Saturday, March 3, 2018

ಮಂಗಳೂರು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸತೀಶ್ ಕುಂಪಲ

ಮಂಗಳೂರು : ಕಾಂಗ್ರೆಸ್ ನ ಭದ್ರ ಕೋಟೆಯಾಗಿರುವ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಮಲ ಅರಳಿಸಲು ಈ ಬಾರಿ ಕಾರ್ಯಕರ್ತರ ಜೊತೆ ಕೆಲಸಮಾಡುವ, ಸಂಘಟನಾತ್ಮಕವಾಗಿ ಪಕ್ಷವನ್ನು ಕಟ್ಟಿ ಬೆಳೆಸಿದ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಉತ್ಸಾಹಿತವಾಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ . ಬಂಟ್ವಾಳದಂತೆಯೇ ಉಳ್ಳಾಲ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ಹೈಕಮಾಂಡ್ ವಹಿಸಿರುವ ಕಾರಣ ಅಭ್ಯರ್ಥಿಯನ್ನು ಅಳೆದು ತೂಗಿ ಆರಿಸುವ ಲಕ್ಷಣ ಕಾಣುತ್ತಿದೆ.82128 ಮುಸ್ಲಿಂ ಮತಗಳನ್ನು ಹೊಂದಿರು ಕ್ಷೇತ್ರದಲ್ಲಿ 95576 ಹಿಂದುಗಳ ಮತಗಳು, 9113 ಕ್ರಿಶ್ಚಿಯನ್ ಮತಗಳು ಇದೆ‌‌.

ಮುಸ್ಲಿಂ ಮತಗಳು ಸುನ್ನಿ ಮತ್ತು ಸಲಫಿ ಮತಗಳಾಗಿ ಚದುರಿದರೆ, ಹಿಂದುಗಳಲ್ಲಿ ಜಾತಿವಾರು ಲೆಕ್ಕಾಚಾರ ನಡೆಯುತ್ತಿದೆ. ಅತಿ ಹೆಚ್ಚಿನ‌ ಸಂಖ್ಯೆಯಲ್ಲಿ ಬಿಲ್ಲವ ಮತಗಳು ಇರುವ ಕ್ಷೇತ್ರದಲ್ಲಿ ಇದೂ ಕೂಡ ಒಂದು. ಸುಮಾರು 54408 ಬಿಲ್ಲವ ಮತಗಳು ಈ ಕ್ಷೇತ್ರದಲ್ಲಿ ಇದೆ. 13900 ಬಂಟ ಸಮಾಜ, 7112 ಕುಲಾಲ್ ಸಮಾಜ, 3200 ಮೊಗವೀರ ಸಮಾಜ, 2970 ಗಟ್ಟಿ ಸಮಾಜ ಹಾಗೂ 12968 ಇತರೆ ಸಮಾಜದವರ ಮತಗಳು ಇವೆ‌‌.ಬಿಜೆಪಿಯಿಂದ ಸತೀಶ್ ಕುಂಪಲ ಸ್ಪರ್ಧಿಸುವುದು ಬಹುತೇಕ ಖಚಿತ ಎನಿಸಿದೆ.

inputs from suddi24x7

0 comments: