Tuesday, January 9, 2018

ಶೇಂದಿಯ ಉಪಯೋಗ ಮತ್ತು ಅದರ ಬಗ್ಗೆ ನಮ್ಮಲ್ಲಿರುವ ತಪ್ಪು ಕಲ್ಪನೆ

ಈ ಬರಹ ಯಾವುದೇ ವಿಷಯದ ಬಗ್ಗೆ ಉತ್ಪ್ರೇಕ್ಷೆಯು ಅಲ್ಲ ಅದೇ ರೀತಿಯಲ್ಲಿ ಯಾವುದನ್ನು ಸಮರ್ಥಿಸುವ ಕಾರ್ಯವನ್ನು ಮಾಡುತ್ತಿಲ್ಲ ಆದರೆ ಜನರ ಮನಸ್ಸಿನಲ್ಲಿ ಮೂಡಿದ ತಪ್ಪು ಕಲ್ಪನೆಗಳನ್ನು ತಿಳಿಯಪಡಿಸುವ ಸಣ್ಣ ಪ್ರಯತ್ನ ಮಾತ್ರ.

ಬಿಲ್ಲವರ ಮೂಲ ಕಸುಬು ಶೇಂದಿ ತೆಗೆಯೋದು ಅವರು ಮೂರ್ತೆದಾರರು ಅವರ ವರಮಾನದ ಮೂಲ ಅದು ಎನ್ನುವಂತ ಮಾತು ಎಲ್ಲರ ಮನದಲ್ಲಿ ಅದರಲ್ಲೂ ಬಿಲ್ಲವರ ಮನದಲ್ಲಿ ಆಳವಾಗಿ ಬೇರೂರಿದೆ. ಒಂದು ಗಮನಿಸಬೇಕಾದ ಅಂಶ ಏನೆಂದರೆ ಒಂದು ವೇಳೆ ಬಿಲ್ಲವರ ಮೂಲ ಕಸುಬೆ ಮೂರ್ತೆಗಾರಿಕೆಯಾಗಿದಲ್ಲಿ ನಟ್ಟಿಲ ಬರ್ಕೆ ಎನ್ನುವಂತಹ ವ್ಯವಸ್ಥೆ ಯಾಕಾಗಿ ಬಂತು ಬಿಲ್ಲವರ ಮನೆಗಳನ್ನು ಮಾತ್ರ ನಟ್ಟಿಲ ಬರ್ಕೆ ಎಂದು ಯಾಕಾಗಿ ಕರೆಯಬೇಕಿತ್ತು.

ಇಡೀ ಒಂದು ಊರಿನ ಕೃಷಿ ವ್ಯವಸ್ಥೆಯ ಮೇಲುಸ್ತುವಾರಿ ನೋಡಿಕೊಳ್ಳುವ ಮನೆಯು ಬಿಲ್ಲವರ ಮನೆಯಾಗಿದಲ್ಲಿ ಈ ಮೂರ್ತೆಗಾರಿಕೆ ಯಾವ ರೀತಿಯಲ್ಲಿ ನಮ್ಮ ಮೂಲಕಸುಬು ಆಗುತ್ತೆ ಅದೇ ರೀತಿಯಲ್ಲಿ ಇದೀಗ ಒಂದು ಚಾಳಿ ಎಲ್ಲರಿಗೂ ಬಂದಿದೆ. ವೇದಿಕೆಯಲ್ಲಿ ಮೈಕ್ ಸಿಕ್ಕಿದ ತಕ್ಷಣ ಬಿಲ್ಲವರು ಶೇಂದಿ ಕುಡಿದೆ ಹಾಳಾಗಿರೋದು ಬಿಲ್ಲವರಿಗೆ ಅದೊಂದು ಶಾಪ ಎಂದು ಹೇಳುವುದಾದರೆ ಈ ನಾನೊಬ್ಬ ಆಪ್ತಸಮಾಲೋಚಕನಾಗಿ ಯಾರು ಕೂಡ ನನ್ನ ಬಲಿ ಶೇಂದಿಯ ದಾಸನಾಗಿದ್ದೇನೆ ಅದರಿಂದ ನನ್ನನ್ನು ಬಿಡಿಸಿ ಎಂದು ಹೇಳಿದವರು ಇಲ್ಲ. ಬಂದವರೆಲ್ಲ ಸರಕಾರಿ ಪ್ರಾಯೋಜಿತ ಕುಡುಕರೆ.

ನಾನು ಈಗೆ ಹಿರಿಯರಲ್ಲಿ ಶೇಂದಿಯ ಉಗಮದ ಬಗ್ಗೆ ಕೇಳಿದಾಗ ಒಂದು ರೋಚಕ ವಿಷಯಗಳು ಅನಾವರಣಗೊಂಡಿತು. ಹಿಂದಿನ ಕಾಲದಲ್ಲಿ ಶೇಂದಿ ತೆಗೆಯುತ್ತಿದ್ದು ವೈದ್ಯ ವೃತ್ತಿಯ ಬೈದ್ಯರೆ ಯಾಕೆಂದರೆ ತಾವು ಮಾಡೋ ವೈದ್ಯ ಪದ್ದತಿಗೆ ಸಹಕಾರಿಯಾಗಿ ಅಂದರೆ ಆ ಕಾಲದಲ್ಲಿ ಅರಿವಳಿಕೆಯಾಗಿ ಸ್ವಲ್ಪ ಶೇಂದಿಯನ್ನೆ ಕೊಡುತ್ತಿದ್ದರು ಅದೇ ರೀತಿಯಾಗಿ ಬಾಣಂತಿ ಸ್ತ್ರೀಯರ ಉದರದೊಳಗೆ ಶಿಶು ಜನನದ ಸಮಯದಲ್ಲಿ ಆದ ಗಾಯಗಳಿಗೆ ಗುಣಪಡಿಸುವ ನಿಟ್ಟಿನಲ್ಲಿ ಶೇಂದಿಯಲ್ಲಿ ತಯಾರಿಸಿದ ಬೆಲ್ಲಗಳು ಒಂದು ರೀತಿಯಲ್ಲಿ ರೋಗ ನಿರೋಧಕ ಶಕ್ತಿಯಾಗಿ ಬಳಕೆಯಾಗುತ್ತಿತ್ತು.

ಅದೇ ರೀತಿಯಲ್ಲಿ ತಾಯಿಯು ತನ್ನ ಪ್ರಸವದ ಸಮಯದಲ್ಲಿ ನಷ್ಟವಾದ ದೈಹಿಕ ಶ್ರಮದ ಪರಿಹಾರಕ್ಕಾಗಿ ಮತ್ತು ವಿಶ್ರಾಂತಿ ತೆಗೆದುಕೊಳ್ಳಲು ನಿದ್ರೆ ಗುಳಿಗೆಯಾಗಿ ಶೇಂದಿಯನ್ನು ಅಲ್ಪ ಮಟ್ಟದಲ್ಲಿ ನೀಡುತ್ತಿದ್ದರು. ಅದೇ ರೀತಿಯಲ್ಲಿ ಬಿಲ್ಲವ ಗುತ್ತು ಬರ್ಕೆಗಳಲ್ಲಿ ಬಿಲ್ಲವರಿಗೆ ಅರಮನೆಗೆ ದಂಡಿನ ಸಮಯದಲ್ಲಿ ಸೈನ್ಯ ಒದಗಿಸುವ ಜವಾಬ್ದಾರಿ ಇರೋದ್ರಿಂದ ಗರಡಿ ಕವಾಯತ್ತು ಸಮಯದಲ್ಲಿ ಆದ ದೈಹಿಕ ಶ್ರಮ ಪರಿಹಾರಕ್ಕಾಗಿ ಮಲಗೋ ಸಮಯದಲ್ಲಿ ಅವರಿಗೆ ಅಲ್ಪ ಮಟ್ಟದಲ್ಲಿ ಶೇಂದಿಯನ್ನು ನೀಡುತ್ತಿದ್ದರು ಮತ್ತು ಯಾರು ತಮ್ಮ ಪರಿಧಿಯನ್ನು ದಾಡುತ್ತಿರಲಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.

ಅದೇ ರೀತಿಯಲ್ಲಿ ದೈವಾರಾಧನೆಯಲ್ಲಿ ಅಮ್ರತ ಎಂದು ಸಂಭೋದಿಸಿ ನೀಡುವಾಗ ಅದರ ಬಗ್ಗೆ ಅಸ್ಪ್ರಸ್ಯತೆ ಇರಲಿಲ್ಲ ಎನ್ನುವುದು ಕಟು ವಾಸ್ತವ ಅಲ್ಲಿ ಕೂಡ ದೈವಾರಾಧನೆಗೆ ಇಟ್ಟ ಶೇಂದಿಯು ದೈವ ನರ್ತಕನಿಗೆ ಅದೇ ರೀತಿಯಲ್ಲಿ ಸಂಬಂಧಪಟ್ಟ ಸೇವಕರಿಗೆ ನೀಡುವುದರ ಉದ್ದೇಶ ಆತನ ಆಯಾಸ ಪರಿಹಾರಕ್ಕೆ ಒಂದು ಚ್ಯೆತನ್ಯ ರಸಾಯನವಾಗಿ ಬಳಸಲಾಗುತಿತ್ತು. ಅಲ್ಲಿ ಅಮಲಿನ ವಸ್ತುವಾಗಿ ಬಳಕೆಯಾಗಿಲ್ಲ ಎನ್ನುವುದು ಸತ್ಯ. ಒಂದು ದೈವಾರಾಧನೆಗೆ ಬೆಳ್ತಂಗಡಿ ಕಡೆಯಲ್ಲಿ ದಂಡಿಗೆಯಲ್ಲಿ ಶೇಂದಿ ಹೋಗುತ್ತ ಇತ್ತು ಎನ್ನುವ ಬಗ್ಗೆ ನನ್ನ ಆತ್ಮೀಯರು ತಿಳಿಸಿದಾಗ ಎಲ್ಲೋ ಒಂದು ಕಡೆ ಅದು ಧಾರ್ಮಿಕ ನಂಬಿಕೆಯಲ್ಲೂ ಉತ್ತಮ ಸ್ಥಾನವನ್ನೇ ಪಡೆದಿದೆ ಎಂದರ್ಥ.

ನನ್ನ ಒಬ್ಬರು ಉಪಸ್ಯಾಸಕರು ಶೇಂದಿಯ ಮಹತ್ವದ ಬಗ್ಗೆ ಹೇಳುತ್ತಾ ಇದ್ದರು ಸೂರ್ಯೋದಯಕ್ಕೆ ಮುಂಚಿನ ಶೇಂದಿಯು ದೇಹಕ್ಕೆ ಅಲ್ಪ ಪ್ರಮಾಣದಲ್ಲಿ ಹೋದರೆ ಕಫದ ಸಮಸ್ಯೆಗಳಿಂದ ಮುಕ್ತಿ ಹೊಂದ ಬಹುದು ಎಂದು. ಆದರೆ ಪ್ರಸ್ತುತ ಕಲಬೆರಕೆಯಾಗಿ ಮನುಷ್ಯ ಹಣದಾಸೆಗಾಗಿ ಏನೆಲ್ಲಾ ಮಾಡುತ್ತಿದ್ದಾನೆ ಎನ್ನುವಂತದ್ದು ಯಕ್ಷಪ್ರಶ್ನೆ . ಪ್ರಕೃತ್ತಿದತ್ತವಾಗಿ ಸಿಗುವುದು ಯಾವುದು ವಿಷವಲ್ಲ ಆದರೆ ಯಾವ ಉದ್ದೇಶಕ್ಕೆ ಬಳಸುತ್ತಿದ್ದೇವೆ ಮತ್ತು ಯಾವ ರೀತಿಯಲ್ಲಿ ಬಳಸುತ್ತಿದ್ದೇವೆ ಎನ್ನುವುದು ಮುಖ್ಯ ಆಗುತ್ತೆ. ಅದು ಬಿಟ್ಟು ಪೂರ್ವಾಗ್ರಹ ಪೀಡಿತರಾಗಿ ಶೇಂದಿಯ ಒಳಿತು ಕೆಡುಕುಗಳ ಬಗ್ಗೆ ಮಾತನಾಡುವುದು ಅಷ್ಟೊಂದು ಸಮಂಜಸವಲ್ಲ.

ಇದರ ಬಗ್ಗೆ ಇನ್ನಷ್ಟು ಸಂಶೋಧನೆಗಳು ಆಗಬೇಕಿರುವುದರಿಂದ ನಾವು ಈಗಲೇ ಅಂತಿಮ ಮದ್ರೆ ಒತ್ತುವುದು ತಪ್ಪಾಗುವುದು. ಇನ್ನು ಮಂದಕ್ಕೆ ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕು. ಬರಹ- ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ ಚಿತ್ರ: ಮಹೇಶ್ ಬೋಳೂರು

0 comments: