ಮಂಗಳೂರು : ರಾಜ್ಯ ನಗರಾಭಿವೃದ್ಧಿ ಸಚಿವ ಆರ್ ರೋಶನ್ ಬೇಗ್ ಅವರು ಕೆಲ ಸಮಯಗಳ ಹಿಂದೆ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಮುದ್ರದ ಉಪ್ಪುನೀರನ್ನು ಬಳಕೆಗೆ ಯೋಗ್ಯವನ್ನಾಗಿಸುವ ನಿಟ್ಟಿನಲ್ಲಿ ಸಂಸ್ಕರಣೆ ಯೋಜನೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ನೇತೃತ್ವದ ನಿಯೋಗ ಚೆನ್ನೈಗೆ ತೆರಳಿ ಅಲ್ಲಿನ ಮಾದರಿಯಲ್ಲಿ ಇಲ್ಲೂ ಕೂಡಾ ಸಮುದ್ರದ ನೀರನ್ನು ಸಂಸ್ಕರಿಸಿ ಬಳಕೆಗೆ ಯೋಗ್ಯ ಮಾಡುವ ನಿಟ್ಟಿನಲ್ಲಿ ವಿಶೇಷ ಅಧ್ಯಯನ ನಡೆಸಿದೆ.
“ಫೆಬ್ರವರಿ 12ರಂದು ಚೆನ್ನೈನ ಮಿಂಜೂರಿಗೆ ತೆರಳಿದ್ದ ನಿಯೋಗ ಶುದ್ಧೀಕೃತ ಸಮುದ್ರ ನೀರಿನ ಬಳಕೆ, ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿದ್ದು, ಮಂಗಳೂರಿನಲ್ಲೂ ಶೇ 100ರಷ್ಟು ಇದನ್ನು ಅನುಷ್ಠಾನಗೊಳಿಸಲು ಸಾಧ್ಯವಿದೆ. ಇಲ್ಲಿನ ಕೈಗಾರಿಕೆಗಳಿಗೆ ನೀರನ್ನು ಪೂರೈಕೆ ಮಾಡಬಹುದಾಗಿದೆ” ಎಂದು ಮೇಯರ್ ಹೇಳಿದ್ದಾರೆ.
“2010ರ ಜುಲೈನಿಂದ ಚೆನ್ನೈನಲ್ಲಿ 100 ಎಂ ಎಲ್ ಡಿ (ಪ್ರತಿ ನಿತ್ಯ ಮಿಲಿಯನ್ ಲೀಟರ್) ಸಾಮಥ್ರ್ಯದ ಒಟ್ಟು 70 ಎಕರೆ ಸ್ಥಳದಲ್ಲಿ ಸೀವಾಟರ್ ಡಿಸಲೈನೇಶನ್ ಪ್ಲ್ಯಾಂಟ್ ಕಾರ್ಯನಿರ್ವಹಿಸುತ್ತಿದೆ. ಇಡೀ ಉತ್ತರ ಮತ್ತು ಮಧ್ಯ ಚೆನ್ನೈಗೆ ಇದೇ ಘಟಕದಿಂದ ಉಚಿತವಾಗಿ ನೀರು ಪೂರೈಕೆಯಾಗುತ್ತಿದೆ. ಒಂದು ಸಾವಿರ ಲೀಟರ್ ನೀರು ಸಂಸ್ಕøಣೆಗೆ 55 ರೂಪಾಯಿ ಖರ್ಚಾದರೆ ಅಲ್ಲಿನ ಕೈಗಾರಿಕೆಗಳಿಗೆ 70 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಮಂಗಳೂರಿನಲ್ಲೂ ಈ ಘಟಕ ಸ್ಥಾಪಿಸುವ ಕುರಿತಂತೆ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು” ಎಂದು ಮೇಯರ್ ಹೇಳಿದ್ದಾರೆ.
0 comments: