Thursday, January 31, 2019

ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ಮಹೇಶ್ ಕುಮಾರ್

ಕರಾವಳಿ ತೀರದ ರೈತಾಪಿ ಜನರು ತಮ್ಮ ದೈನಂದಿನ ಬದುಕಲ್ಲಿ ಹಾಸುಹೊಕ್ಕಾಗಿಸಿ. ಬೆಳೆಸಿ ಉಳಿಸಿದ ಕಲೆಯೇ ಯಕ್ಷಗಾನ ಕಲೆ. ಅದು ಯಾವ ಪೂರ್ವ ವಾಸನೆ ಇಲ್ಲದವರನ್ನು ಕೂಡ ತನ್ನೊಳಗೆ ಸೆಳೆದುಕೊಂಡು ಹೇಗೆ ಬೆಳೆಸುತ್ತದೆ ಅನ್ನೋದೇ ಯಕ್ಷ ಪ್ರಶ್ನೆ ಹಾಗೆ ಬೆಳೆದು ಬೇಡಿಕೆಯ ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡವರು ಮಹೇಶ್ ಕುಮಾರ್ ಸಾಣೂರ್ ರವರು.ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮಹಾಬಲ ಪೂಜಾರಿ ಹಾಗೂ ವಿಶಾಲ ಪೂಜಾರಿ ದಂಪತಿಗಳ ಮೂರು ‌ಮಂದಿ ಗಂಡು ಮಕ್ಕಳಲ್ಲಿ ಹಿರಿಯಮಗನೇ ಮಹೇಶ್ ಕುಮಾರ್

ತನ್ನ ಏಳವೆಯಲ್ಲಿ ಊರಿನಲ್ಲಿ ಬಹಳಷ್ಟು ಟೆಂಟ್ ಮೇಳದ ಆಟಗಳು ಆಗುತ್ತಿದ್ದ ಕಾಲದಲ್ಲಿ ತನ್ನ ಅಪ್ಪ ಅಮ್ಮನ ಜೊತೆ ಸಾಕಷ್ಟು ಯಕ್ಷಗಾನಗಳನ್ನು ಕಂಡ ಬಾಲಕ ಮಹೇಶ್ ನಿಧಾನವಾಗಿ ಯಕ್ಷಗಾನದತ್ತ ಆಸಕ್ತಿ ಬೆಳೆಸಿಕೊಂಡರು. ಇದಕ್ಕೆ ಇನ್ನೊಂದು ಕಾರಣ ತಾನು ಸ್ವತಃ ಶಾರದ ಮಣಿ ಶೇಖರ್ ರವರಲ್ಲಿ ಅಭ್ಯಾಸ ಮಾಡುತ್ತಿದ್ದ ಭರತನಾಟ್ಯವೂ ಆಗಿತ್ತೋ ಏನೋ .ಅಂತೂ ಯಕ್ಷಗಾನದತ್ತ ಆಕರ್ಷಣೆ ಹೆಚ್ಹಿದ್ದು ದಿಟ.

ಸಂಪ್ರದಾಯಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವೀ ದರರಾದ ಇವರು ವೃತ್ತಿಯಲ್ಲಿ ಶಿಕ್ಷಕರು ಆದರೇ ಪ್ರವೃತ್ತಿಯಾದ ಯಕ್ಷಗಾನದಲ್ಲಿ ಬೆಳೆಯಬೇಕೆಂಬ. ಮಹತ್ತರ ಆಸೆಗೆ ಅನುಗುಣವಾಗಿ ಯಕ್ಷಗಾನ ತೆಂಕು ತಿಟ್ಟು. ನಾಟ್ಯ ಅಭ್ಯಾಸವನ್ನು ಗುರುಗಳಾದ ಮಹಾವೀರ ಪಾಂಡಿ ಕಾಂತಾವರ ಇವರಲ್ಲೂ , ಬಡಗು ತಿಟ್ಟಿನ ಸಾಂಪ್ರದಾಯಿಕ ಹೆಜ್ಜೆಗಳನ್ನು. ಯಕ್ಷಗುರು ಶ್ರೀ ಬನ್ನಂಜೆ ಸಂಜೀವ ಸುವರ್ಣರು ಮತ್ತು ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಇವರಲ್ಲಿಯೂ ಅಭ್ಯಾಸ ಮಾಡಿದ ಮಹೇಶ್ ರು ಆರಂಭದ ದಿನಗಳಲ್ಲಿ ಯಕ್ಷಗಾನ ಸಂಘ ಸಂಸ್ಥೆಗಳಲ್ಲಿ ವೇಷ ಮಾಡುತ್ತಾ. ಮುಂದೆ ಶಾಲಾ ರಜಾದಿನಗಳಲ್ಲಿ ಮೇಳಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿ ಅನುಭವ ಪಡೆಯುತ್ತಾ ವೃತ್ತಿಪರತೆಯನ್ನು ಮೈಗೂಡಿಸಿಕೊಂಡರುಮುಂದೆ ಯಕ್ಷಗಾನದಲ್ಲಿ ಪೂರ್ಣ ಪ್ರಮಾಣದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಅಂತ ನಿಶ್ಚಯಿಸಿದ ಮಹೇಶ್ ರು ಶ್ರೀ ಕ್ಷೇತ್ರ ಕಟೀಲು ಮೇಳದಲ್ಲಿ. ಕಲಾವಿದರಾಗಿ ತಿರುಗಾಟ ಆರಂಭಿಸಿದರು.

2013 ನೇ ಇಸವಿಯಲ್ಲಿಒಂದನೇ ಮೇಳದಲ್ಲಿ ಪೂರ್ವ ರಂಗದ ವೇಷಕ್ಕೆ.ಗೆಜ್ಜೆ ಕಟ್ಟಿದ ಇವರಿಗೆ ಅದೇ ವರ್ಷದ ತಿರುಗಾಟದಲ್ಲಿ ಐದನೇ ಮೇಳದಲ್ಲಿ ಮೂರನೆ ಮತ್ತು ಎರಡನೇ ಬಣ್ಣದ ವೇಷಗಳನ್ನು ನಿಭಾಯಿಸುವ ಅವಕಾಶ. ದೊರೆತು ಅದೇ ವರ್ಷದ ಉತ್ತರ ಭಾಗದಲ್ಲಿ ಎರಡನೇ ಮೇಳದಲ್ಲಿ ಸ್ತ್ರೀ ವೇಷದ ಕೊರತೆ ಇದ್ದುದರಿಂದ ಎರಡನೇ ಸ್ತ್ರೀ ವೇಷದ ಜಾಗಕ್ಕೆ ಭಡ್ತಿ ಪಡೆದರು.

ರಂಗದಲ್ಲಿ ಶುಂಭ,ನಿಶುಂಭ,ಮಧು,ಕೈಟಭರು. ಮಹಿಷ.ವೀರಭದ್ರ.ಲವಣಾಸುರ.ನರಕಾಸುರ.ಚಂಡಮುಂಡ ಅರ್ಜುನ.ಭದ್ರಸೇನ.ಚಂದ್ರಸೇನ, . ಮುಂತಾದ ಕಟ್ಟು ವೇಷಗಳನ್ನು. ಕೂಡ ನಿರ್ವಹಿಸಿ ಅನುಭವ ಗಳಿಸಿ ಬೆಳೆದ ಇವರು ಮುಂದೆ ಸ್ತ್ರೀ ಪಾತ್ರಗಳಾದ ಶ್ರೀದೇವಿ,ಚಂದ್ರಮತಿ,ದಾಕ್ಷಾಯಿಣಿ ದಮಯಂತಿ..ದ್ರೌಪದಿ,ಮೋಹಿನಿ,ತಿಲೋತ್ತಮೆ,ಲಕ್ಷ್ಮೀ , ಸತ್ಯಭಾಮೆ,ರಕ್ಮುಣಿ, ಮಾಲಿನಿ, ಕನಕಾಂಗಿ ಮುಂತಾದ.ಪಾತ್ರಗಳನ್ನು ತುಂಬಾ ಪರಿಣಾಮಕಾರಿಯಾಗಿ ನಿರ್ವಹಿಸುವ ಯೋಗ್ಯತೆ ಹೊಂದಿದ ದೆಸೆಯಿಂದ ಸದ್ಯ ಮಹೇಶರು ಕಟೀಲು 5ನೇ ಮೇಳದಲ್ಲಿ ಪ್ರಧಾನ ಸ್ತ್ರೀ ವೇಷಧಾರಿಯಾಗಿ ಶ್ರೀ ದೇವಿ ಪಾತ್ರವನ್ನು ನಿರ್ವಹಿಸುತ್ತಿರುವುದು ಸಂತೋಷದ ವಿಚಾರ

ಉತ್ತಮ ಅಂಗ ಸೌಷ್ಠವದಿಂದ.ಆಕರ್ಷಕ ಮುಖದೊಂದಿಗೆ ಸ್ಪುರದ್ರೂಪಿಯಾದ ಇವರು ಸ್ತ್ರೀ ವೇಷದಲ್ಲಿ ಹೆಣ್ಣನ್ನೇ ನಾಚಿಸಬಲ್ಲ ಲಾಲಿತ್ಯಪೂರ್ಣ ಅಭಿವ್ಯಕ್ತಿಯಿಂದ ರಂಗದಲ್ಲಿ ಸಾಕ್ಷಾತ್ ಶ್ರೀ ದೇವಿಯೇ ಪ್ರತ್ಯಕ್ಷಳಾದಳೋ ಎಂಬ ವಾತಾವರಣ ಮೂಡಿಸಬಲ್ಲರು.ಸ್ತ್ರೀವೇಷಕ್ಕೆ ಅದರ್ಶವಾಗಿ ಶ್ರೀಯುತ ಕೋಳ್ಯೂರರನ್ನು ಇಟ್ಟುಕೊಳ್ಳುವ ಇವರು ಸಾಹಿತ್ಯಾತ್ಮಕವಾದ ವಾಚಿಕಕ್ಕೆ ಸುಣ್ಣಂಬಳರ ಮಾರ್ಗದರ್ಶನವನ್ನು ಸದಾ ಅನುಸರಿಸುತ್ತಾರೆ ತನ್ನ ಯಕ್ಷ ಬದುಕಿನ ಬೆಳವಣಿಗೆಗೆ ಸಹಕಾರವಿತ್ತ ಎಂ. ಕೆ ಯವರು ಸುಣ್ಣಂಬಳ, ನಾರಾಯಣಕುಲಾಲ್.. ಪಣೆಯಾಲ.. ಕಾವಳಕಟ್ಟೆ,.. ಬಾಯಾರು ರಮೇಶ ಭಟ್ . ಹಾಗೂ ಇನ್ನಿತರ ಸಹ ಕಲಾವಿದರನ್ನು ಸದಾ ಸ್ಮರಿಸುವ ಇವರು ಸಜ್ಜನ ವಿನಯ ಶೀಲರಾದ ಇವರ ಯಕ್ಷ ಪಯಣ ಕೀರ್ತಿದಾಯಕವಾಗಲಿ ಅಂತ ಹಾರೈಕೆ.ಲೇಖನ :ಸುರೇಂದ್ರ ಪಣಿಯೂರ್

0 comments: