Wednesday, January 16, 2019

ಬಿಲ್ಲವರ ಒಗ್ಗಟ್ಟಿನ ವೇದಿಕೆಯಾಗಲಿ ,ದಮನಿತ ಬಿಲ್ಲವರ ಧ್ವನಿಯಾಗಲಿ - ಬಿಲ್ಲವ ಸಮಾವೇಶ

ಫೆಬ್ರವರಿ 3 ರಂದು ಉಡುಪಿಯ ಬ್ರಹ್ಮಾವರದಲ್ಲಿ ಜರುಗಲಿದೆ ಬಿಲ್ಲವ ಮಹಾ ಸಮಾವೇಶ,ಬಿಲ್ಲವ ಮಹಾ ಸಮಾವೇಶದ ವೇದಿಕೆ ಬಿಲ್ಲವ ಸಮುದಾಯದ ಒಗ್ಗಟ್ಟಿನ ವೇದಿಕೆಯಾಗಲಿ. ಈ ಸಮಾವೇಶಕ್ಕೆ ನಮ್ಮೆಲ್ಲ ಸಂಘಟನೆಯ ಒಗ್ಗಟ್ಟು ಒಂದೇ ವೇದಿಕೆಯಲ್ಲಿ ಕಂಡು ಬರಲಿ. ಬಿಲ್ಲವರು ಎಲ್ಲಾ ಕ್ಷೇತ್ರದಲ್ಲೂ ಶಕ್ತರು ಬಿಲ್ಲವ ಸಮಾಜವನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಉತ್ತುಂಗ ಶಿಖರಕ್ಕೆ ಕೊಂಡೊಯ್ಯುವ ಪ್ರಯತ್ನಕ್ಕೆ ಈ ವೇದಿಕೆ ಸಾಕ್ಷಿಯಾಗಲಿ.ಪ್ರತಿ ಚುನಾವಣೆಯಲ್ಲೂ ಬಿಲ್ಲವ ಸಮಾಜವನ್ನು ಕಡೆಗಣಿಸುವ ರಾಷ್ಟ್ರೀಯ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶ ಈ ವೇದಿಕೆಯಲ್ಲಿ  ರವಾನೆಯಾಗಲಿ. ಬಿಲ್ಲವ ಸಮಾಜದ ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳಿಗೆ ನೆರವಾಗುವ ಯೋಜನೆಗಳಿಗೆ ಅಡಿಗಲ್ಲು ಹಾಕುವ ವೇದಿಕೆಯಾಗಲಿ ಈ ಸಮಾವೇಶ .ಬನ್ನಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಾಗಿಯಾಗೋಣ ಬ್ರಹ್ಮಶ್ರೀ ನಾರಾಯಣ ಗುರು ನಡೆದುಕೊಂಡ ಬಂದ ಹಾದಿಯಲ್ಲಿ ನಾವು ಸಾಗೋಣ

0 comments: