Saturday, January 5, 2019

ಈ ಬಾರಿಯಾದರೂ ಸತ್ಯಜಿತ್ ಸುರತ್ಕಲ್ ಅವರಿಗೆ ಅವಕಾಶ ಸಿಗಲಿ

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಲೆಕ್ಕಾಚಾರ ನಡೆಯುತ್ತಿದೆ .ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬದಲಾವಣೆಯ ಚರ್ಚೆ ಕೂಡ ಜೋರಾಗಿ ನಡೆಯುತ್ತಿದೆ.ಕಳೆದ ಬಾರಿ ವಿಧಾನಸಭಾ ಮಂಗಳೂರು ಉತ್ತರ ವಲಯದಿಂದ ಟಿಕೆಟ್ ವಂಚಿತರಾದ ಸತ್ಯಜಿತ್ ಸುರತ್ಕಲ್ ಅವರನ್ನು ಈ ಬಾರಿ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕೆಂದು ಬಹುಜನರ ಅಪೇಕ್ಷೆಯಾಗಿದೆ.ದಶಕಗಳಿಂದ ಹಿಂದುತ್ವ ಮತ್ತು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಸತ್ಯಜಿತ್ ಸುರತ್ಕಲ್ ಅವರು ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಹಿಡಿದು ಬಿಜೆಪಿ ಕಾರ್ಯಕರ್ತರ ಎಲ್ಲರ ನೆಚ್ಚಿನ  ನಾಯಕರಾಗಿ ಗುರುತಿಸಿಕೊಂಡಿದ್ದಾರೆ .ಬಿಜೆಪಿ ಅಭ್ಯರ್ಥಿ ಯಾರಾಗಬೇಕೆಂಬ ಪೋಲಿಂಗ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದ್ದು ಈ ಪೋಲಿಂಗ್ ನಲ್ಲಿ ಎಲ್ಲರೂ ಸತ್ಯಜಿತ್  ಸುರತ್ಕಲ್ ಪರ ಮತ ಚಲಾಯಿಸಿ ಈ ಬಾರಿ ನಾವೆಲ್ಲ ಸತ್ಯಜಿತ್ ಸುರತ್ಕಲ್ ಅವರನ್ನು ಬೆಂಬಲಿಸೋಣ

0 comments: