ಆಧುನಿಕ ಯುಗದಲ್ಲಿ ಬಿಲ್ಲವರು ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಎಲ್ಲ ಕ್ಷೇತ್ರಗಳಲ್ಲೂ ಮಿಂಚುತ್ತಿದ್ದು ಇದನ್ನು ಜೀರ್ಣಿಸಿಕೊಳ್ಳಲಾಗದ ಕೆಲ ಮೇಲ್ವರ್ಗದ ಹಣೆಪಟ್ಟಿ ಕಟ್ಟಿ ಕೊಂಡವರು ಬಿಲ್ಲವ ಸಮುದಾಯದ ಮೇಲೆ ದಂಡೆತ್ತಿ ಬರುತ್ತಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಒಂದು ಸಮುದಾಯಕ್ಕೆ ಅವಹೇಳನ ಮಾಡುತ್ತಾರೆ.ಫೇಸ್ ಬುಕ್ ನಲ್ಲಿ ಮಾಡಿದ ಕಮೆಂಟ್ ಒಂದರಲ್ಲಿ ನಯನ ಪೈ ಎಂಬ ಮಹಿಳೆ ಬಿಲ್ಲವರಿಗೆ ಸಂಸ್ಕೃತಿ ಇಲ್ಲ ಎಂಬ ಅವಹೇಳನ ಮಾಡುತ್ತಾಳೆ ,ಇನ್ನೋರ್ವ ಯುವಕ ಹರೀಶ್ ಶೆಟ್ಟಿ ಎಂಬಾತ ಬಿಲ್ಲವರು ಬ್ಯಾರಿಗಳು ಎಂದು ಅವಹೇಳನ ಮಾಡುತ್ತಾನೆ.ಈ ಇಬ್ಬರೂ ಮಾನಸಿಕ ಸಮತೋಲನವನ್ನು ಕಳೆದುಕೊಂಡು ಒಂದು ಸಮುದಾಯದ ಮೇಲೆ ಇಷ್ಟೊಂದು ವಿಷ ಕಾರುತ್ತಿದ್ದಾರೆ ಎಂದರೆ ಇವರು ಬಿಲ್ಲವರ ಏಳಿಗೆಯನ್ನು ಸಹಿಸಲಾರರು ಎಂದೇ ಅರ್ಥ ,ನಾರಾಯಣ ಗುರು ಅವರು ತೋರಿಸಿದ ಮಾರ್ಗದಲ್ಲಿ ನಡೆಯುವ ನಮಗೆ ಸಾಮಾಜಿಕ ಜಾಲತಾಣದಲ್ಲಿ ಮೇಲ್ವರ್ಗದವರೆಂದು ಹಣೆಪಟ್ಟಿ ಕಟ್ಟಿಕೊಂಡವರ ಸರ್ಟಿಫಿಕೇಟಿನ ಅಗತ್ಯ ನಮಗಿಲ್ಲ .ಇನ್ನು ಹಲವಾರು ಬಿಲ್ಲವ ಸಂಘಟನೆಗಳಲ್ಲಿ ಮುಖಂಡರೆನಿಸಿಕೊಂಡವರು ಇವರ ಮೇಲೆ ಕಾನೂನು ಕ್ರಮ ಜರುಗಿಸಿ ಇನ್ನು ಮುಂದೆ ಯಾವೊಬ್ಬ ಮೇಲ್ವರ್ಗದ ಹಣೆಪಟ್ಟಿ ಕಟ್ಟಿಕೊಂಡವರು ಬಿಲ್ಲವರ ಮೇಲೆ ದಂಡೆತ್ತಿ ಬರದಂತೆ ನೋಡಿಕೊಳ್ಳುವುದು ಉತ್ತಮ.
0 comments: