Saturday, January 20, 2018

ಕೋಟಿ ಚೆನ್ನಯವರ ಅಕ್ಕ ಕಿನ್ನಿದಾರು ಇದ್ದ ಮನೆಯ ವಿಡಿಯೋ ಮತ್ತು ವಿವರಣೆ ಇಲ್ಲಿದೆ ನೋಡಿ

ಆ ಕಾಲದಲ್ಲಿ ಬ್ರಾಹ್ಮಣರಲ್ಲಿ ಒಂದು ಆಚಾರವಿತ್ತು ಹೆಣ್ಣು ಋತುಮತಿಯಾಗವುದಕ್ಕೆ ಮೊದಲು ಮದುವೆ ಮಾಡಬೇಕು ಇಲ್ಲಾಂದ್ರೆ ಕಣ್ಣಿಗೆ ಬಟ್ಟೆಕಟ್ಟಿ ಕಾಡಿಗೆ ಬಿಡಬೇಕು, ಈ ಹೆಣ್ಣಿನ ಪರಿಸ್ಥಿತಿಯೂ ಹಾಗೇ ಆಯ್ತು ಆಚಾರಕ್ಕೆ ಅಪಚಾರವೆಸಗಿದಂತೆ ಭಟ್ರು ಹುಡುಗಿಯನ್ನು ಕಾಡಿನಲ್ಲಿ ಬಿಟ್ಟು ಬರುತ್ತಾರೆ. ಅಸಾಯಕಳಾದ ಆಕೆ ಕಾಡಮಧ್ಯದಲ್ಲಿ ಕೂಗುತ್ತಿರಬೇಕಾದರೆ ಮೂರ್ತೆದಾರಿಕೆಗೆಂದು ಕಾಡಿಗೆ ಬಂದ ಸಾಯಣ ಬೈದ್ಯ. ಎಂಬವರಿಗೆ ಈ ಹೆಣ್ಣು ಕಾಣಸಿಗುತ್ತಾಳೆ...ಅಮಾಯಕ ಹೆಣ್ಣಿಗೆ ಆಸರೆಯಾಗಿ ತನ್ನ ಮನೆಗೆ ಕರೆದುಕೊಂಡು ಹೋಗಿ "ದೇಯಿ" ಬೈದೆದಿ ಎಂದು ಹೆಸರಿನ್ನಿರಿಸಿ ಸಾಕುತ್ತಾರೆ. ಕೆಲವು ಕಾಲದ ಬಳಿಕ ದೇಯಿಗೆ ಕಾರ್ಗಲ್ಲ ತೋಟದ ಕಾಂತಣ್ಣಬೈದ್ಯ ಎಂಬವರಿಗೆ ಮದುವೆ ಮಾಡಿಕೊಡುತ್ತಾರೆ ಪ್ರಥಮ ಹರಿಗೆಯಲ್ಲಿ ದೇಯಿಯು ಹೆಣ್ಣುಮಗುವಿಗೆ ಜನ್ಮವೀಯುತ್ತಾಳೆ...ಆ ಮಗಳಿಗೆ" ಕಿನ್ನಿದಾರು" ಎಂದು ಹೆಸರಿಡುತ್ತಾರೆ. ದ್ವಿತೀಯ ಗರ್ಭದಲ್ಲಿ ದೇಯಿಯು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ ...ಅವರೇ ತುಳು ನಾಡಿನಲ್ಲಿ ಕಾರಣಿಕವನ್ನು ಮೆರೆದು ತುಳು ನಾಡಿನ ಇತಿಹಾಸದ ಪುಟದಲ್ಲಿ ಅಮರರಾಗಿ ನೆಲೆ ನಿಂತ ವೀರ ಪುರುಷರಾದ ಕೋಟಿ ಚೆನ್ನಯ್ಯರು


0 comments: