Tuesday, January 23, 2018

ಬಿಜೆಪಿಯಲ್ಲಿ ಮತ್ತೆ ಬಿಲ್ಲವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎನ್ನುವುದಕ್ಕೆ ಮತ್ತೆ ಕರಾವಳಿ ಸಾಕ್ಷಿಯಾಗುತ್ತಿದೆ ?

ಬಂಟ್ವಾಳದ ದಲ್ಲಿ ಕಾಂಗ್ರೆಸ್ ಎದುರು 17 ಸಾವಿರಕ್ಕಿಂತಲೂ ಹೆಚ್ಚು ಮತಗಳಿಂದ ಸೋಲುಂಡವರಿಗೆ ಟಿಕೆಟ್ ಪರಿವರ್ತನಾ ಯಾತ್ರೆಯಲ್ಲೆ ಘೋಷಣೆಯಾಗುತ್ತದೆ. ಆದರೆ ಮೂಡಬಿದ್ರೆಯಲ್ಲಿ ಕಾಂಗ್ರೇಸ್ ಎದುರು 4 ವರೆ ಸಾವಿರ ಮತಗಳ ಅಂತರದಿಂದ ಸೋತವರ ಹೆಸರನ್ನು ಪರಿವರ್ತನಾ ಯಾತ್ರೆಯಲ್ಲಿ ಪ್ರಸ್ತಪಿಸುವುದಿಲ್ಲ. ಅಂದರೆ ಬಿಲ್ಲವರನ್ನು ಬಿಜೆಪಿ ನಾಯಕರು ಯಾವ ಮಟ್ಟದಲ್ಲಿ ತುಳಿಯುತ್ತಿದ್ದಾರೆ ಎಂದು ನಾವು ಯೋಚಿಸಬೇಕಿದೆ.

ಮೂಡಬಿದ್ರೆ ಬಂಟ್ವಾಳ ಇನ್ನು ಕೆಲವು ಕ್ಷೇತ್ರಗಳಲ್ಲಿ ಬಿಲ್ಲವರ ಪ್ರಾಬಲ್ಯವಿದೆ ಮೂಡಬಿದ್ರೆಯಲ್ಲಿ ಒಟ್ಟು ಮತದಾರರ ಸಂಖ್ಯೆ 1,92,321 ಬಿಲ್ಲವ ಮತದಾರರು 62,200

ಬಂಟ್ವಾಳದಲ್ಲಿ ಒಟ್ಟು ಮತದಾರರು 2,62,607 ಬಿಲ್ಲವ ಮತದಾರರು 75,200 ಆದರೂ ಬಂಟ್ವಾಳದಲ್ಲಿ ಬಿಲ್ಲವರಿಗೆ ಟಿಕೆಟ್ ಇಲ್ಲ. ಬರೀ ಸಂಘಟನೆ ಕೆಲಸಕ್ಕೆ ಉಪಯೋಗಿಸಿ ಬಿಲ್ಲವರನ್ನು ಬದಿಗೆ ಸರಿಸಲಾಗುತ್ತಿದೆ. ಚುನಾವಣಾ ಪ್ರಚಾರಕ್ಕೆ ಬಿಲ್ಲವರನ್ನು ಬಳಸಿಕೊಂಡು ಸ್ಥಾನಮಾನದ ವಿಚಾರ ಬಂದಾಗ ತುಳಿದು ಹಾಕುತ್ತಾರೆ. ರಮಾನಾಥ ರೈ ವಿರುದ್ದ ಒಂದೆ ಒಂದು ಶಬ್ದ ಮಾತನಾಡದವರಿಗೆ ಯಾತ್ರೆಯಲ್ಲಿ ಟಿಕೆಟ್ ಘೋಷಣೆಯಗುತ್ತದೆ ಆದರೆ ಅಭಯಚಂದ್ರ ಜೈನ್ ವಿರುದ್ದ ತೊಡೆ ತಟ್ಟಿ ನಿಂತಿರುವ ಉಮಾನಾಥ್ ಕೊಟ್ಯಾನ್ ಗೆ ಪರಿವರ್ತನೆ ಯಾತ್ರೆಯಲ್ಲಿ ಟಿಕೆಟ್ ಘೋಷಣೆಯಾಗಲಿಲ್ಲ.ಅಲ್ಲದೆ ಕಳೆದ ತಾಲೂಕ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣಾ ಸಂಧರ್ಭ ಉಮಾನಾಥ್ ಕೋಟ್ಯಾನ್ ಅವರಿಗೆ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಉಸ್ತುವಾರಿ ನೀಡದೆ ದೂರ ಇಡಲಾಯಿತು ಎಂಬ ಜ್ವಲಂತ ಉದಾಹರಣೆ ನಮ್ಮ ಮುಂದೆ ಇದೆ . ಇದು ನಮ್ಮ ತಾಳ್ಮೆಯನ್ನು ಪರಿಕ್ಷಿಸುವಂತಾಗಿದೆ.

ಇದೀಗ ಬಿಲ್ಲವ ಸಂಘಟನೆಗಳು ಪ್ರಸ್ತಾಪವನ್ನು ಬಿಜೆಪಿ ಮುಂದಿಟ್ಟಿದೆ. 3 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕೇಂದು ಬೇಡಿಕೆ ಇಟ್ಟಿದೆ. ಬಿಲ್ಲವರೂ ಪ್ರಾಬಲ್ಯವಿರುವ ಬಂಟ್ವಾಳ ಮೂಡಬಿದ್ರೆಯಲ್ಲೂ ಬಿಲ್ಲವರಿಗೆ ಟಿಕೆಟ್ ಕೊಡಬೇಕೆಂಬ ವಿಷಯವನ್ನು ಬಿಜೆಪಿ ಮುಂದಿಟ್ಟಿದೆ. ಬಿಲ್ಲವ ಸಮಾಜದ ಬೇಡಿಕೆಗೆ ಬಿಜೆಪಿ ನಾಯಕರು ಸ್ಪಂದಿಸುತ್ತಾರೋ ಇಲ್ಲವೋ ಕಾದು ನೋಡೋಣ. ಒಂದು ವೇಳೆ ಸ್ಪಂದಿಸದಿದ್ದರೆ ಬಿಲ್ಲವ ಸಮಾಜ ಮುಂಬರುವ ಚುನಾವಣೆಯಲ್ಲಿ ಸೂಕ್ತ ಉತ್ತರವನ್ನು ನೀಡಲಿದೆ.

0 comments: