Wednesday, January 17, 2018

ಬಿಲ್ಲವರ ಆರಾಧ್ಯ ದೈವಗಳಾದ ಅವಳಿ ವೀರರ ಚಿತ್ರಗಳನ್ನು ರಾಜಕೀಯವಾಗಿ ಬಳಸಿಕೊಂಡಿರುವುದನ್ನು ಸಮರ್ಥಿಸಿಕೊಂಡ ಹರಿಕೃಷ್ಣ ಬಂಟ್ವಾಳ್ ಅವರೇ ಒಮ್ಮೆ ಇತ್ತ ಕೇಳಿ

ಎರಡು ನಾಲಿಗೆಯ ಹರಿಕೃಷ್ಣ ಬಂಟ್ವಾಳ್ ಅವರೇ ಕಾಲ ಕಾಲಕ್ಕೆ ನಿಮ್ಮ ಸಿದ್ದಾಂತ ಬದಲಾಗುತ್ತದೆ. ಇದು ನಿಮ್ಮ ವಯುಕ್ತಿಕ ಈ ಬಗ್ಗೆ ನಮ್ಮ ಯಾವುದೇ ತಕರಾರು ಇಲ್ಲ .ಆದರೆ ನೀವು ಇಂದು ಮಂಗಳೂರಿನಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಸಚಿವ ರಮಾನಾಥ ರೈಗೆ ತಿರುಗೇಟು ನೀಡುವ ಭರದಲ್ಲಿ ಬಿಲ್ಲವರ ಆರಾಧ್ಯ ದೈವ ಕೋಟಿ ಚೆನ್ನಯರ ಭಾವ ಚಿತ್ರವನ್ನು ಬಿಜೆಪಿಯ ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿರುವುದನ್ನು ಸಮರ್ಥಿಸಿಕೊಂಡಿರುವುದು ಒಂದು ದುರಂತವೇ ಎನ್ನಬಹುದು .

ಹರಿಕೃಷ್ಣ ಬಂಟ್ವಾಳ್ ಅವರೇ ,ನಿಮ್ಮ ರಾಜಕೀಯ ಸ್ವಾರ್ಥ ಸಾಧನೆಗೆ ಬಾಯಿಗೆ ಬಂದ ಹಾಗೆ ಹೇಳಿಕೆ ನೀಡಬೇಡಿ ,ಅದು ಬಿಜೆಪಿಯಾಗಿರಲಿ ಅಥವಾ ಕಾಂಗ್ರೆಸ್ ಆಗಿರಲಿ ಕೋಟಿ ಚೆನ್ನಯರ ಭಾವಚಿತ್ರವನ್ನು ರಾಜಕೀಯ ಪಕ್ಷಗಳು ಉಪಯೋಗಿಸಿಕೊಳ್ಳುವುದನ್ನು ಬಿಲ್ಲವ ಸಮುದಾಯ ಖಂಡಿಸುತ್ತದೆ ,ಅಷ್ಟಕ್ಕೂ ನೀವು ಬಿಲ್ಲವ ಸಮುದಾಯದ ನಾಯಕರೆಂದು ತಿಳಿದುಕೊಂಡಿರಬಹುದು ರಾಜಕೀಯವಾಗಿ ಮೂಲೆ ಗುಂಪು ಆದಾಗ ನಿಮಗೆ ಜಾತಿಯ ನೆನಪು ಆಗಿದೆ ಹೊರತು ಬೇರೆ ಉದ್ದೇಶದಿಂದ ಅಲ್ಲ ಎಂದು ನಮಗೆ ಸರಿಯಾಗಿ ತಿಳಿದಿದೆ .ಗೆಜ್ಜೆಗಿರಿಯಲ್ಲಿ ವಿನೋದ್ ಆಳ್ವ ಜೊತೆ ಕೈ ಜೋಡಿಸಿದ ದಿನವೇ ನಿಮ್ಮ ಜಾತಿ ಪ್ರೇಮ ಎಂತಹದು ಎಂದು ನಮಗೆ ತಿಳಿಯಿತು .ಅಷ್ಟಕ್ಕೂ ನಿಮಗೆ ರಮಾನಾಥ್ ರೈ ಅವರ ವಿರುದ್ಧ ರಾಜಕೀಯವಾಗಿ ಸೋಲಿಸಬೇಕಿದ್ದರೆ ಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡು ನೇರಾ ನೇರಾ ಸ್ಪರ್ಧೆಗೆ ಇಳಿಯಿರಿ .ನಿಮಗೆ ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ದುಮುಕಿ ನಿಮ್ಮ ಬೆಂಬಲಕ್ಕೆ ಇಡೀ ಬಿಲ್ಲವ ಸಮುದಾಯವೇ ನಿಲ್ಲುತ್ತದೆ .ಅದನ್ನು ಬಿಟ್ಟು ಯಾರೋ ಕೀ ಕೊಟ್ಟ ಗೊಂಬೆಯಂತೆ ಕುಣಿಯುವುದನ್ನು ನಿಲ್ಲಿಸಿ .

ಸರಿ ನಿಮ್ಮ ಮಾನಸಿಕತೆಯಲ್ಲೇ ಯೋಚನೆ ಮಾಡೋಣ, ನೀವು ಬಿಜೆಪಿ ಸೇರಿ ಬರೋಬ್ಬರಿ ಒಂದು ತಿಂಗಳು ಆಯಿತು ,ಬಿಲ್ಲವರನ್ನು ಅವಮಾನ ಮಾಡುವ ರಮಾನಾಥ್ ರೈ ಪ್ರತಿಕ್ರಿಯೆಗೆ ತಿರುಗೇಟು ನೀಡಲು ನೀವೇ ಬೇಕೇ ?? ಒಬ್ಬ ಜಿಲ್ಲೆಯ ಉಸ್ತುವಾರಿ ಸಚಿವ ಹೇಳಿಕೆಗೆ ತಿರುಗೇಟು ನೀಡಲು ಸಂಸದ ನಳಿನ್ ಕುಮಾರ್ ಕಟೀಲ್ ಗೆ ಆಗುವುದಿಲ್ಲವೇ ?? ಅಥವಾ ತಾನೇ ಮುಂದಿನ ಶಾಸಕ ಎಂದು ತಿರುಗಾಡುತ್ತಿರುವ ಉಳಿಪಾಡಿ ರಾಜೇಶ್ ನಾಯ್ಕ್ ಅವರಿಗೆ ಆಗುವುದಿಲ್ಲವೇ ?? ಮರೆಯಬೇಡಿ ಹರಿಕೃಷ್ಣ ಬಂಟ್ವಾಳ್ ಅವರೇ ಕಳೆದ ಲೋಕ ಸಭಾ ಚುನಾವಣೆಯಲ್ಲಿ ರುಕ್ಕಯ್ಯ ಪೂಜಾರಿ ಅವರನ್ನು ಬಿಜೆಪಿಯವ್ರು ಬಿಲ್ಲವ ನಾಯಕನ್ನಾಗಿ ಮುಂದಿಟ್ಟು ಕೊನೆಗೆ ಯಾವ ರೀತಿ ಮೂಲೆ ಗುಂಪು ಮಾಡಿದರು ಎಂಬುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ ,ಯಾವುದೇ ದೊಣ್ಣೆ ನಾಯಕನ ಅಪ್ಪಣೆಗೆ ತಲೆಬಾಗಿಸುವ ಮೊದಲು ಸಾವಿರ ಸಲ ಯೋಚಿಸಿ .

0 comments: