ವಿಧಾನಸಭಾ ಚುನಾವಣೆಗೆ ಇನ್ನೇನು ಕ್ಷಣಗಣನೆ ಶುರುವಾಗಿ ಶುರುವಾಗಿ ಬಿಟ್ಟಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ತೊಡಗಿದೆ .ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಲ್ಲವ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ಬಿಲ್ಲವ ಮುಖಂಡರು ಮತ್ತು ಬಿಲ್ಲವ ಸಮುದಾಯದವರು ರಾಷ್ಟ್ರೀಯ ಪಕ್ಷಗಳಿಗೆ ಒತ್ತಡ ಕೂಡ ಹಾಕಿದ್ದಾರೆ. ಸದ್ಯದ ಬೆಳವಣಿಗೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸುನೀಲ್ ಕುಮಾರ್,ಕಾಪು ಕ್ಷೇತ್ರದಿಂದ ವಿನಯ ಕುಮಾರ್ ಸೊರಕೆ , ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ವಸಂತ ಬಂಗೇರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಗೋಪಾಲ ಪೂಜಾರಿಯವರು ಚುನಾವಣೆ ಕಣಕ್ಕೆ ಇಳಿಯುವುದು ಬಹುತೇಕ ಖಚಿತವೆನಿಸಿದೆ.ಈ 4 ಅಭ್ಯರ್ಥಿಗಳ ಗೆಲುವು ಬಹುತೇಕ ಖಚಿತ ವೇನಿಸಿದರು ಬಲ್ಲವರಾದ ನಾವು ಈ 4ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ.
ಅಲ್ಲದೆ ಬಿಲ್ಲವ ಸಮುದಾಯದ ಪ್ರಮುಖ ನಾಯಕರು ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಇವರಲ್ಲಿ ಮೂಡುಬಿದಿರೆ ಕ್ಷೇತ್ರದಿಂದ ಉಮಾನಾಥ ಕೋಟ್ಯಾನ್ ಮಂಗಳೂರು ಉತ್ತರದಿಂದ ಸತ್ಯಜಿತ್ ಸುರತ್ಕಲ್ ಮತ್ತು ಮಂಗಳೂರು ಉಳ್ಳಾಲ ಕ್ಷೇತ್ರದಿಂದ ಸತೀಶ್ ಕುಂಪಲ ,ಚಂದ್ರಹಾಸ ಉಚ್ಚಿಲ ಕವಿತಾ ಸನಿಲ್ ಹರೀಶ್ ಕುಮಾರ್ ಕೇಶವ ಬಂಗೇರ ಇತರರು .
ಉಭಯ ಜಿಲ್ಲೆಯಲ್ಲಿ ದಶಕಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಬಿಲ್ಲವ ಸಮುದಾಯಕ್ಕೆ ರಾಜಕೀಯವಾಗಿ ಬೆನ್ನಿಗೆ ಚೂರಿ ಇರಿಯುತ್ತಾ ಬಂದಿದೆ .ಅದಕ್ಕೆ ಪೂರಕವಾದ ಉದಾಹರಣೆಗಳು ಹಲವಾರು ಇದೆ. ಅದಲ್ಲದೆ ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಲ್ಲವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪಕ್ಷಗಳು ಯಾವ ರೀತಿಯ ಪ್ರಾಶಸ್ಯ ನೀಡುತ್ತದೆ ಆ ನಿಟ್ಟಿನಲ್ಲಿ ಬಹುಸಂಖ್ಯಾತ ಬಿಲ್ಲವರು ಬಲ್ಲವರಾಗಿ ಪಕ್ಷ ನೋಡದೆ ವ್ಯಕ್ತಿ ನೋಡಿ ಮತ ಚಲಾಯಿಸಬೇಕು.ಈ ರೀತಿ ಮಾಡಿದರೆ ಮಾತ್ರ ಬಿಲ್ಲವ ಸಮುದಾಯದ ನಾಯಕರು ರಾಜಕೀಯವಾಗಿ ಮೇಲೆ ಬರುತ್ತಾರೆ. ಈ ರೀತಿ ಮಾಡಿದರೆ ಮಾತ್ರ ಬಿಲ್ಲವ ಸಮುದಾಯ ರಾಜಕೀಯವಾಗಿ ಮೇಲೆ ಬರಲು ಸಾಧ್ಯ,
ಇದೀಗ ಹಲವಾರು ಕ್ಷೇತ್ರಗಳಲ್ಲಿ ಬಿಲ್ಲವ ಅಭ್ಯರ್ಥಿಗಳಿಗೆ ಟಿಕೆಟ್ ಸಿಗಬಾರದು ಎಂದು ಕೆಲವು ದುಷ್ಟರು ಷಡ್ಯಂತ್ರ ರೂಪಿಸುತ್ತಿದ್ದಾರೆ .ಷಡ್ಯಂತ್ರ ಮಾಡುವ ವ್ಯಕ್ತಿಗಳಿಗೆ ಈ ಚುನಾವಣೆಯಲ್ಲಿ ಬಿಲ್ಲವರು ಹಾಕುವ ಮತವೇ ಉತ್ತರವಾಗಬೇಕು ಇದನ್ನೆಲ್ಲ ಅರಿತು ಬಿಲ್ಲವರು ಬಲ್ಲವರಾಗಿ ಪಕ್ಷ ನೋಡದೆ ವ್ಯಕ್ತಿ ನೋಡಿ ಮತ ಚಲಾಯಿಸಿ ಬಿಲ್ಲವ ಸಮುದಾಯದ ಏಳಿಗೆಗಾಗಿ ಶ್ರಮಿಸೋಣ
.
0 comments: