ವಿಧಾನ ಸಭಾ ಚುನಾವಣೆಗೆ ತಿಂಗಳುಗಳು ಬಾಕಿ ಇರುವಂತೆ ದಕ್ಷಿಣ ಕನ್ನಡ ಕಾಂಗ್ರೆಸ್ ನಲ್ಲಿ ಬಿಲ್ಲವರನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಮತ್ತು ಚುನಾವಣಾ ಕಣಕ್ಕೆ ಇಳಿಯುವ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಬಿಲ್ಲವ ಅಭ್ಯರ್ಥಿಗಳ ಹೆಸರು ಕಾಣೆಯಾಗುತಿದೆ ಎನ್ನಲಾಗಿದೆ.ಜಾತಿವಾರು ಲೆಕ್ಕಾಚಾರದಲ್ಲಿ ದ.ಕ. ಜಿಲ್ಲೆಯಲ್ಲಿ ಅಧಿಕ ಬಿಲ್ಲವ ಮತದಾರರಿದ್ದಾರೂ ಕೂಡ ಅಧಿಕಾರ ವಿಷಯದಲ್ಲಿ ಕಾಂಗ್ರೆಸ್ ಕಡೆಗಣಿಸುತಿ ದೆ ಎಂಬುವುದು ಒಂದು ದುರಂತದ ವಿಚಾರವೇ ಸರಿ .
ಕಳೆದ ಬಾರಿಯ ವಿಧಾನ ಸಭಾ ಚುನಾಣಾ ಕಣಕ್ಕೆ ಇಳಿದ ಕಾಂಗ್ರೆಸ್ ಅಭ್ಯರ್ಥಿಗಳ ಕ್ಷೇತ್ರದಲ್ಲಿ ಜಾತಿವಾರು ಆಗಿ ನೋಡುವುದಾದರೆ ,ಮಂಗಳೂರು ಉಳ್ಳಾಲ ಕ್ಷೇತ್ರದಲ್ಲಿ 180000 ಒಟ್ಟು ಮತಗಳಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳು ಬಿಲ್ಲವರು ಹೊಂದಿದ್ದರು, ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳು 80 ಸಾವಿರಕ್ಕೂ ಅಧಿಕ ಇರುವ ಕಾರಣ ಯುಟಿ ಖಾದರ್ ಅವರಿಗೆ ಪ್ರಾಶಸ್ಯ ನೀಡಲಾಯಿತು ,ಮಂಗಳೂರು ಉತ್ತರ ಕ್ಷೇತ್ರವನ್ನು ನೋಡುವುದಾದರೆ 220000 ಒಟ್ಟು ಮತಗಳಲ್ಲಿ 58000 ಮತಗಳು ಬಿಲ್ಲವರು ಹೊಂದಿದ್ದರು ಕೂಡ ಇಲ್ಲಿ ಮುಸ್ಲಿಂ ನಾಯಕ ಮೊಇದೀನ್ ಭಾವ ಅವರಿಗೆ ಪ್ರಾಶಸ್ಯ ನೀಡಲಾಯಿತು,ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 215000 ಮತಗಳಲ್ಲಿ 63000 ಸಾವಿರ ಮತಗಳನ್ನು ಹೊಂದಿದ್ದರೂ ಈ ಕ್ಷೇತ್ರದಲ್ಲಿ ಜೆಆರ್ ಲೋಬೊ ಅವರಿಗೆ ಪ್ರಾಶಸ್ಯ ನೀಡಲಾಯಿತು,
ಮುಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ 190000 ಒಟ್ಟು ಮತಗಳಲ್ಲಿ 62000 ಮತಗಳು ಬಿಲ್ಲವರು ಹೊಂದಿದ್ದರೂ ಕೂಡ ಅಭಯಚಂದ್ರ ಜೈನ್ ಅವರಿಗೆ ಪ್ರಾಶಸ್ಯ ನೀಡಲಾಯಿತು.ಬೆಳ್ತಂಗಡಿ ಕ್ಷೇತ್ರದಲ್ಲಿ 210000 ಒಟ್ಟು ಮತಗಳಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು 90000 ಬಿಲ್ಲವ ಮತಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಮಾತ್ರ ಬಿಲ್ಲವ ಅಭ್ಯರ್ಥಿ ವಸಂತ ಬಂಗೇರ ಅವರಿಗೆ ಪ್ರಾಶಸ್ಯ ನೀಡಲಾಯಿತು (ಮೂರೂ ಪ್ರಮುಖ ಪಕ್ಷದಿಂದ ಗೆದ್ದಿರುವ ಜನಪ್ರಿಯ ಶಾಸಕ ವಸಂತ ಬಂಗೇರ) ,ಬಂಟ್ವಾಳ್ ಕ್ಷೇತ್ರದಲ್ಲಿ 210000 ಒಟ್ಟು ಮತಗಳಲ್ಲಿ 75000 ಮತಗಳು ಬಿಲ್ಲವರು ಹೊಂದಿದ್ದರೂ ಕೂಡ ರಮಾನಾಥ್ ರೈಅವರಿಗೆ ಪ್ರಾಶಸ್ಯ ನೀಡಲಾಯಿತು.ಪುತ್ತೂರು ಕ್ಷೇತ್ರದಲ್ಲಿ ಒಟ್ಟು 194000 ಮತಗಳಲ್ಲಿ 20000 ಮತಗಳು ಬಿಲ್ಲವರು ಹೊಂದಿದ್ದು ಶಕುಂತಲಾ ಶೆಟ್ಟಿ ಅವರಿಗೆ ಪ್ರಾಶಸ್ಯ ನೀಡಲಾಯಿತು,ಇನ್ನು ಸುಳ್ಯ ಪರಿಶಿಷ್ಟ ವರ್ಗದ ಮೀಸಲಾತಿ ಹೊಂದಿದ ಕ್ಷೇತ್ರವಾಗಿದೆ ,ಕಳೆದ ಚುನಾವಣೆಯಲ್ಲಿ ಬಿಲ್ಲವರಿಗೆ ಒಂದು ಸೀಟ್ ನೀಡಿದರೂ ಬಹುಸಂಖ್ಯಾತ ಬಿಲ್ಲವರು ಕಾಂಗ್ರೆಸ್ ಪರ ನಿಂತು ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಭರ್ಜರಿ ಜಯ ದೊರಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಕೂಡ ಈ ಬಾರಿ ಕೂಡ ಜಿಲ್ಲಾ ಕಾಂಗ್ರೆಸ್ ನಾಯಕರು ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ್ದು ಇದು ಬಿಲ್ಲವ ಸಮುದಾಯದ ತಾಳ್ಮೆ ಪರೀಕ್ಷಿಸುವಂತಿದೆ.
ದಕ್ಷಿಣ ಕನ್ನಡ ಕಾಂಗ್ರೆಸ್ ನಲ್ಲಿ ಮೂಲೆ ಗುಂಪು ಆದ ಬಿಲ್ಲವರು ಕಾಂಗ್ರೆಸ್ ಪಕ್ಷಕ್ಕೆ ಇಡೀ ಜೀವನವನ್ನೇ ಮುಡುಪಾಗಿಟ್ಟ ನೇರ ದಿಟ್ಟ ಬಿಲ್ಲವ ನಾಯಕ ಜನಾರ್ಧನ ಪೂಜಾರಿ ಅವರನ್ನು ಕಾಂಗ್ರೆಸ್ ನಲ್ಲಿ ಮೂಲೆ ಗುಂಪು ಮಾಡಲಾಯಿತು ,ಜಿಲ್ಲೆಯ ರಾಜಕಾರಣದಲ್ಲಿ ರಮಾನಾಥ ರೈ ಅವರಿಗೆ ಕೆಂಗಣ್ಣಿಗೆ ಗುರಿಯಾದ ಹರಿಕೃಷ್ಣ ಬಂಟ್ವಾಳ್ ಅವರಿಗೆ ಪಕ್ಷ ತೊರೆಯುವ ಸೂಚನೆ ನೀಡಲಾಯಿತು .ಯುವ ಕಾಂಗ್ರೆಸ್ ಪಟ್ಟವನ್ನು ಕೂಡ ಬಿಲ್ಲವರಿಗೆ ನೀಡದೆ ಮೋಸ ಮಾಡಲಾಯಿತು. ಇತೀಚೆಗೆ ನಡೆದ ಘಟನೆಯನ್ನೇ ತೆಗೆದು ಕೊಳ್ಳೋಣ ಮಾಜಿ ಮೇಯರ್ ಕವಿತಾ ಸನಿಲ್ ರವರಿಗೆ ಮೂಡಬಿದ್ರೆಯಿಂದ ಟಿಕೆಟ್ ಆಕಾಂಕ್ಷಿ ಎಂದ ಮಾತ್ರಕ್ಕೆ ಶಾಸಕ ಅಭಯಚಂದ್ರ ಜೈನ್ ಆಡಿದ ದೊಂಬರಾಟ ನಮ್ಮ ಕಣ್ಣ ಮುಂದೇನೆ ಇದೆ ,
ದಕ್ಷಿಣ ಕನ್ನಡ ಕಾಂಗ್ರೆಸ್ ನಲ್ಲಿ ಬಿಲ್ಲವರನ್ನು ಪಕ್ಷ ಸಂಘಟನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಹೊರತು ಅಧಿಕಾರ ವಿಷಯದಲ್ಲಿ ಕಡೆಗಣಿಸುತಿದ್ದಾರೆ ಎಂಬ ಮಾತು ಹಲವು ದಿನಗಳಿಂದ ಕೇಳಿ ಬರುತಿದೆ .ಬಹುಸಂಖ್ಯಾತ ಬಿಲ್ಲವರನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್ ಈ ಬಾರಿ ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರಿಗೆ ಪ್ರಾಶಸ್ಯ ನೀಡದೆ ದ್ರೋಹ ಎಸಗಿದರೆ ಬಿಲ್ಲವ ಸಮುದಾಯ ಇಡೀ ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶಿಸಿ ಬಿಲ್ಲವೆರಂದರೆ ಯಾರು ಎಂದು ತೋರಿಸಿ ಕೊಡಬೇಕಾಗುವುದು,ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರೇ ,ರಾಜ್ಯ ಕಾಂಗ್ರೆಸ್ ನಾಯಕರೇ ಈ ಬಾರಿ ಬಿಲ್ಲವರು ಬಲ್ಲವರು ಆಗಿದ್ದಾರೆ ಎಚ್ಚರವಿರಲಿ .
0 comments: