ಬಿಲ್ಲವ ಸಮುದಾಯದ ನಾಯಕರೆಂದು ಗುರುತಿಸಿಕೊಂಡ ಹರಿಕೃಷ್ಣ ಬಂಟ್ವಾಳ್ ಅವರ ರಾಜಕೀಯ ಜೀವನದಲ್ಲಿ ಇಷ್ಟರವರೆಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಹಲವಾರು ಅವಕಾಶಗಳನ್ನು ಇವರು ಕಳೆದು ಕೊಂಡಿರುತ್ತಾರೆ .ರಾಜಕೀಯದಲ್ಲಿ ಇವರು ಜನಾರ್ಧನ ಪೂಜಾರಿ ಬಲಗೈ ಬಂಟನಾಗಿ ಬೆಳೆದು ಬಂದಿದ್ದರು ಕೂಡ ಇವರ ಚಂಚಲ ಮನಸ್ಥಿತಿಯಿಂದ ಹಲವಾರು ಅವಕಾಶಗಳನ್ನು ರಾಜಕೀಯ ಜೀವನದಲ್ಲಿ ಕಳೆದುಕೊಂಡರು . ಕಾಂಗ್ರೆಸ್ ನಿಂದ ಮೂಲೆ ಗುಂಪು ಆದ ನಂತರದ ಬೆಳವಣಿಗೆಯಲ್ಲಿ ಬಂಡಾಯ ಸಾರಿ ಸ್ವತಂತ್ರ ಅಭ್ಯರ್ಥಿಯಾಗಿ ಕಳೆದ mlc ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು ನಂತರದ ರಾಜಕೀಯ ಬೆಳವಣಿಗೆಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ವಲಯದಲ್ಲಿ ಸಂಸದ ನಳಿನ್ ಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸುತಿದ್ದರು
ಇತ್ತೀಚೆಗೆ ಬಿಜೆಪಿಗೆ ಅಧಿಕೃತವಾಗಿ ಸೇರಿಕೊಂಡರು, ಬಿಲ್ಲವ ಸಮುದಾಯದ ಯುವಕರನ್ನು ಸೇರಿಸಿ ಹಲವು ಸಭೆಗಳನ್ನು ನಡೆಸಿದರು ,ನಿರಂತರವಾಗಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟಿಸುತ್ತಾ ಉಸ್ತುವಾರಿ ಸಚಿವ ರಮಾನಾಥ ರೈ ವಿರುದ್ಧ ನೇರ ಸಮರಕ್ಕೆ ಇಳಿದ ಹರಿ ಕೃಷ್ಣ ಬಂಟ್ವಾಳ್ ರಮಾನಾಥ ರೈ ಅವರ ವಿರುದ್ಧ ಭ್ರಷ್ಟಾಚಾರ ಆರೋಪದ ದಾಖಲೆ ಬಿಡುಗಡೆ ಮಾಡಿದರು ಅಲ್ಲದೆ ಕಲ್ಲಡ್ಕ ಶ್ರೀ ರಾಮ ಶಾಲೆಗೆ ಅನುಧಾನ ಬರುವುದನ್ನು ತಪ್ಪಿಸಲು ರಮಾನಾಥ ರೈ ಅವರು ರಾಜ್ಯ ಸರ್ಕಾರಕ್ಕೆ ಬರೆದ ಪತ್ರವನ್ನೂ ಬಿಡುಗಡೆಗೊಳಿಸಿದ್ದರು. .ಅದಲ್ಲದೆ ಜನಾರ್ಧನ ಪೂಜಾರಿ ಅವರನ್ನು ಸಚಿವ ರಮಾನಾಥ್ ರೈ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪಗಳನ್ನು ಬಹಿರಂಗವಾಗಿ ಮಾಡುತ್ತಾ ನಂತರ ಸ್ವತ ಬಿಲ್ಲವ ಸಮುದಾಯದ ಹಿರಿಯ ನಾಯಕ ಜನಾರ್ಧನ ಪೂಜಾರಿ ಅವರೇ ಈ ಬಗ್ಗೆ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದರು .ಕೆಲವು ದಿನಗಳ ಹಿಂದೆ ಬಿಜೆಪಿ ಜಿಲ್ಲಾ ವಕ್ತಾರರಾಗಿ ಆಯ್ಕೆಗೊಂಡರು .
ಇನ್ನೇನು ವಿಧಾನ ಸಭಾ ಚುನಾವಣೆಗೆ ಮೂರೂ ನಾಲ್ಕು ತಿಂಗಳು ಉಳಿದಿರುವಂತೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಯಾರು ಸ್ಪರ್ಧಿಸಬಹುದು ಎಂಬ ಚರ್ಚೆ ನಡೆಯುತ್ತಿದೆ . ರಾಜೇಶ್ ನಾಯ್ಕ್ ಉಳಿಪಾಡಿಯವರ ಹೆಸರು ಟಿಕೆಟ್ ಆಕಾಂಕ್ಷಿ ವಲಯದಿಂದ ಕೇಳಿ ಬರುತಿದ್ದು ,ಬಿಜೆಪಿ ರಾಷ್ಟ್ರೀಯ ವರಿಷ್ಠರು ಮಾತ್ರ ಈ ಬಾರಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲು ನಿರ್ಧರಿಸಿದ್ದು ,ಆಂತರಿಕ ಸಮೀಕ್ಷೆ ,ಜಾತಿವಾರು ಆಗಿ ಯಾರು ಪ್ರಭಲರೋ ,ಅಂತ ಅಭ್ಯರ್ಥಿಗಳಿಗೆ ಟಿಕೆಟ್ ಲಭಿಸುವ ಸಾಧ್ಯತೆ ಇರುವುದರಿಂದ ಹರಿ ಕೃಷ್ಣ ಬಂಟ್ವಾಳ್ ಅವರಿಗೂ ಟಿಕೆಟ್ ಲಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ ಯಾಕೆಂದರೆ ದಕ್ಷಿಣ ಕನ್ನಡದಲ್ಲಿ ಈ ಬಾರಿ ಜಾತಿ ಬಿರುಗಾಳಿ ಬಿಸಿದ್ದು ಬಿಲ್ಲವ ಸಮುದಾಯದ ನಾಯಕರು ಜಿಲ್ಲೆಯಲ್ಲಿ 3 ಪ್ರಮುಖ ಕ್ಷೇತ್ರದ ಟಿಕೆಟ್ಗಾಗಿ ಲಾಭಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ .
0 comments: