ಮಂಗಳೂರು: ಶ್ರೀ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ತಮ್ಮ ಆತ್ಮಕಥೆ ಸಾಲಮೇಳದ ಮರು ಮುದ್ರಿತ ಪ್ರತಿಯನ್ನು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಬಿಡುಗಡೆಗೊಳಿಸಿದರು.ಈ ಸಂದರ್ಭ ಮಾತನಾಡಿದ ಜನಾರ್ದನ ಪೂಜಾರಿ, ಮಧು ಬಂಗಾರಪ್ಪ ಅವರ ಹೇಳಿಕೆಗೆ ಖಡಕ್ ತಿರುಗೇಟು ನೀಡಿದ್ದಾರೆ. ಈ ಹಿಂದೆ ಪೂಜಾರಿಯವರ ಆತ್ಮಕಥೆ ಸಾಲಮೇಳದ ಸಂಗ್ರಾಮ ಪುಸ್ತಕದಲ್ಲಿ ಪೂಜಾರಿ ಬರೆದಿರುವುದು ಸುಳ್ಳು ಎಂದು ಮಧು ಬಂಗಾರಪ್ಪ ಹೇಳಿದ್ದರು.
ಇದೀಗ ಪೂಜಾರಿ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ನನ್ನ ಆತ್ಮಚರಿತ್ರೆಯಲ್ಲಿ ನಾನು ಏನು ಬರೆದಿದ್ದೇನೋ ಅವೆಲ್ಲವೂ ಸತ್ಯ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಪುಸ್ತಕದಲ್ಲಿ ನಾನು ಸತ್ಯವನ್ನೇ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.ನಾವು ಬಿಲ್ಲವರು. ಸತ್ಯ ಹೇಳಲು ಭಯಪಡಲ್ಲ. ಮಧು ಬಂಗಾರಪ್ಪ ಅವರ ಕುರಿತು ಬರೆದಿರುವುದು ಸತ್ಯ ಎಂದು ಅವರ ಹೇಳಿಕೆಗೆ ದಿಟ್ಟ ಉತ್ತರ ನೀಡಿದ್ದಾರೆ.
0 comments: