಅಲ್ಲಲ್ಲಿ ಇದ್ದರೂ ಮುಖ್ಯ ವಾಹಿನಿಗೆ ಯುವಕರು ತೆರೆದು ಕೊಳ್ಳದೆ ಇರುವುದು ದೊಡ್ಡ ಸಮಸ್ಯೆಯಾಗಿದೆ. ಇದನ್ನೇ ಉಪಯೋಗಿಸಿ ಕೊಂಡು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತವೆ.

  ಬಿಲ್ಲವ ಯುವಕರನ್ನು ಮುಖ್ಯವಾಹಿನಿಗೆ ಹರಿದು ಬರುವಂತೆ ನಮ್ಮ ಸಂಘ ಸಂಸ್ಥೆಗಳ ಎಲ್ಲ ಪದಾಧಿಕಾರಿಗಳು , ನಮ್ಮ ಮುಖಂಡರು ಚಿಂತನೆ ನಡೆಸಲಿ .

  - ಅಕುವ ( ಅಶೋಕ್ ಕುಮಾರ್ ವಳದೂರ್ )

  ReplyDelete
 2. !! ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ!!

  ಸತ್ಯವಾಗಿದೆ....
  ಮೊದಲು ಶ್ರೀ ನಾರಾಯಣ ಗುರುದೇವರ ತತ್ವ ಸಂದೇಶಗಳನ್ನು ಸ್ವೀಕರಿಸಿ... ಅದನ್ನು ಅನುಷ್ಠಾನ ಮಾಡುವುದೇ..!! ಮುಂದೆ ಉತ್ತಮ ಬದುಕು ಜೀವನ ಉಂಟು... ಇದು ಸತ್ಯ...!! ಅದೇ ನಮ್ಮ ಸಮಸ್ತ ಸಮಾಜ ಶ್ರೀ ನಾರಾಯಣ ಗುರು ಧರ್ಮವನ್ನು ಒಪ್ಪಿಕೊಳ್ಳುವ...!! ಅದೇ ಅದು ಸನಾತನ ಧರ್ಮ...!! ಯಾವುದೇ ಜಾತಿ, ಮತ -ಧರ್ಮ,ವ್ಯಕ್ತಿಗಳಿಗೆ ನೋವು ಕೊಡದೇ...ರೀತಿಯಲ್ಲಿ ಬದುಕುವ... ಇಂತಹ ವಾತಾವರಣ ನಾವು ಸೃಷ್ಟಿ ಮಾಡುವ ಇಂತಹ ವಾತಾವರಣವನ್ನೇ ಶ್ರೀ ನಾರಾಯಣ ಗುರುದೇವರು ನೋಡುತ್ತಿರುವುದು...ಅದೇ ಅವರಿಗಿಷ್ಟ...!!! ನಮಗೂ ಇಷ್ಟ... ಬನ್ನಿ ಶ್ರೀ ನಾರಾಯಣ ಗುರುದೇವರ ಚಿಂತನೆಯ ಕಡೆಗೆ ...ಮೊದಲು ನಮ್ಮಲ್ಲಿ ಬದಲಾವಣೆ ...ನಂತರ ನಮ್ಮ ಸಮಾಜ... ಇದು ಸತ್ಯವಾಗಿದೆ...
  ನಾವು ಬದಲಾವಣೆ ಆಗಲೇ ಬೇಕು... ಇಲ್ಲ ನಮ್ಮ ನಾಶಕ್ಕೆ ನಾವೇ ಕಾರಣ ಎಚ್ಚರ... ಎಚ್ಚರ.. ಎಚ್ಚರ...
  ಸದಾ ಶ್ರೀ ನಾರಾಯಣ ಗುರುದೇವರ ಸೇವೆಯಲ್ಲಿ...

  ಬ್ರಹ್ಮ ಶ್ರೀ ನಾರಾಯಣ ಗುರುದೇವರ ಪ್ರತಿಷ್ಠಾನ
  ಗುರು ಸೇವಕ
  ಸುರೇಶ್. ಕೆ.ಪೂಜಾರಿ
  www.bsngdp.blogspot.in

  ReplyDelete
  Replies
  1. Yer palane malter Anna gurukulena tatva unduve billava samithida hiriyakleda yan 3 varshada dumbu loan da vishyad patere ponaga harikeda uttara korter gotande adagane gotand billava union Kaas ittinakleg matra pand

   Delete
  2. Yer palane malter Anna gurukulena tatva unduve billava samithida hiriyakleda yan 3 varshada dumbu loan da vishyad patere ponaga harikeda uttara korter gotande adagane gotand billava union Kaas ittinakleg matra pand

   Delete