ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ರಾಜೇಶ್ ನಾಯಕ್ ಉಳಿಪಾಡಿ ಅವರ ಸ್ಪರ್ಧೆ ಬಹುತೇಕ ಖಚಿತವೆನಿಸಿದೆ. ಅಲ್ಲದೆ ಉಳಿಪಾಡಿ ರಾಜೇಶ್ ನಾಯ್ಕ್ ಅವರು ಪ್ರಚಾರ ಕೂಡ ಆರಂಭಿಸಿದ್ದಾರೆ. ವಿಶೇಷವೇನೆಂದರೆ ದಶಕಗಳಿಂದ ಬಂಟ್ವಾಳ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ದುಡಿದ ರುಕ್ಮಯ್ಯ ಪೂಜಾರಿಯವರನ್ನು ಟಿಕೆಟ್ ವಿಚಾರದಲ್ಲಿ ಪರಿಗಣಿಸಲೇ ಇಲ್ಲ ಎನ್ನುವುದಂತೂ ದುರಂತವಾಗಿದೆ .ಬಿಲ್ಲವ ಸಮುದಾಯದ ಟಿಕೆಟ್ ಆಕಾಂಕ್ಷಿ ಇನ್ನೊಬ್ಬ ಅಭ್ಯರ್ಥಿ ಹರಿಕೃಷ್ಣ ಬಂಟ್ವಾಳ್ ಅವರು ಕಾಂಗ್ರೆಸ್ನಿಂದ ಮೂಲೆ ಗುಂಪಾಗಿ ನಂತರ ರಮಾನಾಥ ರೈ ವಿರುದ್ಧ ಹಲವಾರು ಆರೋಪಗಳನ್ನು ಮಾಡುತ್ತಾ ಸೂಕ್ತವಾದ ರಾಜಕೀಯ ತಿರುಗೇಟು ನೀಡುತ್ತಾ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರು. ಟಿಕೆಟ್ ವಿಚಾರದಲ್ಲಿ ಇವರ ಹೆಸರನ್ನು ಕೂಡ ಪರಿಗಣಿಸಲಾಗಿಲ್ಲ ಕೇವಲ ಆರ್ಥಿಕವಾಗಿ ಸದೃಢರಾಗಿರುವ ವ್ಯಕ್ತಿಗಳಿಗೆ ಟಿಕೆಟ್ ನೀಡಲು ಮುಂದಾಗಿರುವುದು ಬೇಸರದ ಸಂಗತಿಯಾಗಿದೆ.
ಒಂದು ರಾಷ್ಟ್ರೀಯ ಪಕ್ಷದಲ್ಲಿ ರಾಜಕೀಯ, ಸಾಮಾಜಿಕವಾಗಿ ಅಭ್ಯರ್ಥಿಯ ಅರ್ಹತೆಯನ್ನು ಗುರುತಿಸಿ ಟಿಕೆಟ್ ನೀಡುವ ಬದಲು ಆರ್ಥಿಕವಾಗಿ ಸದೃಢವಾಗಿರುವ ವ್ಯಕ್ತಿಗಳಿಗೆ ಟಿಕೆಟ್ ನೀಡಿ ಪಕ್ಷದ ಸಂಘಟನೆಗೆ ದುಡಿದ ಮತ್ತು ಕ್ಷೇತ್ರದ ರಮಾನಾಥ ರೈಗೆ ತಿರುಗೇಟು ನೀಡಿರುವ ಅಭ್ಯರ್ಥಿಗಳನ್ನು ಕಾಲು ಕಸ ಮಾಡಿದ ಪರಿಣಾಮ ಚುನಾವಣಾ ಫಲಿತಾಂಶದಲ್ಲಿ ಯಾವ ರೀತಿ ಪ್ರಭಾವ ಬೀರಲಿದೆ ಎಂದು ಕಾದು ನೋಡಬೇಕಿದೆ.
0 comments: