Friday, January 19, 2018

ಬಂಟ್ವಾಳದಲ್ಲಿ ಬದಲಾವಣೆ ಎಂಬುವುದು ಹರೀಶ್ ಪೂಜಾರಿ ಮನೆಯಿಂದಾಗಬೇಕಿದೆ

ವಿಧಾನ ಸಭಾ ಚುನಾವಣೆಗೆ ಇನ್ನೇನು ಮೂರೂ ನಾಲ್ಕು ತಿಂಗಳುಗಳು ಬಾಕಿ ಇರುವಂತೆ ಬಿಜೆಪಿ ಉಳಿಪಾಡಿ ರಾಜೇಶ್ ನಾಯ್ಕ್ ನೇತೃತ್ವದಲ್ಲಿ "ಬಂಟ್ವಾಳದಲ್ಲಿ ಬದಲಾವಣೆ"ಮಾಡೋಣ ಎಂಬ ಘೋಷಣೆ ಅಡಿಯಲ್ಲಿ ಮತ ಕಬಳಿಸಲು ಸಿದ್ಧತೆ ಮಾಡಿದೆ ,ಕಾಂಗ್ರೆಸ್ ತಾನೇನು ಕಮ್ಮಿ ಇಲ್ಲ ಎಂಬಂತೆ ಸಚಿವ ರಮಾನಾಥ ರೈ ನೇತೃತ್ವದಲ್ಲಿ "ಸಾಮರಸ್ಯ ನಡಿಗೆ ಸೌಹಾರ್ದ ಕಡೆಗೆ" ಎಂಬ ಘೋಷಣೆ ಅಡಿಯಲ್ಲಿ ಮತ ಕಬಳಿಸಲು ಹೊರಟಿದೆ .ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಕ್ಷಣಿಕ ಕಾಲಕ್ಕೆ ವಿವಿಧ ರೀತಿಯ ಛದ್ಮ ವೇಷವನ್ನು ಹಾಕಲು ಹೊರಟಿದೆ .

ಏನು ತಪ್ಪು ಮಾಡದ ಅಮಾಯಕ ಬಿಲ್ಲವ ಯುವಕ ಹರೀಶ್ ಪೂಜಾರಿಯನ್ನು ಕೊಚ್ಚಿ ಕೊಲ್ಲುತಾರೆ.ಬಂಟ್ವಾಳದಲ್ಲಿ ವೋಟ್ ಕಬಳಿಸಲು ಹೋರಾಟ ರಾಜಕಾರಿಣಿಗಳೇ ಹರೀಶ್ ಪೂಜಾರಿ ಕುಟುಂಬದ ಈಗಿನ ಸ್ಥಿತಿ ಹೇಗಿದೆ ಎಂಬುವುದು ನಿಮಗೆ ತಿಳಿದಿದೆಯೇ ? ಹರೀಶ್ ಪೂಜಾರಿ ಕುಟುಂಬದವರ ಭರವಸೆ ಪೂರೈಸದ ಇವರಿಂದ ಬಂಟ್ವಾಳದಲ್ಲಿ ಬದಲಾವಣೆ ತರಲು ಸಾಧ್ಯವೇ ?

ಹರೀಶ್ ಪೂಜಾರಿ ಮನೆಗೆ ಬೀಗ : ಮೊದಲೇ ಕಾನ್ಸರ್ ಪೀಡಿತರಾಗಿದ್ದ ಹರೀಶ್ ಪೂಜಾರಿಯ ತಂದೆ, ಮಗನ ಹತ್ಯೆಯಿಂದ ತೀವ್ರವಾಗಿ ಮನನೊಂದು ಮತ್ತಷ್ಟು ಅನಾರೋಗ್ಯಕ್ಕೆ ಒಳಗಾಗಿದ್ದರು. ಬಳಿಕ ಎರಡೇ ತಿಂಗಳಲ್ಲಿ ಅವರು ಮೃತಪಟ್ಟಿದ್ದಾರೆ . ಮಗ, ಪತಿಯನ್ನು ಕಳೆದುಕೊಂಡು ಕೊರಗುತ್ತಿದ್ದ ಹರೀಶ್ ಪೂಜಾರಿಯ ತಾಯಿ ಸೀತಮ್ಮ ಅವರೂ ಆರೋಗ್ಯದಲ್ಲೂ ಏರುಪೇರು ಉಂಟಾಗಿ ಹಾಸಿಗೆ ಹಿಡಿದಿದ್ದಾರೆ .ತಂದೆ, ಅಣ್ಣನನ್ನು ಕಳೆದುಕೊಂಡ ಹರೀಶ್ ಪೂಜಾರಿಯ ಸಹೋದರಿ ಮಿತಾಲಕ್ಷ್ಮೀಗೆ ಮನೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಸ್ಥಿತಿ ಉಂಟಾಗಿದೆ. ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಖಾಸಗಿ ಸಂಸ್ಥೆಯಲ್ಲಿ ಮತ್ತೆ ಕೆಲಸ ಮುಂದು ವರಿಸಿರುವ ಮಿತಾಲಕ್ಷ್ಮೀ ಕುಟುಂಬಕ್ಕೆ ದುಡಿಮೆಯಿಂದ ಬರುವ ಅಲ್ಪ ಆದಾಯವೇ ಜೀವನಕ್ಕೆ ಆಧಾರವಾಗಿದೆ.

ಒಂದೆಡೆ ಮನೆಗೆ ಆಧಾರವಾಗಿ ಮನೆ ಬೆಳಗಿಸಬೇಕಾಗಿದ್ದ ಅಣ್ಣನನ್ನು ಕಳೆದುಕೊಂಡಿರುವ ಮಿತಾಲಕ್ಷ್ಮೀ ಇನ್ನೊಂದೆಡೆ ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಶಂಭೂರಿನಲ್ಲಿರುವ ತನ್ನ ಮಾವನ ಮನೆಯಲ್ಲಿ ತಾಯಿ ಯೊಂದಿಗೆ ಉಳಿದುಕೊಂಡಿದ್ದಾರೆ.ಹರೀಶ್ ಪೂಜಾರಿ ಸಹೋದರಿ ಮಿತಾಲಕ್ಷಿ್ಮೀಗೆ ಕೆಲಸ ಒದಗಿಸಿಕೊಡುವ ಬಗ್ಗೆ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಹಲವು ಭರವಸೆ ನೀಡಿದ್ದರು. ಅಲ್ಲದೆ ಮಿತಾಲಕ್ಷ್ಮೀಯಿಂದ ಕೆಲಸದ ಅರ್ಜಿ ಹಾಗೂ ಬಯೋಡೇಟಾ ಪಡೆದುಕೊಂಡಿದ್ದರು. ಆದರೆ ಇವೆಲ್ಲ ನಡೆದು 2 ವರ್ಷ ಕಳೆದರೂ ಅವರಿಗೆ ಯಾರಿಂದಲೂ ಕೆಲಸ ದೊರಕಿಲ್ಲ. ಅದೇ ಹಳೆಯ ಕೆಲಸನ್ನು ಮಾಡುತ್ತಾ ಅಲ್ಪ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲ್ ಅವರೇ ,ಉಳಿಪಾಡಿ ರಾಜೇಶ್ ನಾಯ್ಕ್ ಅವರೇ ,ಉಸ್ತುವಾರಿ ಸಚಿವ ರಮಾನಾಥ ರೈ ಅವರೇ ಇದೇನಾ ಬದಲಾವಣೆ ,ಇದೇನಾ ಸೌಹಾರ್ದ ,ಬಿಲ್ಲವ ಸಮುದಾಯ ಉತ್ತರ ಕೇಳುತಿದೆ ,ಉತ್ತರಿಸಿ

0 comments: