ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಸಮಾರಂಭ ಮಾಡಿದೆ. ಕರ್ನಾಟಕದ ಉಡುಪಿ ಜಿಲ್ಲೆಯ ಗುರುರಾಜ್ ಪೂಜಾರಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಕೀರ್ತಿ ಪಾತ್ರರಾಗಿದ್ದಾರೆ.
ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಗುರುರಾಜ್ ಬೆಳ್ಳಿಪದಕ ಗಳಿಸಿದ್ದಾರೆ. ಕ್ರೀಡಾಕೂಟ ಆರಂಭವಾದ ಮೊದಲ ದಿನವೇ ಭಾರತ ಬೆಳ್ಳಿಪದಕ ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಪುರುಷರ 56 ಕೆಜಿ ವಿಭಾಗದಲ್ಲಿ ಗುರುರಾಜ್ ಈ ದ್ವಿತೀಯ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಒಟ್ಟು 3 ಸುತ್ತು ನಡೆದ ಪಂದ್ಯದಲ್ಲಿ ಗುರುರಾಜ್ ಒಟ್ಟು 249 ಕೆ.ಜಿ. ಭಾರ ಎತ್ತುವ ಮೂಲಕ 2ನೇ ಸ್ಥಾನ ಪಡೆದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.
ಇದೇ ವಿಭಾಗದಲ್ಲಿ 261 ಕೆ.ಜಿ. ತೂಕ ಎತ್ತಿದ ಮಲೇಷಿಯಾದ ವೇಟ್ ಲಿಫ್ಟಿರ್ ಮಹ್ಮದ್ ಇಜಾರ್ ಅಹ್ಮದ್ ಚಿನ್ನದ ಪದಕ ಗಳಿಸಿದ್ದಾರೆ. ಶ್ರೀಲಂಕಾ ವೇಟ್ ಲಿಫ್ಟಿರ್ ಲಕ್ಮನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.ಟ್ರಕ್ ಚಾಲಕ ಪುತ್ರನಾಗಿರುವ ಗುರುರಾಜ್ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.ಪ್ರಸ್ತುತ ಭಾರತೀಯ ವಾಯುಸೇನೆಯ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
0 comments: