Tuesday, January 23, 2018

ಬಿರುವೆರ್ ಕುಡ್ಲ ವತಿಯಿಂದ ನೊಂದ ಹೃದಯಗಳಿಗೆ ಸಾಂತ್ವನ ಮತ್ತು ಆರ್ಥಿಕ ಧನ ಸಹಾಯ

ಉದಯ ಪೂಜಾರಿ ಯವರ ದಕ್ಷ ನಾಯಕತ್ವದಲ್ಲಿ ಸಮಾಜ ಸೇವೆಯ ಗುರಿ ಹೊತ್ತು ಆರಂಭವಾದ ಬಿರುವೆರ್ ಕುಡ್ಲ (ರಿ) ,ಇದರ ಘಟಕ ಪುತ್ತೂರ್ ನಲ್ಲಿ ಆರಂಭವಾಗಿದ್ದು ,ಇದರ ಎರಡನೇ ಸಮಾಜ ಮುಖಿ ಕಾರ್ಯ.

ಜುಲೈ 9 2017ರಂದು ಮೂಲ್ಕಿ ಶಾಂಭವಿ ನದಿಯಲ್ಲಿ ಅಕಸ್ಮಿಕವಾಗಿ ಮುಳುಗಿ ಮರಣಹೊಂದಿದ ಸೋಮೇಶ್ವರ ರಕ್ತೇಶ್ವರಿ ಗುಡಿ ಬಳಿಯ ದಿ ಕಿಶೋರ್ ಪೂಜಾರಿ ಅವರ ಮನೆಗೆ ಬಿರುವೆರ್ ಕುಡ್ಲ ಪುತ್ತೂರು ಘಟಕದ ವತಿಯಿಂದ ಪಧಾದಿಕಾರಿಗಳು ಭೇಟಿ ನೀಡಿದರು .ತೀವ್ರ ಅರ್ಥಿಕ ಸಂಕಷ್ಟದಲ್ಲಿರುವ ಮ್ರತರ ತಂದೆ ಜನಾರ್ದನ ಹಾಗೂ ತಾಯಿ ಹಾಗೂ ಈರ್ವರು ಸಹೋದರಿಯರಿಗೆ ಸಾಂತ್ವನ ಹೇಳಿ ಊರಿನ ದಾನಿಗಳ ನೆರವಿನಿಂದ ನಿರ್ಮಾಣಗೊಳ್ಳುತ್ತಾ ಇರುವ ಇವರ ನೂತನ ಮನೆಗೆ ಸಹಾಯಾರ್ಥವಾಗಿ 10000ರೂ ಗಳನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ ಘಟಕ ಅಧ್ಯಕ್ಷ ಶೈಲೇಶ್ ಬಿರ್ವ,ಸಂಘಟನಾ ಕಾರ್ಯದರ್ಶಿ ಕಮಲೇಶ್ ಸರ್ವೇದೋಲ ಗುತ್ತು,ಉಪಾಧ್ಯಕ್ಷ ಪ್ರವೀಣ್ ಸರ್ವೇದೋಳ ಗುತ್ತು,ಗೌರವ ಸಲಹೆಗಾರ ಹರೀಶ ಶಾಂತಿ ಹಾಗು ಲೆಕ್ಕಿಗ ರಾಮಣ್ಣ ಪೂಜಾರಿ ಉಪಸ್ಥಿತರಿದ್ದರು.

0 comments: