ನೀವು ಈಗಾಗಲೇ ನಿಮ್ಮ ರಾಜಕೀಯ ದುರ್ಲಾಭಕ್ಕಾಗಿ ಅಖಂಡ ಹಿಂದುತ್ವ ವನ್ನು ಭಾಗ ಮಾಡಿ ಬಿಜೆಪಿ ಹಿಂದೂಗಳು ಹಾಗು ಕಾಂಗ್ರೆಸ್ ಹಿಂದೂಗಳೆಂದು ಮಾಡುವುದರಲ್ಲಿ ಯಶ ಕಂಡಿದ್ದೀರಿ ..ಹಾಗುಅದರ ಪರಿಣಾಮವನ್ನು ಸಾಮಾನ್ಯ ಹಿಂದೂ ಗಳು ಅನುಭವಿಸುತ್ತಿದ್ದಾರೆ.
ಇವಾಗ ಒಂದು ಹೆಜ್ಜೆ ಮುಂದೆ ಹೋಗಿ ಬೆಮ್ಮೆರ್ ಬೈದೇರುಗಳ ಚಿತ್ರ ವನ್ನು ನಿಮ್ಮ ರಾಜಕೀಯ ಪಕ್ಷ ದ ಬ್ಯಾನರ್ ನಲ್ಲಿ ಹಾಕಿ ಬೈದೇರುಗಳ ಭಕ್ತರ ಮನಸಲ್ಲಿ ಬೇಸರ ತರಿಸುವ ಕೆಲಸಕ್ಕೆ ಕೈ ಹಾಕಿದ್ದೀರಿ ...ಹಿಂದುತ್ವವನ್ನು ಭಾಗ ಮಾಡಿದ ಹಾಗೆ ಬೈದೇರುಗಳ ಭಕ್ತರನ್ನು ಮಾಡುವ ಕಾರ್ಯ ಇದಾಗಿದೆ.ಇದರಿಂದಾಗಿ ಮುಂದೊಂದು ದಿನ ಬಿಜೆಪಿ ಕೋಟಿಚೆನ್ನಯರು , ಕಾಂಗ್ರೆಸ್ ಕೋಟಿ ಚೆನ್ನಯರು ಎಂಬ ಭೇದ ಭಾವ ಏರ್ಪಡುವ ಸಂಭವವೂ ದೂರವಿಲ್ಲ.
ನೀವು ಹೇಳುವ ಪ್ರಕಾರ ಆಯಾ ಪ್ರದೇಶ ದ ಪ್ರಸಿದ್ಧ ಜನರನ್ನು ನೀವು ಬಳಸಿಕೊಳ್ಳುವುದು ನಿಮ್ಮ ಅಜೆಂಡಾ ಆಗಿದ್ದರೆ , ನಿಮಗೆ ಇಷ್ಟು ವರ್ಷಗಳಲ್ಲಿ ಬೈದೇರುಗಳು ತಿಳಿದಿರಲಿಲ್ಲವೇ ,ಕೇವಲ 5-6 ತಿಂಗಳಲ್ಲಿ ಅವರ ಬಗ್ಗೆ ತಿಳಿಯಿತೇ !? ನೀವು ಇವಾಗ ವಾದಿಸಬಹುದು ದೇಯಿ ಬೈದ್ಯೆತಿ ವಿಷಯದಲ್ಲಿ ನೀವು ಪ್ರತಿಭಟನೆ ಮಾಡಿದ್ದೀರಿ ಎಂದು ..ಒಳ್ಳೆಯ ವಿಷಯವೇ ಆದರೆ ನೀವೊಂದು ತಿಳ್ಕೊಳ್ಳೊಬೇಕಾದ ಮುಖ್ಯ ವಿಷಯ ಏನಂದರೆ ನೀವು ಪ್ರತಿಭಟನೆ ಮಾಡೋ ಮೊದಲೇ ಆ ಮತಾಂಧನಾ ಬಂಧನ ಆಗಿತ್ತು ..ಅಲ್ಲಿ ನಡೆದ ಅಸ್ವಾಭಿವಿಕ ಕಳಸ ಕೂಡ ಅವರ ಆಚರಣೆಗೆ ವಿರುದ್ಧವಾಗಿಯೇ ನಡೆದದ್ದು.
ಕೋಟಿ ಚೆನ್ನಯರು ಎಲ್ಲಾ ವರ್ಗದ ಜನರು ನಂಬುವ ಕಾರಣಿಕ ಪುರುಷರೇ ಹೊರತು ಅವರು ಯಾವುದೇ ಪಕ್ಷ ದ ಅಡಿಯಾಳು ಗಳಲ್ಲ ....ಯಾವುದೇ ಪಕ್ಷ ಅವರ ಭಾವಚಿತ್ರ ಅಥವಾ ಅವರ ಹೆಸರಲ್ಲಿ ರಾಜಕೀಯ ಮಾಡುವುದು ಆಕ್ಷೇಪಾರ್ಹ ...ಹಾಗು ಬಲವಾಗಿ ಖಂಡಿಸುತ್ತೇವೆ.
ಇದನ್ನು ಬಲವಾಗಿ ಖಂಡಿಸಬೇಕಾದ ಬಿಲ್ಲವ ಸಂಘಗಳು ,ಯುವವಾಹಿನಿ ,ಎಲ್ಲ ಗರೋಡಿ ಮನೆತನಗಳು , ಗರೋಡಿ ಗಳ ಪದಾಧಿಕಾರಿಗಳು ಸುಮ್ಮನಿವುದು ನೋಡಿದರೆ ಒಬ್ಬ ಬೈದೇರುಗಳ ಭಕ್ತನಾಗಿ ಬೇಜಾರಾಗುತ್ತಿದೆ.
0 comments: