Saturday, January 19, 2019

ಮಿನುಗುವ_ನಕ್ಷತ್ರ'ಎಲ್ಲರ ನಲ್ಮೆಯ ಉತ್ತಮ ಶೈಲಿಯ ನಿರೂಪಕ ಹಾಗೂ ಬಹುಮುಖ ಪ್ರತಿಭೆಯ ಯುವ ಸಾಧಕ ಸಕೇಶ್_ಪೂಜಾರಿ.

"#ಮಿನುಗುವ_ನಕ್ಷತ್ರ'ಎಲ್ಲರ ನಲ್ಮೆಯ ಉತ್ತಮ ಶೈಲಿಯ ನಿರೂಪಕ ಹಾಗೂ ಬಹುಮುಖ ಪ್ರತಿಭೆಯ ಯುವ ಸಾಧಕ #ಸಕೇಶ್_ಪೂಜಾರಿ. 

ದಿ।। ಕೊರಗಪ್ಪ ಪೂಜಾರಿ ಮತ್ತು ಶ್ರೀಮತಿ ರತ್ನ ದಂಪತಿಯವರ ಮಗನಾಗಿ ಜನಿಸಿರುವ ಇವರು, ಮೂಲತಹ ಮೂಡಬಿದಿರಿಯವರು. ವಿದ್ಯೆಯೊಂದಿಗೆ ಕಲೆಯ ಕಡೆ ಆಸಕ್ತಿಯನ್ನು ಬೆಳೆಸಿಕೊಂಡ, ಇವರು ಕಲೆ , ಯಕ್ಷಗಾನ, ನಾಟಕ,ಸಾಹಿತ್ಯ, ನಿರೂಪಣೆಯಲ್ಲಿ ತನ್ನದೇ ಛಾಪು ಇಟ್ಟುಕೊಂಡವರು, .ಅಲ್ಲದೆ ಸ್ವತಃ ನಾಟಕ, ಬೀದಿ ನಾಟಕ, ರಚಿಸಿ ತಾವೇ ನಟಿಸಿ ನಿರ್ದೇಶಿದ್ದಾರೆ.

ಮಾನವ ಸಂಪನ್ಮೂಲ ವಿಭಾಗದಲ್ಲಿ ಉನ್ನತ ವ್ಯಾಸಂಗವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದವರು, ಕಾಲೇಜು ದಿನಗಳಲ್ಲಿ ಸಾಹಿತ್ಯದ ಮತ್ತು ನಿರೂಪಣೆಯಲ್ಲಿ ತನ್ನನು ತಾನು ತೊಡಗಿಸಿಕೊಂಡವರು. ಯಕ್ಷಗಾನ ಹವ್ಯಾಸಿ ಕಲಾವಿದರಾಗಿ ಅನೇಕ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ನಿರೂಪಣೆಯಲ್ಲೂ ತನ್ನದೇ ಶೈಲಿಯನ್ನು ರೂಪಿಸಿಕೊಂಡು ಭಹಳಷ್ಟು ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಅನೇಕ ಸಂಘಸಂಸ್ಥೆಗಳು ಗೌರವಿಸಿದೆ
ಜಿಲ್ಲಾ ಮಟ್ಟದ ಯೋಗಾ ಪ್ರಶಸ್ತಿ, ಜಿಲ್ಲಾ ಮಟ್ಟದ ನಡಿಗೆ ಪ್ರಶಸ್ತಿ, ಉತ್ತಮ ಕ್ಯಾಂಪೆರ್ ೨೦೧೮ ಪ್ರಶಸ್ತಿ, ಉತ್ತಮ ನಿರೂಪಕ ಪ್ರಶಸ್ತಿಗಳನ್ನ ತನ್ನಾಡಿಗಿಸಿಕೊಂಡಿದ್ದಾರೆ.

ಪ್ರಸ್ತುತ ಇವರು ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕಾರ್ಯ ನಿರ್ವಶಿಸುತಿದ್ದಾರೆ, ಅನೇಕ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಇವರು ಬೆಂಗಳೂರು ಯುವವಾಹಿನಿ ಸಕ್ರಿಯ ಸದಸ್ಯರು ಎನ್ನುದಕ್ಕೆ ಹೆಮ್ಮೆಯಾಗುತಿದೆ.
ಮರೆಯಾದರು ವ್ಯಕ್ತಿತ್ವವನ್ನು ಸ್ಮರಿಸುವಂತೆ ಸಾಧನೆ ಮಾಡಬೇಕು ಎನ್ನವ ದ್ಯೇಯದೊಂದಿಗೆ ಕಲಾಕ್ಷೇತ್ರವನ್ನು ಆರಾಧಿಸುತ್ತಾ ಬಂದಿದ್ದಾರೆ.

ಇವರ ಜೀವನದಲ್ಲಿ ಪರಮಾತ್ಮನು ಸುಖ, ಶಾಂತಿ, ನೆಮ್ಮದಿಯನ್ನು, ಕರುಣಿಸಿ ಇವರ ಆಸೆ ಆಕಾಂಷೆಗಳನ್ನು ಈಡೇರಿಸಲಿ. ಇವರು ಇನ್ನಷ್ಟ್ಟು ಸಾಧನೆಗಳನ್ನು ಮಾಡಲಿ ಎಂದು ಯುವವಾಹಿನಿ ಬೆಂಗಳೂರು ಘಟಕವು ಹಾರೈಸುತ್ತದೆ. 

ಬರಹ : ರಾಘವೇಂದ್ರ ಎಸ್ ಪೂಜಾರಿ







2 comments: