Wednesday, February 14, 2018

ಹಸೆಮಣೆ ಏರಿ ಇನ್ನೊಂದು ಮನೆಯ ಬೆಳಕಾಗಬೇಕಿದ್ದ ಒಂದೇ ಮನೆಯ ಮೂವರು ಸಹೋದರಿಯರು ತನ್ನ ಮನೆಯ ಕೋಣೆಯಲ್ಲಿ ಹೊರ ಪ್ರಪಂಚದ ಅರಿವೇ ಇಲ್ಲದೆ ಬದುಕಿನಲ್ಲಿ ಕತ್ತಲೆ ತುಂಬಿ ಜೀವನ ಸಾಗಿಸುತ್ತಿರುವ ಹೃದಯವಿದ್ರಾವಕ ಸಂಗತಿಯಿದು

ಹಸೆಮಣೆ ಏರಿ ಇನ್ನೊಂದು ಮನೆಯ ಬೆಳಕಾಗಬೇಕಿದ್ದ ಒಂದೇ ಮನೆಯ ಮೂವರು ಸಹೋದರಿಯರು ತನ್ನ ಮನೆಯ ಕೋಣೆಯಲ್ಲಿ ಹೊರ ಪ್ರಪಂಚದ ಅರಿವೇ ಇಲ್ಲದೆ ಬದುಕಿನಲ್ಲಿ ಕತ್ತಲೆ ತುಂಬಿ ಜೀವನ ಸಾಗಿಸುತ್ತಿರುವ ಹೃದಯವಿದ್ರಾವಕ ಸಂಗತಿಯಿದು. ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ರಕ್ಷಿತಾ ನಿವಾಸ(ದೇವಸ್ಥಾನದ ಬಳಿ)ಯಲ್ಲಿ ವಾಸ್ತವ್ಯವಿರುವ ಶ್ರೀಧರ ಪೂಜಾರಿ ಮತ್ತು ರಜನಿ ದಂಪತಿಗಳದ್ದು ತೀರಾ ಬಡತನದ ಕುಟುಂಬ. ಇವರಿಗೆ ಮೂವರು ಹೆಣ್ಣುಮಕ್ಕಳು. ದೊಡ್ಡವಳು ರಕ್ಷಿತಾ 24 ವರ್ಷ, ಎರಡನೆಯವಳು ಅಶ್ವಿತಾ 20 ವರ್ಷ ಮತ್ತು ಮೂರನೆಯವಳು ನಮ್ರತಾ 16 ವರ್ಷ. ಮೂವರೂ ಮಕ್ಕಳು ತಮ್ಮ ದಿನನಿತ್ಯದ ಕೆಲಸಗಳಿಗೆ ತಾಯಿಯನ್ನೇ ಅವಲಂಬಿತವಾಗಿರಬೇಕಾದುದು ತುಂಬಾ ಬೇಸರದ ಸಂಗತಿ. ಮೂವರೂ ಕೂಡ ಹುಟ್ಟಿನಿಂದಲೇ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು ಏನೂ ಅರಿಯದೆ ತಮ್ಮ ಜೀವನದಲ್ಲಿ ಒಂದೂ ಶುಭಗಳಿಗೆ ಕಾಣದೆ ಇಳಿವಯಸ್ಸಿನ ಹೆತ್ತವರಿಗೂ ಆಸರೆಯಾಗದಂತಹ ಚಿಂತಾಜನಕ ಪರಿಸ್ಥಿತಿ. ತಾಯಿ ರಜನಿಯವರಿಗೆ ದಿನನಿತ್ಯದ ಕೆಲಸಗಳ ಜೊತೆ ಪ್ರಾಯಕ್ಕೆ ಬಂದ ಈ ಮೂರು ಮಕ್ಕಳನ್ನು ಇನ್ನೂ ಎಳೆ ಮಕ್ಕಳಂತೆ ನೋಡಬೇಕಾದ ಅಸಹಾಯಕತೆ. ವಯಸ್ಸಿನ ಅಸಮರ್ಥತೆಯನ್ನು ಬದಿಗಿಟ್ಟು ಮನೆಯ ಎಲ್ಲಾ ಜವಾಬ್ದಾರಿಗಳನ್ನು ಹೊರಬೇಕಾದ ಅನಿವಾರ್ಯತೆ ತಂದೆ ಶ್ರೀಧರ ಪೂಜಾರಿಯವರಿಗೆ. ಈ ಮೂರು ಹೆಣ್ಣು ಮಕ್ಕಳ ಅಸಾಹಯಕ ಹೆತ್ತವರ ಕಣ್ಣೀರ ಒರೆಸುವ ಕೈಗಳಾಗಿ ಸಹಾಯಹಸ್ತ ನೀಡುವ ದಿಶೆಯಿಂದ *ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕ ದಾನಿಗಳಿಂದ ನೆರವಿಗಾಗಿ ಕೊರಿಕೆ ಸಲ್ಲಿಸುತಿದೆ ಮಾಹಿತಿಗಾಗಿ -9901464713 (ರಾಜೇಶ್ ಕೋಟ್ಯಾನ್ ) ರಜನಿ , ವಿಜಯ ಬ್ಯಾಂಕ್ IFSC-VIJB0001029 A/C-102901011003283 . ಬೆಳ್ತಂಗಡಿ .

1 comment: