Thursday, January 17, 2019

ಬೈದೆರುಗಳು ನಂಬಿದವರನ್ನು ಕೈಬಿಡುವುದಿಲ್ಲ ಎನ್ನುವುದಕ್ಕೆ ರಮೇಶ್ ಸಾಲ್ಯಾನರು ಸ್ಪಷ್ಟ ನಿದರ್ಶನ. ಸ್ವಾಮೀ ಬೈದೆರುರ್ಲೆ ನಿಕ್ಲೆ ಕಾಪುಲೆ.

ತುಳು ಮಾತನಾಡಲು ಸುಲಭ‌ ಆದರೆ ಕನ್ನಡದಲ್ಲಿ ಬರೆದ ತುಳುವನ್ನು ಕೆಲವರಿಗೆ ಓದಲು ಕಷ್ಟ ಎಂದು ನನ್ನ ಕೆಲವು ಗೆಳೆಯರು ತಿಳಿಸಿದ್ದಕ್ಕಾಗಿ ಈ ಬರಹವನ್ನು ಕನ್ನಡಲ್ಲೆ ಬರೆದಿದ್ದೆನೆ.
ಬರಹ:-✍🏼..ಚಂದು

ಕಾರ್ನಿಕದ ತುಲುನಾಡಿನ ಬೈದೆರುಗಳು.

ಹೌದು,ಕೋಟಿ ಚೆನ್ನಯರು ತುಳುನಾಡಿನ ಆರಾಧ್ಯ ಪುರುಷರು.ಇಂದು ತುಳುನಾಡಿನಲ್ಲಿ ಇನ್ನೂರೈವತ್ತಕ್ಕೂ ಅಧಿಕ ಗರಡಿಗಳಲ್ಲಿ ಆರಾಧನೆ ಪಡೆಯುವ ಸತ್ಯಗಳು.
ಸದಾ ತುಲುನಾಡಿನಲ್ಲಿ ಕಾಲಕಾಲಕ್ಕೂ ಕಾರಣಿಕ ಮೆರೆಯುತ್ತಲೇ ಬಂದಿದ್ದಾರೆ.
ಅದು ತುಳುನಾಡಿನ ಮೂಡಾಣ ದಿಕ್ಕಿನ ಗಿರಿ ಪರ್ವತಗಳ ನಡುವಿನ ಶಿಶಿಲದ ಒಟ್ಲದಲ್ಲಿಯೂ ಬೈದೆರುಗಳ ಅರಾಧನ ಗರಡಿ ಇದೆ.
ಇತ್ತೀಚಿನ ಕೆಲವು ವರ್ಷದ ಮೊದಲು ಅಲ್ಲಿ ಬೈದೆರುಗಳ ಗರೋಡಿ ಮತ್ತು ದೈವಗಳ ಸಾನ,ಗುಡಿ,ಮಾಡಗಳು ಜೀರ್ಣೋದ್ಧಾರ ಅಗಿ ಉತ್ಸವ ನಡೆಯಿತು.
ಅವರು ರಮೇಶ್ ಸಾಲ್ಯಾನ್. ಕಾರ್ಕಳದ ಬಜಗೊಳಿ ಮೂಡಾರಿನವರು.ಸದ್ಯ ಮುಂಬೈನಲ್ಲಿ ಉದ್ಯೋಗ ನಿಮಿತ್ತವಾಗಿ ಅಲ್ಲೆ ನೆಲೆವೂರಿದವರು.ಹೆಂಡತಿ ಮತ್ತು ಇಬ್ಬರು ಮಕ್ಕಳು ಸಮೆತರಾಗಿ ಬೊಂಬೈಯಲ್ಲಿಯೆ ಅರ್ಧ ಜೀವನವನ್ನು ಕಳೆದವರು.ಅದರೂ ತುಳುನಾಡಿನ ದೈವಗಳು ಮತ್ತು ಕಾರ್ನಿಕ ಪುರುಷರು ಬೈದೆರುಗಳ ಬಗ್ಗೆ ಅಪಾರವಾದ ನಂಬಿಕೆ ಮತ್ತು ಭಕ್ತಿ.ಅದರಲ್ಲೂ ಒಟ್ಲದ ಗರೋಡಿಯ ಬೈದೆರುಗಳ ಬಗ್ಗೆ ಭಾರಿ ನಂಬಿಕೆ.
ಬೈದೆರುಗಳ ಗೆಜ್ಜೆಗಿರಿ ನಂದನ ಬಿತ್ತಿಲಿನ ಜೀರ್ಣೋದ್ಧಾರದ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವೇ ತನ್ನದೇ ರೀತಿಯಲ್ಲಿ ತೊಡಗಿಸಿಕೊಂಡವರು.ಅದರೊಂದಿಗೆ ಹಲವಾರು ಬಡ ಕುಟುಂಬಗಳಿಗೆ ತನ್ನಿಂದ ಆದಷ್ಟು ಮತ್ತು ಮಿತ್ರರೊಂದಿಗೆ ಸೇರಿ ಸಹಾಯ ಹಸ್ತ ಮಾಡಿದವರು.
ಬೊಂಬಾಯಿಂದ ಊರಿಗೆ ಊರಿನಿಂದ ಬೊಂಬಾಯಿಗೆ ಸದಾ ಇದೇ ಕಾರಣಕ್ಕಾಗಿಯೇ ಸಂಚಾರಿಸುತ್ತಿರುತ್ತಾರೆ.
ದೈವ ದೇವರುಗಳ ಕಾರ್ಯಕ್ಕೂ ತನ್ನಿಂದ ಆದಷ್ಟು ತನು ಮನ ಧನ ನೀಡಿ ಸಹಕರಿಸಿದವರು. ಒಟ್ಲ ಗರೋಡಿಯ ಉತ್ಸವದ ಸಮಯದಲ್ಲೂ ತನ್ನ ಶಕ್ತನೂಭಕ್ತಿಯಿಂದ ಭಕ್ತಿಪೂರ್ವಕವಾಗಿ ತನು ಮನ ಧನ ನೀಡುತ್ತಾ ಬಂದವರು.
ಸಂಸಾರ ಸಮೆತವಾಗಿ ಮುಂಬೈನಲ್ಲಿ ಇರುವ ರಮೇಶ್ ಸಾಲ್ಯಾನರ ಇಬ್ಬರು ಮಕ್ಕಳಲ್ಲಿ ಒಬ್ಬ ಮಗ ರಿತೇಶ್ ಅರ್.ಸಾಲ್ಯನ್ ವಿಧ್ಯಾಭ್ಯಾಸ ಮುಗಿಸಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.
ಇತ್ತಿಚೆಗೆ ಅವರಿಗೆ ಅಚಾನಕ್ ಅಗಿ ಕಣ್ಣಿನ(ರೆಟಿನೊ)ದ ಸಮಸ್ಯೆ ಕಂಡು ಬಂದು, ಮುಂಬೈನಲ್ಲಿ ಅದಕ್ಕೆ ಚಿಕಿತ್ಸೆಯೂ ನಡೆಯಿತು.
ಅದರ ನಂತರ ತನ್ನ ಮನೆಯ ದೈವಗಳ ನೇಮ ತಂಬಿಲದ ಕಾರ್ಯಕ್ರಮಕ್ಕಾಗಿ  ಕುಟುಂಬ ಸಮೆತವಾಗಿ ಊರಿಗೆ ಬಂದರು.
ಬಂದ ನಂತರ ಮತ್ತೆ ಮಗನ ಕಣ್ಣಿನ ಸಮಸ್ಯೆ ಮತ್ತೆ ಉಲ್ಬಣಗೊಂಡು ಕಂಗಾಲಾಗಿ ಹೋದರು ರಮೇಶ್ ಸಾಲ್ಯಾನ್ ಅವರು.
ಏನೂ ದಿಕ್ಕು ತೊಚದೆ ಕಡೆಗೆ ನೆನಪಾಗಿದ್ದು ಒಟ್ಲದ ಗರೋಡಿ.ಅದು ತಿಂಗಳ ಸಂಕ್ರಮಣ ಬರುವ ಸಮಯ. ಒಟ್ಲದಲ್ಲಿ ಸಂಕ್ರಮಣದ ದಿನದಂದು ಅಲ್ಲಿನ ಧರ್ಮದರ್ಶಿ ಮತ್ತು ಶಾಂತಿಗಳಾಗಿರುವ ಜನಾರ್ದನ ಬಂಗೇರ ಅವರು ಕಷ್ಟದಲ್ಲಿ ಸಮಸ್ಯೆ ಹೇಳಿ ಕೊಂಡು ಬಂದ ಜನರಿಗೆ ಬೈದೆರುಗಳ ಎದುರು ಪುರ್ಪ ತೆಗೆದು ನೋಡಿ ಕೆಲವೊಂದು ಕಠಿಣ ಕೆಲಸಗಳು ಮತ್ತು ಕಷ್ಟ, ಸಮಸ್ಯೆಗಳಿಗೆ ಪರಿಹಾರವನ್ನು ಹೇಳುತ್ತಾರೆ.ಬೈದೆರುಗಳ ಹೆಸರಲ್ಲಿ ಮದ್ದು ನೂಲು ಎಲ್ಲಾವನ್ನು ನೀಡುತ್ತಾರೆ.
ಅಂತೆಯೇ ಏನೂ ತೊಚದ ರಮೇಶ್ ಸಾಲ್ಯಾನ್ ಅವರು ಫೋನ್ ಮುಖಾಂತರವೇ ಜನಾರ್ದನ ಶಾಂತಿಯವರಿಗೆ ತನ್ನ ಮಗನ ಸಮಸ್ಯೆಯನ್ನು ದುಖದಿಂದಲೇ ತಿಳಿಸುತ್ತಾರೆ.
ಹಾಗೆಯೇ ಶಾಂತಿಯವರು ಸಂಕ್ರಮಣದ ಅಹ ದಿನ ಬೈದೆರುಗಳ ಎದುರು ಪುರ್ಪ ತೆಗೆದು ನೋಡಿ ಹದಿನೈದು ದಿನದೊಳಗೆ ನಿಮ್ಮ ಮಗನ ಕಣ್ಣು ಯಾವುದೇ ಸಮಸ್ಯೆ ಇಲ್ಲದೆ ಸರಿಯಾಗುತ್ತದೆ ಎಂದು  ಎಂದು ಹದಿನೈದು ದಿನದ ಗಡು ಕೊಟ್ಟು ಪರಿಹಾರ ಹೇಳುತ್ತಾರೆ.
ಅಲ್ಲಿಗೆ ರಮೇಶ್ ಸಾಲ್ಯಾನ್ ಅವರ ಮನಸ್ಸಿನ ಭಾರ ಸ್ವಲ್ಪ ಹಗುರವಾಯಿತು.ಆದರೆ ಮತ್ತೆ ನಾಲ್ಕು ದಿನ ಕಳೆದು ಕಣ್ಣಿನ ಸಮಸ್ಯೆ ಮತ್ತೂ ಉಲ್ಬಣಗೊಂಡವು.
ರಮೇಶ್ ಸಾಲ್ಯಾನರು ದುಖದಿಂದಲೇ ಅಂದು ರಾತ್ರಿ ಒಂದು ತಿರ್ಮಾಣ ತೆಗೆದುಕೊಂಡರಂತೆ.
ಇನ್ನೂ ಈ ಊರಿನ ಋಣ ಮುಗಿಯಿತು.ಬೈದೆರುಗಳ ಮೇಲೆ ಇಟ್ಟಿದ ನಂಬಿಕೆ ಯಾಕೊ ನನ್ನಿಂದ ದೂರವಾಗುತ್ತಿದೆ.ಎಷ್ಟೋ ನೊಂದ ಕುಟುಂಬಕ್ಕೆ ನನ್ನಿಂದ ಆದಷ್ಟು ಧನಸಹಾಯ ಮಾಡಿದ್ದೆನೆ.ಎಷ್ಟೋ ಕಡೆ ದೈವ ದೇವರುಗಳ ಮೇಲೆ ಭಕ್ತಿ ನಂಬಿಕೆಯಿಂದ ತನು ಮನ ಧನ ಅರ್ಪಿಸಿದ್ದೆನೆ.ಅದರೆ ಇಂದು ನನ್ನ ಮಗನ ಪರಿಸ್ಥಿತಿ?
ಇದ್ಯಾವುದೂ ಬೇಡ,
ನಾಳೆ ಬೊಂಬೈಯಿಯ ಕಡೆ ಹೊರಟವನು ಮತ್ತೆ ಯಾವತ್ತೂ ಈ ತುಳುನಾಡಿಗೆ ಬರುವುದಿಲ್ಲ ಎಂದು ಧೃಡ ಸಂಕಲ್ಪ ಮಾಡಿ,ತಾನು ನಂಬಿದ ಬೈದೆರುಗಳನ್ನು ನೆನೆದು ದುಖದಿಂದಲೇ ಅಂದು ಮಲಗಿದರಂತೆ.
ಬೆಳಗ್ಗೆ ಎದ್ದು ನೋಡಿದಾಗ ಅವರಿಗೆ ಮತ್ತೆ ಅವರಿಗೆ  ಆಶ್ಚರ್ಯ. ಮಗನ ಕಣ್ಣು ಮತ್ತೆ ಯಾಥ ಸ್ಥಿತಿಯನ್ನು ಕಂಡಿದೆ.ರಮೇಶ್ ಸಾಲ್ಯಾನರು ಬೈದೆರುಗಳ ಕಾರ್ನಿಕವನ್ನು ತನ್ನ ಮಗನ ಕಣ್ಣಿನಿಂದಲೇ ತಿಳಿದುಕೊಂಡರು.ಒಟ್ಲದ ಗರೋಡಿಯಲ್ಲಿ ಹದಿನೈದು ದಿನದ ಗಡು ಕೊಟ್ಟಿದ್ದರಂತೆ, ಅದರೆ ಹದಿನಾಲ್ಕನೆ ದಿನಕ್ಕೆ ಮಗನ ಕಣ್ಣಿನ ಸಮಸ್ಯೆ ಸರಿಯಾಗಿ  ಸ್ಪಷ್ಟವಾಗಿ ಕಣ್ಣು ಕಾಣುತ್ತದೆ ಎಂದು ಮಗ ಅಪ್ಪನಲ್ಲಿ ಹೇಳಿದ್ದಾನೆ ಅಂತೆ.
ಇದಲ್ಲವೇ ಬೈದೆರುಗಳ ಕಾರ್ನಿಕ.
ಈ ವಿಚಾರವೂ ನಮ್ಮ ತುಲುನಾಡಿನ ಎಲ್ಲಾರಿಗೂ ತಿಳಿಸಬೇಕು ಎಂದು ಹಲವಾರು ಭಾರಿ ನನಗೆ ಫೋನ್ ಮಾಡಿ ಇದನ್ನು ತಿಳಿಸಿ,ಬೈದೆರುಗಳ ಕಾರ್ನಿಕ ನಮ್ಮ ಇಡೀ ತುಳುನಾಡಿಗೆ ಮತ್ತೆ ಮತ್ತೆ ತಿಳಿಯಬೇಕು ಎಂದರು.ಅಹ ಉದ್ದೇಶದಿಂದ ಈ ಬರಹವನ್ನು ಬರೆದಿದ್ದೆನೆ.
ಬೈದೆರುಗಳು ನಂಬಿದವರನ್ನು ಕೈಬಿಡುವುದಿಲ್ಲ ಎನ್ನುವುದಕ್ಕೆ ರಮೇಶ್ ಸಾಲ್ಯಾನರು ಸ್ಪಷ್ಟ ನಿದರ್ಶನ.
ಸ್ವಾಮೀ ಬೈದೆರುರ್ಲೆ ನಿಕ್ಲೆ ಕಾಪುಲೆ.
🙏🏽🙏🏽🙏🏽🙏🏽🙏🏽🙏🏽🙏🏽🙏🏽

1 comment: