Wednesday, January 16, 2019

ಬಹುಮುಖ ಬಿಲ್ಲವ ಯುವ ಪ್ರತಿಭೆ ವಿರೇಶ್ ಸುವರ್ಣ



ನಮಸ್ತೆ ಸ್ನೇಹಿತರೆ ನಾನಿಗ ನಿಮಗೆ ಹೆಳ ಹೊರಟಿರುವುದು ನನ್ನ ಆತ್ಮೀಯ ಗೆಳೆಯ ವೀರೇಶ್ ಆರ್ ಸುವರ್ಣ ಮಡುಂಬು ಇವರ ಬಗ್ಗೆ...

*ಬೆಲೆ ಕಟ್ಟಲಾಗದ ವಸ್ತು ಅದು ಕಲೆ*

ಬಹುಮುಖ ಪ್ರತಿಭೇಯಾಗಿ ಗುರುತಿಸಿಕೊಂಡಿರುವ ಇವರು ಕಲಾಕ್ಷೇತ್ರದಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿ ತನ್ನನ್ನ ತಾನು ಕಲಾ ಜಗತ್ತಿಗೆ ಅರ್ಪಿಸಿಕೋಂಡವರು...

ಕಲೆಗಳು ಹಲವಾರು, ಕಲಿಯುವವರು ಹಲವರು. ಕಲೆಗಾರಿಕೆ ದೇವರು ಕೊಟ್ಟ ವರ.
ಅದು ಎಲ್ಲರಿಗೂ ಒಲಿದು ಬರುವುದಿಲ್ಲ. ಅಂತಹ ಕಲೆಯನ್ನು ಯಾವುದೆ ವಿಶೇಷ ತರಬೇತಿ ಪಡೆಯದೆ ಮೈಗೂಡಿಸಿಕೊಂಡಿರುವ ಉದಯೋನ್ಮುಖ ಕಲೆಗಾರ

ಒಮ್ಮೆ ಕಲೆಯ ಮೋಡಿಗೊಳಗಾದರೆ ಅದರಿಂದ ಹೊರಬರುವುದು ಕಷ್ಟ. ಪ್ರತಿ ಕ್ಷಣವೂ ಇನ್ನೊಂದು, ಹೊಸತೊಂದು ಕಲಿಯುವ ಹಂಬಲ ಉಂಟಾಗುತ್ತದೆ. ಹೀಗೆ ವಿಭಿನ್ನ ಕಲಾಕೃತಿಗಳನ್ನು ರಚಿಸಿ
ಖುಷಿ ಪಡುವ ವೀರೆಶ್ ಗೆ ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಎಲ್ಲಿಲ್ಲದ ಆಸಕ್ತಿ. ಛಲ ಬಿಡದ ಪ್ರಯತ್ನದಿಂದ ಚಿತ್ತಾಕರ್ಷಕ ಕಲಾಕೃತಿಗಳನ್ನು ರಚಿಸುತ್ತಾ ತನ್ನೊಳಗಿನ ಭವಿಷ್ಯದ ಕಲಾವಿದನನ್ನು ಬಾನಂಚಿನಲ್ಲಿ ನಿರೀಕ್ಷಿಸುತ್ತಿದ್ದಾರೆ.

ಶಾಲಾ ಕಾಲೇಜು
ದಿನಗಳಲ್ಲಿ
ಚಿತ್ರಕಲಾ ಸ್ಪರ್ಧೆಗಳಲ್ಲಿ
ಭಾಗವಹಿಸಿರುವ ವೀರೇಶ್
ಹಲವು ಪ್ರಶಸ್ತಿಗಳನ್ನು
ಪಡೆದಿದ್ದಾರೆ.
ಚಿಕ್ಕಂದಿನಿಂದಲೂ
ಇವರದ್ದು ಕ್ರಿಯಾಶೀಲ
ಮನಸ್ಸು. ಕಲೆಯ ಬಗೆಗೆ
ವಿಶೇಷ ಒಲವು.
ಚಿಕ್ಕಪುಟ್ಟ ವಸ್ತು
ಕಂಡರೂ ಅದಕ್ಕೆ ಕಲೆಯ
ಆಯಾಮ ನೀಡುವುದು
ಹೇಗೆ ಎಂದು ಅವರ
ಮನಸ್ಸು
ಯೋಚಿಸುತ್ತಿತ್ತು.

ಚಿಕ್ಕದೊಂದು ಚಾಕ್ ಪೀಸ್
ಕಂಡರೂ ನೆಲದ ಮೇಲೆ
ಏನಾದರೊಂದು ಗೀಚಿ
ಅದಕ್ಕೊಂದು ಕಲೆಯ
ರೂಪ ನೀಡುವ
ಸೃಜನಶೀಲತೆ
ಅವರಲ್ಲಿತ್ತು.
ವಿಶೇಷವೆಂದರೆ ವೀರೇಶ್
ಅವರು ಈ ಕಲೆಯನ್ನು
ಸ್ವಯಂ
ರೂಢಿಸಿಕೊಂಡವರು.

ಇದಕ್ಕಾಗಿ ಅವರು ಯಾವ
ವಿಶೇಷ ತರಬೇತಿಯನ್ನು
ಪಡೆದಿಲ್ಲ.
ಶಾಲಾ ಕಾಲೇಜು
ದಿನಗಳಲ್ಲಿ
ಚಿತ್ರಕಲಾ ಸ್ಪರ್ಧೆಗಳಲ್ಲಿ
ಭಾಗವಹಿಸಿರುವ ವೀರೇಶ್
ಹಲವು ಪ್ರಶಸ್ತಿಗಳನ್ನು
ಪಡೆದಿದ್ದಾರೆ. ಶಾಲಾ
ಅಧ್ಯಾಪಕರು (ನಟರಾಜ್ ಉಪದ್ಯಾಯರ)
ಪ್ರೇರಣೆಯಿಂದ ಪೆನ್ಸಿಲ್,
ವಾಟರ್ ಕಲರ್ , ಆಯಿಲ್
ಕಲರ್, ಮುಂತಾದ
ಕಲಾ ಪ್ರಕಾರಗಳನ್ನು
ಇವರು ಸ್ವಯಂ ಕರಗತ
ಮಾಡಿಕೊಂಡರು

 ಚಿಕ್ಕಂದಿನಿಂದಲೂ ಚಿತ್ರಕಲೆ ಮತ್ತು ಮಿಮಿಕ್ರಿಯಲ್ಲಿ ಆಸಕ್ತಿ ಇದ್ದ ಇವರು.. ತಮ್ಮ ಶಾಲಾ ಜೀವನದಲ್ಲಿ.. ಅನೇಕ ಚಿತ್ರಗಳನ್ನು ಬಿಡಿಸಿ ಅದರ ಜೊತೆಗೆ ಮಿಮಿಕ್ರಿಯಲ್ಲಿ ಆಸಕ್ತಿ ಬೇಳೇಸಿಕೊಂಡು ಸತತವಾದ ಪ್ರಯತ್ನದಿಂದಾಗಿ ಅನೇಕ ಚಲನಚಿತ್ರ ನಟರುಗಳ ಸ್ವರವನ್ನು ಅನುಕರಣೆ ಮಾಡಿದರು ಮತ್ತು ತಮ್ಮ ಸಹಪಾಠಿಗಳ ಮತ್ತು ಅಧ್ಯಾಪಕರುಗಳ ಮನಗೆದ್ದರು..

ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಿಮಿಕ್ರಿ ಮುಖೇನ ಜನಮಾನಸವನ್ನು ತನ್ನತ್ತ ಸೇಳೇದುಕೊಂಡವರು.

ಜನಗಳಿಗೆ ನಗಿಸಿ ಜನರ ಮನಸ್ಸನ್ನು  ಅರ್ಥೈಸಬಲ್ಲವನು ನಿಜವಾದ ಕಲಾವಿದ ಎಂಬ ಮಾತಿನಂತೆ ಅತ್ಯುತ್ತಮ ಕಲಾವಿದನಾಗಿ ಮೂಡಿಬಂದರು

 ಇವರು ಇನ್ನಂಜೆ ಗ್ರಾಮದ ಮಡುಂಬು ಎಂಬ ಸಣ್ಣ ಊರಿನ ಶಾಂತಿಕೆರೆ ಎಂಬಲ್ಲಿ ಹುಟ್ಟಿಬೆಳೆದವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮತ್ತು ಪ್ರೌಡಶಿಕ್ಷಣವನ್ನು ಎಸ್ ವಿ ಯಚ್ ಪದವಿಪೂರ್ವ ಕಾಲೇಜು ಇನ್ನಂಜೇಯಲ್ಲಿ ಮುಗಿಸಿದರು ನಂತರ ಉನ್ನತ ಶಿಕ್ಷಣವನ್ನು  ಸೈಂಟ್ ಮೇರಿಸ್ ಕಾಲೇಜು ಶಿರ್ವ ಇಲ್ಲಿ ಪಡೇದರು..

ಕಾಲೇಜು ಜೀವನದಲ್ಲಿ  ನಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡು ತುಳು ಭಾಷೆಯ ನಾಟಕದ ತೆರೆಯಲ್ಲಿ ಕಾಣಿಸಿಕೊಂಡರು.. ಮತ್ತು ಇದರ ಜೊತೆಗೆ ಅತಿಥಿ ಕಲಾವಿದನಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಬರಹಗಾರನಾಗಿ,ಹಾಡುಗಾರನಾಗಿ, ನಿರ್ದೇಶಕನಾಗಿ ಹಲವಾರು ತುಳು ಬಾಷೇಯ ಆಲ್ಬಂ ಸಾಂಗ್ ಗಳಿಗೆ ಪದ್ಯಗಳನ್ನು ಬರೆದಿದ್ದಾರೆ ಮತ್ತು ಹಾಡುಗಳನ್ನು ಹಾಡಿದ್ದಾರೆ ಹಾಗು  ನಿರ್ದೇಶಿಸಿದ್ದಾರೆ..

ಭವಿಷ್ಯದಲ್ಲಿ ಯಾವುದೇ ಉನ್ನತ ವೃತ್ತಿ ಲಭಿಸಿದರೂ ಚಿತ್ರಕಲೆಯ ನನ್ನ ಹವ್ಯಾಸವನ್ನು ಬದುಕಿನಲ್ಲಿ ಎಂದಿಗೂ ಕೈ ಬಿಡುವುದಿಲ್ಲ ಏನ್ನೂತಾರೇ ಇವರು.
 

ಇತಿ ನಿಮ್ಮವ

✍🏻 ವಿಕ್ಕಿ ಪೂಜಾರಿ ಮಡುಂಬು

ವಿಕ್ಕಿ ಪೂಜಾರಿ ಮಡುಂಬು







0 comments: