Thursday, January 17, 2019

ಬಿಲ್ಲವ ಸಮಾಜದ ಸಾಧಕರ ಪಟ್ಟಿಯಲ್ಲಿ ಕಾಣಸಿಕ್ಕಿದ್ದು ಬಿಲ್ಲವ ಯುವ ಪ್ರತಿಭೆ ಪ್ರಜ್ಞಾ ಪೂಜಾರಿ ಉಡುಪಿಬಿಲ್ಲವ ಸಮಾಜದ ಪ್ರತಿಭೆಗಳೆಂದರೆ ಅಕ್ಷಯ ಪಾತ್ರೆಯಿದ್ದಂತೆ ತೆಗದಷ್ಟು ಕಾಲಿಯಾಗದ್ದು ಅಂತೇಯೇ ನಮ್ಮ ಸಮಾಜದ ಸಾಧಕರ ಪಟ್ಟಿಯಲ್ಲಿ ಕಾಣಸಿಕ್ಕಿದ್ದು ಪ್ರಜ್ಞಾ ಪೂಜಾರಿ ಉಡುಪಿಯ ಕುರ್ಕಲ್ ನವರಾದ ಇವರು ಆಟೋಟ ಮಾತ್ರವಲ್ಲದೆ ಅಭಿನಯ ರಂಗದಲ್ಲೂ ಸೈ ಎನಿಸಿಕೊಂಡವರು. ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣ ಮುಗಿಸಿದ್ದು ಶಂಕರಪುರದಲ್ಲಿ ಡಿಪ್ಲೊಮಾವನ್ನು ಡಾ.ಟಿ.ಎಮ್.ಎ ಪೈ ಪಾಲಿಟೆಕ್ನಿಕ್ ಮಣಿಪಾಲದಲ್ಲಿ ಪೂರ್ಣಗೊಳಿಸಿದರು಼.ಬಾಲ್ಯದಲ್ಲಿಯೇ ನೃತ್ಯ ದಲ್ಲಿ ಆಸಕ್ತಿ ಹೊಂದಿದ್ದ ಇವರು ಅನೇಕ ವೇದಿಕೆ ಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು.ವಾಲಿಬಾಲ್ ಹಾಗೂ ತ್ರೋಬಾಲ್ ಆಟಗಾರ್ತಿ ಯಾದ ಇವರು ಚಿಕ್ಕಬಳ್ಳಾಪುರ ದಲ್ಲಿ ನಡೆದ ಹೈಜಂಪ್ ಸ್ಪರ್ಧೆ ಯ ಇಂಟರ್ ಕಾಲೇಜು ಸ್ಪೋರ್ಟ್ಸ್ ಮೀಟ್ನಲ್ಲಿ ರಾಜ್ಯ ಕ್ಕೆ ದ್ವಿತೀಯ   ಬಹುಮಾನ ವನ್ನು ಪಡೆದಿರುವುದು ಹೆಮ್ಮೆಯ ಸಂಗತಿ.ಉಡುಪಿಯ ಪ್ರಸಿದ್ಧ ನಾಟಕ ತಂಡವಾದ ಅಭಿನಯ ಕಲಾವಿದರು ತಂಡದಲ್ಲಿ ಕಲಾವಿದೆಯಾಗಿರುವ ಇವರು ಸ್ನೇಹ ಧಾರೆ ಎಂಬ ಕಿರುಚಿತ್ರ ದಲ್ಲಿ ಕೂಡಾ ನಟಿಸಿದ್ದಾರೆ. ಸಂಭ್ರಮ ಪೇಸ್ಟ್ 2018 ಕಿರುಚಿತ್ರ ಅವಾರ್ಡ್ ಕಾರ್ಯಕ್ರಮ ದಲ್ಲಿ ಬೆಸ್ಟ್ ಕಾಮಿಡಿ‌ ಫಿಮೇಲ್ ಆಕ್ಟ್ಟೆಸ್ ಅವಾರ್ಡ್ ಕೂಡಾ ಪಡೆದಿರುತ್ತಾರೆ‌.ಇನ್ನೂ ಹೆಚ್ಚಿನ ಸಾಧನಗಳು ಇವರಿಂದ ಆಗಲಿ ಪ್ರತಿ ಹೆಜ್ಜೆಯಲ್ಲು ಯಶಸ್ವಿಯಾಗಿ ಮುನ್ನಡೆಯಲಿ ಇವರ ಸಾಧನೆಗಳಿಗೆ ನಮ್ಮ ಬಿಲ್ಲವೆರ್ ಪೇಜ್ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು.


1 comment: