ಮಂಗಳೂರು ನಗರ ದಕ್ಷಿಣದಲ್ಲಿ ಬಿಜೆಪಿ ಗೆಲ್ಲಬೇಕಾದರೆ! 63,100 ಸಾವಿರ ಬಿಲ್ಲವರ ಮತ ಪ್ರಮುಖ ಪಾತ್ರ ವಹಿಸುತ್ತದೆ. ಈ ಬಾರಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಗೆಲ್ಲಬೇಕಾದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬಿಜೆಪಿ ಮುಖಂಡ ಸಂಘಪರಿವಾರಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡು ತನ್ನ ಸಮುದಾಯದ ಜೊತೆಗೆ ಇತರ ಸಮುದಾಯದವರೊಂದಿಗೆ ಒಡನಾಟವಿದ್ದು ಯಾವುದೇ ಭೇದ ಭಾವ ತೋರಿಸದೆ ಪರಿಪೂರ್ಣವಾಗಿ ಸ್ವಂದಿಸುತ್ತಿರುವ ಮಗ್ಧ ಮನಸ್ಸಿನ ಅಜಾತಶತ್ರುವಾಗಿದ್ದು ಕೊಂಡು ಎಲ್ಲರ ಮನಸ್ಸನ್ನು ಗೆದ್ದಿರುವ ಶ್ರೀ ಚಂದ್ರಶೇಖರ್ ಉಚ್ಚಿಲ್ ರವರನ್ನು ಮುಂದಿನ ಅಭ್ಯರ್ಥಿ ಎಂದು ಘೋಷಿಸಿ ಬಿಲ್ಲವ ಸಮುದಾಯದ ನಾಯಕರು ಪಟ್ಟು ಹಿಡಿದಿದ್ದಾರೆ.
ಈ ಕ್ಷೇತ್ರದಲ್ಲಿ 63 ಸಾವಿರ ಬಿಲ್ಲವ ಮತದಾರರು, 42 ಸಾವಿರ ಕ್ರೈಸ್ತ - 40 ಸಾವಿರ ಮುಸ್ಲಿಂ ಮತದಾರರು ಅನುಕ್ರಮವಾಗಿ ಮುಂದಿದ್ದಾರೆ. ಹೆಚ್ಚುವರಿಯಾಗಿ ಇತರ ಸಮುದಾಯದ ಮತವನ್ನು ಪಡೆದ ಕಾರಣ ಸುಲಭ ಜಯ ಸಾಧಿಸಿದರು. ಈ ಬಾರಿ ಇದೇ ಮಾನದಂಡ ವರ್ಕ್ ಔಟ್ ಆದರೆ ಮತ್ತೆ ಈ ಕ್ಷೇತ್ರ ಕಾಂಗ್ರೇಸ್ ಪಾಲಾಗಬಹುದೆಂಬ ಲೆಕ್ಕಚಾರ ಹೊಂದಿರುವ ಬಿಜೆಪಿ ಹೈ ಕಮಾಂಡ್ 63 ಸಾವಿರದಷ್ಟಿರುವ ಬಿಲ್ಲವ ಮತವನ್ನು ಹಿಡಿಯಬಲ್ಲ ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಜಿ.ಎಸ್.ಬಿ ಮತದಾರರ ಜೊತೆ ಇತರ ಸಮುದಾಯವನ್ನು ತನ್ನ ತೆಕ್ಕೆಗೆ ಎಳೆಯುವ ಮೂಲಕ ಲೋಬೊರವರ ನಾಗಲೋಟಕ್ಕೆ ತಡೆ ನೀಡುವ ಸಾದ್ಯತೆಯೂ ಇದೆ. ಹೀಗಾದಲ್ಲಿ ಚಂದ್ರಶೇಖರ್ ಉಚ್ಚಿಲ್ ಇಲ್ಲಿ ಪ್ರಮುಖ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಯಾಕೆಂದರೆ 2 ಕಳೆದ ವಿಧಾನ ಸಭೆಯಲ್ಲಿ 60% ಅಲ್ಪ ಸಂಖ್ಯಾತರನ್ನು ಹೊಂದಿರುವ ಉಳ್ಳಾಲ (ಈಗಿನ ಮಂಗಳೂರು) ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಲ್ಪ ಮತಗಳಿಂದ್ದ ಪರಾಭವ ಗೊಂಡರೂ ಈಗಿನ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ 10 ವಾರ್ಡ್'ಗಳು ಅಂದಿನ ಉಳ್ಳಾಲ ಕ್ಷೇತ್ರಕ್ಕೆ ಸೇರಿತ್ತು. ಈ ವಾರ್ಡ್'ಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬಿಲ್ಲವ ಮತದಾರರಿದ್ದರು. ಈ 10 ವಾರ್ಡ್'ಗಳಲ್ಲಿ ಇತರೇ ಲೀಡ್'ನಲ್ಲಿ ಕೂಡ ಇದ್ದರೂ ಎಂಬ ಅಂಶವನ್ನು ಪಕ್ಷದ ಮೂಲಗಳು ತಡವಾಗಿ ಕಂಡು ಹಿಡಿದಿದೆ. ಈ ಬಾರಿ ಮಂಗಳೂರು ದಕ್ಷಿಣದಿಂದ ಚಂದ್ರಶೇಖರ್ ಉಚ್ಚಿಲ್ ಚುನಾವಣಾ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ .
0 comments: