Wednesday, January 9, 2019

ಬಿಸಿ ರಕ್ತದ ಪರದೇಶದಲ್ಲಿ ದುಡಿಯುವ ಬಿಲ್ಲವ ಯುವಕರಿಗೊಂದು ಮನವಿ

#ಪರ_ದೇಶದ_ಬಿಲ್ಲವ_ಬಿಸಿ_ರಕ್ತದ_ಯುವಕರೇ_ಜೈಲು_ಇಲ್ಲಿಯೂ_ಇದೆ..#ಇಲ್ಲಿಗೆ_ಬಂದು_ಬಿಡಿ

✍:-  #ತೇಜು_ಬಿರ್ವ_ಕೇಪುಳು
ವಿಧ್ಯೆ ಕಲಿಯುವ  ಸಮಯದಲ್ಲಿ ಗಂಭೀರವಾಗಿರಲಿಲ್ಲ  ,ತಮ್ಮದೇ  ಆಟ ಎಂಬಂತೆ  ನಡೆದಿದ್ದಾಯಿತು  , ಪ್ರಾಯಕ್ಕೆ  ಬಂದಾಗ ಜೀವನ ನಡೆಸಲು  ಬೇಕಾಗುವಷ್ಟು  ಆದಾಯ  ಬರುವ ಕೆಲಸ ದೊರಕಲಿಲ್ಲ  , ಕೊನೆಗೆ ಹೆತ್ತ ತಪ್ಪಿಗೆ  ಮನೆಯಲ್ಲಿ ಹೆತ್ತ ಮಗಳ ಮದುವೆಯ  ಜವಾಬ್ದಾರಿ  ಇದ್ದರು ಮಗನನ್ನು  ಗಲ್ಫ್  ದೇಶಗಳಿಗೆ  ಕಳಿಸಿ ತಮಗೆ  ಸಹಾಯ ಆಗಬಹುದೆಂಬ  ಉದ್ದೇಶದಿಂದ ತಂದೆ ತಾಯಂದಿರು  ಸಿಕ್ಕ ಸಿಕ್ಕವರ  ಕೈ ಕಾಲು  ಸಾಲ  ಮೂಲ ಮಾಡಿ ಮಕ್ಕಳನ್ನು  ಹೊರ ದೇಶಕ್ಕೆ  ಭಾರವಾದ  ಮನಸ್ಸಿನಿಂದ  ಏನೋ ಮುಂದಕ್ಕೆ ಒಳ್ಳೆಯದಾಗಬಹುದೆಂದು  ಆಶಾ  ಭಾವನೆಯಿಂದ ಕಳಿಸಿ ಕೊಟ್ಟಿದ್ದಾಯ್ತು  .ಇಲ್ಲಿಗೆ ಆ ತಂದೆ ತಾಯಂದಿರ  ಕಷ್ಟ ದೂರ  ಆಯಿತೆಂದು  ಕಣ್ಮುಚ್ಚಿ  ತೆರೆದು  ಯೋಚಿಸಿದಾಗ  , ದೂರದ ಆ ದೇಶಗಳಿಗೆ ದುಡಿಯಲು  ಹೋದ  ಯುವಕರು ಸಾಬೀತಾಗಿ  ದುಡಿಯುತ್ತಿದ್ದಾರೆ  ಎಂದೆನಿಸಿದರೆ  ತಂದೆ ತಾಯಿಯರಿಗೆ  ಬಹಳ ದೊಡ್ಡದಾದ ಸಿಡಿಲೆ  ಬಡಿದ  ಹಾಗಾಗಿದೆ  .

ಹೌದು, ಗಲ್ಫ್ ದೇಶಗಳಿಗೆ ತನ್ನ ಕುಟುಂಬದ ಕಷ್ಟಗಳಿಗೆ  ಹೆಗಲು ಕೊಡುವ  ದ್ರಿಷ್ಟಿಯಿಂದ ಹೋದ ಬಹಳಷ್ಟು ಕರಾವಳಿಯ  ಹುಡುಗರು  ಸಾಮಾಜಿಕ ಜಾಲತಾಣಗಳಲ್ಲಿ   ತಮ್ಮ ಹೀರೋಯಿಸಂ ತೋರಿಸಲು  ಹೋಗಿ ತನ್ನ ಜೀವನ ಉದ್ದೇಶವನ್ನೇ  ಕಳಕೊಂಡು  ಹೀನಾಯ  ಸ್ಥಿತಿಯಲ್ಲಿದ್ದಾರೆ . ಇದರಲ್ಲಿ ಸುಮಾರು 95-98  %  ಯುವಕರು #ಬಿಲ್ಲವ_ಸಮಾಜದ_ಯುವಕರೆಂಬುದು  ಇನ್ನ  ಖೇದಕರ . ಇತ್ತೀಚಿಗೆ ಇಸ್ಲಾಂ  ಪ್ರವಾದಿಯ  ವಿಷಯದಲ್ಲಿ ನಡೆದ ಪ್ರಕರಣದ  ಬಗ್ಗೆ ಗಲ್ಫ್ ದೇಶಗಳಲ್ಲಿ  ಕೆಲಸ ಮಾಡುವ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಚರ್ಚೆ  ನಡೆಸಿದ್ದು  ಹಾಗು ಪೋಸ್ಟ್ ಹಾಕಿದ್ದರಿಂದ  ಅಲ್ಲಿನ  ಜನರ ಕೈಗೆ  ಸಿಕ್ಕಿ ವಿಲ  ವಿಲ ಒದ್ದಾಡುತ್ತಿದ್ದರಂತೆ . ಇನ್ನೂ ಕೆಲವರು  ಅಲ್ಲಿನವರಿಂದ  ಏಟೂ  ಕೂಡ ತಿಂದಿದ್ದಾರೆಂದು  ಅಲ್ಲಿ ಕೆಲಸ ಮಾಡುತ್ತಿರುವ ಹುಡುಗರೇ  ಹೇಳುತ್ತಿದ್ದಾರೆ .ಇನ್ನೂ ಕೆಲವರನ್ನು ಕೆಲಸದಿಂದ  ತೆಗೆದು ಬರಿ  ಕೈಯ್ಯಲ್ಲಿ  ಕಲಿಸಿದ್ದರೆಂದೂ  ಕೂಡ ಹೇಳುತ್ತಿದ್ದಾರೆ .

ಶಬರಿಮಲೆಯ  ವಿಷಯದ  ಬಗ್ಗೆ ಕೂಡ ಹಾಕಿರುವ  ಪೋಸ್ಟ್ ಗಳಿಗೆ ಕೇರಳ  ಸರಕಾರವು  ಯು ಎ ಇ ಸರಕಾರದೊಂದಿಗೆ  ಮಾತನಾಡಿ ಇಂಟರ್ಪೋಲ್  ಗೆ ಹಾಕಿಸಿದ್ದಾರೆಂಬ  ಸುದ್ದಿಯು  ಹರಿದಾಡುತ್ತಿದೆ . ಬೇರೆ ದೇಶಗಳಿಗೆ ದುಡಿಯಲು ಹೋಗುವ  ಯುವಕರಿಗೆ ಇದೆಲ್ಲ ಬೇಕಿತ್ತಾ  !? ನಿಮ್ಮನ್ನ ನಂಬಿ  ಕಳಿಸಿರುವ  ತಂದೆ ತಾಯಿಗಳ  ಆಸೆ ಆಕಾಂಕ್ಷೆಗಳನ್ನು  ಬರಿಯ ನಿಮ್ಮ ಫೇಸ್ಬುಕ್ ಸ್ಟೇಟಸ್ ನಿಂದ ಹಾಲುಕೆಡವಿ  ಏನು  ಸಾದಿಸಿದ್ದೀರಿ  !? ನೆನಪಿರಲಿ  ನಮ್ಮ ದೇಶದ  ಕಾನೂನಿಗೂ  ಆ ದೇಶಗಳ  ಕಾನೂನಿಗೂ ಬಹಳಷ್ಟು ವ್ಯತ್ಯಾಸವಿದೆ . ಕೆಲ ಮೂಲ ಗಳ ಪ್ರಕಾರ  ಮೂವರು ಬಿಲ್ಲವ ಯುವಕರಿಗೆ 15 ವರ್ಷಗಳ  ಕಾಲ ಶಿಕ್ಷೆ ವಿದಿಸಿದ್ದಾರೆಂದು  ಹೇಳಲಾಗುತ್ತಿದೆ . ನೀವು ಜೈಲು  ಪಾಲಾಗಲು  ಅಲ್ಲಿಗೆ ಹೋಗಬೇಕಿತ್ತೇ  !? ಜೈಲ್  ನೋಡುವ  ಆಸೆ ಇದ್ದಾರೆ ಇಲ್ಲೇ  ನೋಡಬಹುದಿತ್ತಲ್ಲವೇ  !? ಕನಿಷ್ಠ ಪಕ್ಷ ಇಲ್ಲಿ ನಿಮ್ಮ ಹೆತ್ತವರಾದರು  ಬೈಲ್  ಕೊಡಿಸುತ್ತಿದ್ದರು .

ಬಿಲ್ಲವ ಯುವಕರಿಗೆ ಇನ್ನ್ಯಾವಾಗ  ಬುದ್ದಿ ಬರೋದು , ನಮ್ಮವರ ಕೆಲಸ ನೋಡುವಾಗ  ಜೈಲ್ ,ಕೇಸ್ ಗಳನ್ನ ದತ್ತು  ಪಡೆದವರ  ರೀತಿ ಆಡಿಕೊಳ್ಳುತಿದ್ದಿರಿ  . ಸಾಮಾಜಿಕ ಜಾಲತಾಣಗಳಲ್ಲಿ ನೀವು ಹಾಕುವ  ಪೋಸ್ಟ್ ಗಳಿಗೆ ಲೈಕ್ ಕಾಮೆಂಟ್ಸ್  ಕೊಡಲು  ಕೆಲಸ ಇಲ್ಲದ ಜನರು ಬಹಳಷ್ಟು ಇರಬಹುದು  , ಆದರೆ ನೀವು ತೊಂದರೆ ಅನುಭವಿಸಿದಾಗ  ನಿಮಗೆ ಹಿಂದಿನಿಂದ  ಬಯ್ಯುತ್ತಾರೆಯೇ  ಹೊರತು ಯಾರು ಸಹಾಯ ಮಾಡೋದಿಲ್ಲ  . ಹೊರ ದೇಶದಲ್ಲಿ ದುಡಿಯುವ  ಯುವಕರಲ್ಲಿ  ಒಂದು ವಿನಂತಿ ತಂದೆ ತಾಯಿ ಅಕ್ಕ  ತಂಗಿ  ಇವರುಗಳ ಭವಿಷ್ಯತ್ತಿಗಾಗಿ  ದುಡಿಯಲು ಹೋಗಿರುವ  ನೀವು ನಿಮ್ಮವರ  ಕಷ್ಟಗಳನ್ನ  ಒಂದ್ಸಲ  ಯೋಚಿಸಿ , ನಿಮ್ಮ ಕುಟುಂಬ ವನ್ನ  ಒಂದ್ಸಲ ಯೋಚಿಸಿ , ಆಮೇಲೆ  ಧರ್ಮದ ಅಮಲನ್ನು  ಸಾಮಾಜಿಕ ಜಾಲತಾಣಗಲ್ಲಿ  ಹೊರದೇಶಗಳಲ್ಲಿ  ವ್ಯಕ್ತಪಡಿಸಿ .

ಧರ್ಮವು ಜೀವನವನ್ನ ರೂಪಿಸಬೇಕು  ಹೊರತು ಅದರಿಂದ ಜೀವನ ಹಾಳಾಗುವಂತಹ  ಕೆಲಸ ಮಾಡಿಕೊಳ್ಳಬೇಡಿ . ಹಾರಾಡಿದವರು  ಹಾರಾಡಿ  ಆಯ್ತು  , ಅಂತಹವರಿಗೆ  ಬುದ್ದಿ ಹೇಳುವ ಅಥವಾ ಅವರು ಕೇಳಿಕೊಳ್ಳುವ  ವ್ಯವಧಾನ  ಇರೋದಿಲ್ಲ  , ಅದಲ್ಲದೆ  ಅಂತಹವರನ್ನು  ಹೋಗಲಿ  ಅಟ್ಟಕ್ಕೇರಿಸುವವರು  ಇರೋವರೆಗೂ  ಸರಿ ಆಗೋದಿಲ್ಲ . ಹಾಳದವರು  ಹಾಳಾಗಿ  ಹೋದರು  , ಹೋಗಲಿ ಬಿಡಿ ಉಳಿದವರಾದರು  ಜಾಗ್ರತೆಯಲ್ಲಿರಿ , ನಿಮಗೂ  ಅದೇ ರೀತಿ ಪೋಸ್ಟ್ ಹಾಕಿ ಹೀರೋ  ಗಳಾಗಿ  ಅಲ್ಲಿನ ಜೈಲಿಗೆ ಸೇರಬೇಕಿಂದಿದ್ದರೆ  ದಯವಿಟ್ಟು ಅಲ್ಲಿಂದ ಬಂದು ಇಲ್ಲಿನ ಜೈಲಿಗೆ ಸೇರಿ , ಇಲ್ಲಿ ಕನಿಷ್ಠ ಪಕ್ಷ ನಿಮ್ಮ ತಂದೆ ತಾಯಂದಿರಾದರು  ಬೈಲ್ ಮಾಡಿ ಕೊಡಬಹುದು  ...

0 comments: