Thursday, February 8, 2018

ಹರೀಶ್ ಪೂಜಾರಿ ಮನೆಗೆ ಅಮಿತ್ ಶಾ ಭೇಟಿ ಯಾಕಿಲ್ಲ ? ಹರೀಶ್ ಪೂಜಾರಿ ಹಿಂದೂ ಅಲ್ಲವೇ ನಳಿನ್ ಕುಮಾರ್ ಕಟೀಲ್ ಅವರೇ ! ಅಥವಾ ಬಿಲ್ಲವ ಎಂಬ ತಾತ್ಸಾರವೇ ?

ಏನು ತಪ್ಪು ಮಾಡದ ಅಮಾಯಕ ಬಿಲ್ಲವ ಯುವಕ ಹರೀಶ್ ಪೂಜಾರಿಯನ್ನು ಕೊಚ್ಚಿ ಕೊಲ್ಲುತಾರೆ.ಹರೀಶ್ ಪೂಜಾರಿ ಸಾವಿನ ನಂತರ ಇಡೀ ಕುಟುಂಬವೇ ದಿಕ್ಕು ತೋಚದೆ ಬೀದಿಗೆ ಬಂದಿದೆ .ಯಾವೊಬ್ಬ ರಾಜಕೀಯ ನಾಯಕನು ಹರೀಶ್ ಪೂಜಾರಿ ಅವರ ಮನೆಯವರ ಬೇಡಿಕೆಯನ್ನು ಪೂರೈಸಲು ಆಗದೆ ನಾಟಕವಾಡುತಿದ್ದಾರೆ .

ಹರೀಶ್ ಪೂಜಾರಿ ಮನೆಗೆ ಬೀಗ : ಮೊದಲೇ ಕಾನ್ಸರ್ ಪೀಡಿತರಾಗಿದ್ದ ಹರೀಶ್ ಪೂಜಾರಿಯ ತಂದೆ, ಮಗನ ಹತ್ಯೆಯಿಂದ ತೀವ್ರವಾಗಿ ಮನನೊಂದು ಮತ್ತಷ್ಟು ಅನಾರೋಗ್ಯಕ್ಕೆ ಒಳಗಾಗಿದ್ದರು. ಬಳಿಕ ಎರಡೇ ತಿಂಗಳಲ್ಲಿ ಅವರು ಮೃತಪಟ್ಟಿದ್ದಾರೆ . ಮಗ, ಪತಿಯನ್ನು ಕಳೆದುಕೊಂಡು ಕೊರಗುತ್ತಿದ್ದ ಹರೀಶ್ ಪೂಜಾರಿಯ ತಾಯಿ ಸೀತಮ್ಮ ಅವರೂ ಆರೋಗ್ಯದಲ್ಲೂ ಏರುಪೇರು ಉಂಟಾಗಿ ಹಾಸಿಗೆ ಹಿಡಿದಿದ್ದಾರೆ .ತಂದೆ, ಅಣ್ಣನನ್ನು ಕಳೆದುಕೊಂಡ ಹರೀಶ್ ಪೂಜಾರಿಯ ಸಹೋದರಿ ಮಿತಾಲಕ್ಷ್ಮೀಗೆ ಮನೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಸ್ಥಿತಿ ಉಂಟಾಗಿದೆ. ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಖಾಸಗಿ ಸಂಸ್ಥೆಯಲ್ಲಿ ಮತ್ತೆ ಕೆಲಸ ಮುಂದು ವರಿಸಿರುವ ಮಿತಾಲಕ್ಷ್ಮೀ ಕುಟುಂಬಕ್ಕೆ ದುಡಿಮೆಯಿಂದ ಬರುವ ಅಲ್ಪ ಆದಾಯವೇ ಜೀವನಕ್ಕೆ ಆಧಾರವಾಗಿದೆ.

ಒಂದೆಡೆ ಮನೆಗೆ ಆಧಾರವಾಗಿ ಮನೆ ಬೆಳಗಿಸಬೇಕಾಗಿದ್ದ ಅಣ್ಣನನ್ನು ಕಳೆದುಕೊಂಡಿರುವ ಮಿತಾಲಕ್ಷ್ಮೀ ಇನ್ನೊಂದೆಡೆ ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಶಂಭೂರಿನಲ್ಲಿರುವ ತನ್ನ ಮಾವನ ಮನೆಯಲ್ಲಿ ತಾಯಿ ಯೊಂದಿಗೆ ಉಳಿದುಕೊಂಡಿದ್ದಾರೆ.ಹರೀಶ್ ಪೂಜಾರಿ ಸಹೋದರಿ ಮಿತಾಲಕ್ಷಿ್ಮೀಗೆ ಕೆಲಸ ಒದಗಿಸಿಕೊಡುವ ಬಗ್ಗೆ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಹಲವು ಭರವಸೆ ನೀಡಿದ್ದರು. ಅಲ್ಲದೆ ಮಿತಾಲಕ್ಷ್ಮೀಯಿಂದ ಕೆಲಸದ ಅರ್ಜಿ ಹಾಗೂ ಬಯೋಡೇಟಾ ಪಡೆದುಕೊಂಡಿದ್ದರು. ಆದರೆ ಇವೆಲ್ಲ ನಡೆದು 2 ವರ್ಷ ಕಳೆದರೂ ಅವರಿಗೆ ಯಾರಿಂದಲೂ ಕೆಲಸ ದೊರಕಿಲ್ಲ. ಅದೇ ಹಳೆಯ ಕೆಲಸನ್ನು ಮಾಡುತ್ತಾ ಅಲ್ಪ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು ‘ಹಿಂದು ಹತ್ಯೆ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಹಿಂದುತ್ವ ಪಾದಯಾತ್ರೆ ಹಾಗೂ ಬೈಕ್‌ ರಾಲಿ ನಡೆಸುವಂತೆ ಅಮಿತ್‌ ಶಾ ಆದೇಶ ನೀಡಿದ್ದಾರೆ. 18ರಿಂದ 20 ರಂದು ದಕ್ಷಿಣಕನ್ನಡಕ್ಕೆ ಭೇಟಿ ನೀಡಲಿದ್ದು ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ,ಶರತ್ ಮಡಿವಾಳ ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ .

ಬಿಲ್ಲವ ಸಮುದಾಯದ ಪ್ರಶ್ನೆ ಇಷ್ಟೇ ಶರತ್ ಮಡಿವಾಳ ,ದೀಪಕ್ ರಾವ್ ಅವರ ಮನೆಗೆ ಭೇಟಿ ನೀಡಲಿ ನಮ್ಮ ವಿರೋಧವಿಲ್ಲ ,ಏನು ತಪ್ಪು ಮಾಡದ ಹರೀಶ್ ಪೂಜಾರಿ ಹತ್ಯೆ ಕೂಡ ಆಗಿದೆ ಆತನ ಮನೆಗೆ ಯಾಕೆ ನೀವು ಭೇಟಿ ನೀಡಲ್ಲ ,ಹರೀಶ್ ಪೂಜಾರಿ ಹಿಂದೂ ಅಲ್ಲವೇ ?ಮಂಗಳೂರಿನ ಸಂಸದ ನಳಿನ್ ಕುಮಾರ್ ಕಟೀಲ್ ಅವರೇ ನಿಮಗೆ ಹರೀಶ್ ಪೂಜಾರಿ ಮನೆಯ ಪರಿಸ್ಥಿತಿ ತಿಳಿದಿಲ್ಲವೇ ?ಅಥವಾ ತಿಳಿದು ತಿಳಿಯದ ಹಾಗೆ ನಾಟಕ ಮಾಡುತ್ತಿದ್ದೀರಾ ? ಅಥವಾ ಬಿಲ್ಲವ ಎಂಬ ಕಾರಣಕ್ಕೆ ತಾತ್ಸಾರವೇ ? ಉತ್ತರ ಕೇಳುತಿದೆ ಬಿಲ್ಲವ ಸಮುದಾಯ .

0 comments: