Sunday, January 20, 2019

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜಕೀಯ ರಂಗಕ್ಕೆ ಬಂದ ದಾರಿಯ ಕಿರುಪರಿಚಯ ..

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜಕೀಯ ರಂಗಕ್ಕೆ ಬಂದ ದಾರಿಯ ಕಿರುಪರಿಚಯ .ಕಿರಾಣಿ ಅಂಗಡಿಯಿಂದ ವಿಧಾನ ಪರಿಷತ್ತಿನ ತನಕ ಜನಪರಹೋರಾಟಗಳಿಂದಲೇ ಅರಳಿದ ಜನನಾಯಕ.!

ಕೋಟದ ಕಿರಾಣಿ ಅಂಗಡಿಯಲ್ಲಿ ರೇಷನ್ ಕಟ್ಟುತ್ತಾ,ನಂತರ ಕ್ಯಾಮೆರಾ ನೇತಾಕಿಕೊಂಡು ಪೋಟೊ ಕ್ಲಿಕ್ಕಿಸುತ್ತಾ,ಕೋಟದಲ್ಲಿ 'ಸ್ವಾತಿ' ಹೆಸರಿನ ಸ್ಟುಡಿಯೊ ನಡೆಸುತ್ತಿದ್ದವರು ಮುಂದೆ ಜನಪರ ಹೊರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು, ಹಂತಹಂತವಾಗಿ ಮೇಲೆರುತ್ತಾ ಈ ರಾಜ್ಯದ ಮುಜರಾಯಿ ಮಂತ್ರಿ ಕೂಡ ಆಗಿ ಹೋಗಿ, ಇದೀಗ ಬುದ್ದಿವಂತರ ಛಾವಡಿ ಎಂದು ಕರೆಸಿಕೊಳ್ಳುವ ವಿಧಾನ ಪರಿಷತ್ತಿನ ವಿರೋದ ಪಕ್ಷದ ನಾಯಕ ಸ್ಥಾನ ಅಲಂಕರಿಸಿ ಬಿಟ್ಟರು,ಅವರ ಹೆಸರು ಕೋಟ ಶ್ರೀನಿವಾಸ್ ಪೂಜಾರಿ.!!ಭಾರತಿಯ ಜನತಾ ಪಕ್ಷಕ್ಕೆ ತೋರಿದ ನಿಷ್ಠೆ,ಅಸ್ಖಲಿತ ವಾಕ್ ಚಾತುರ್ಯ ಹಾಗೂ ಸದನಶೂರತನಗಳೆಲ್ಲವೂ ಒಟ್ಟಾಗಿ ಸೇರಿ ಅವರನ್ನು ವಿಧಾನ ಪರಿಷತ್ತಿನ ವಿರೋದ ಪಕ್ಷದ ನಾಯಕನ ಸ್ಥಾನದ ತನಕ ತಂದು ನಿಲ್ಲಿಸಿತು,ಜನರ ಸಮಸ್ಯೆಗಳಿಗೆ ಗಟ್ಟಿ ದ್ವನಿಯಾದ ಕೋಟ ಶ್ರೀನಿವಾಸ ಪೂಜಾರಿಯವರು ನಡೆದು ಬಂದ ದಾರಿಯ ನೋಡುತ್ತಾ ಹೋದರೆ ಅಸಾಧಾರಣ ವ್ಯಕ್ತಿತ್ವವೊಂದು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ..!!

ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮದ ಅಣ್ಣಯ್ಯ ಪೂಜಾರಿ ಮತ್ತು ಲಚ್ಚಿ ಪೂಜಾರಿಯವರ ಮೂವರು ಮಕ್ಕಳಲ್ಲಿ ಕೊನೆಯವರಾಗಿ ಹುಟ್ಟಿದ ಇವರಿಗೆ ಉಳಿದಿಬ್ಬರು ಹಿರಿಯ ಅಕ್ಕಂದಿರು..!!

ಹೋರಾಟದ ಬದುಕು: ಕೋಟ ಪೇಟೆಯ ವಾಸುದೇವ ನಾಯ್ಕರ ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕೆ ಸೇರುವ ಮೊದಲು ಕೇವಲ ಏಳನೆ ತರಗತಿ ತನಕ ಓದಿ ಶಿಕ್ಷಣ ಮುಗಿಸಿದ್ದವರು,ನಂತರ ಸ್ವಾತಿ ಹೆಸರಿನ ಸ್ಟುಡಿಯೋ ತೆರೆದು ಪೊಟೊ ಕ್ಲಿಕ್ಕಿಸುತಿದ್ದ ದಿನಗಳಲ್ಲಿಯೇ ಜನಪರ ಹೋರಾಟಗಳಲ್ಲಿ ಮುಂಚೂಣಿಗೆ ಬಂದವರು.ಬಂಗಾರಪ್ಪ ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಭೇಟಿ ಇತ್ತಾಗ  ಜಿಲ್ಲೆಯ ಮೂರ್ತೆದಾರರನ್ನು ಒಗ್ಗೂಡಿಸಿ ಮೂರ್ತೆದಾರರ ಸಮಸ್ಯೆಗಳ ವಿರುದ್ದ ಮುಖ್ಯಮಂತ್ರಿಯ ಗಮನಸೆಳೆದದ್ದು ಅವತ್ತಿಗೆ ಜಿಲ್ಲೆಯಲ್ಲಿ ದೊಡ್ಡ ಸುದ್ದಿಯಾಗಿ ಹೋಯಿತು..!!ಕೋಡಿ ಹೊಸಬೆಂಗ್ರೆ ಭಾಗದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ತಲೆದೋರಿದಾಗ ಆ ಭಾಗದ ಮಹಿಳೆಯರನ್ನು ಸಂಘಟಿಸಿ ಜಿಲ್ಲಾದಿಕಾರಿ ಕಛೇರಿ ಎದುರು ಕೊಡಪಾನ ತಂದು ರಾಶಿ ಹಾಕಿ ವ್ಯವಸ್ಥೆಯ ಬೆವರಿಳಿಸಿ ಬಿಟ್ಟಿದ್ದರು.!

ಪಂಚಾಯತ್ ಸದಸ್ಯರ ಗೌರವ ಧನ ಹೆಚ್ಚಿಸುವಲ್ಲಿ ಗಣನೀಯ ಪಾತ್ರ ವಹಿಸಿದ ಕೋಟ ಪೂಜಾರ್ರು,ಕಾರಂತರ ಥಿಂ ಪಾರ್ಕ್ ನಿರ್ಮಾಣ  ಹಾಗೂ 'ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ' ಆರಂಭಿಸುವಲ್ಲಿ  ಮುಂಚೂಣಿಯಲ್ಲಿ ಕಾಣಿಸಿಕೊಂಡರು, 94ಸಿ ಹಕ್ಕುಪತ್ರ ವಿತರಣೆ ಮಾಡುವಂತೆ ಉಡುಪಿ ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸಿ,ಎಸಿ ಕಚೇರಿಗೆ  ಮುತ್ತಿಗೆಯನ್ನೂ ಹಾಕಿದರು,ಅಸಮರ್ಪಕ ಮರಳು ನೀತಿ ವಿರುದ್ದ ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ನಡೆದ ಧರಣಿಯಲ್ಲಿ ಮುಂಚೂಣಿಯಲ್ಲಿ ಕುಳಿತರು,

ರಾಜಕೀಯ ಏಳು ಬೀಳು: ಮೊಟ್ಟ ಮೊದಲಬಾರಿಗೆ ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗಿ  ಉಪಾದ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಾ,ಕೋಟದ ಸಿಎ ಬ್ಯಾಂಕ್ ನಿರ್ದೇಶಕನಾಗಿ ಆಯ್ಕೆಯಾದರು,ಉಡುಪಿ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಕೋಟದ ಈ ನಾಯಕ,ಅಂದಿನ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎರಡು ಭಾರಿ ಸ್ಪರ್ದಿಸಿ ಹಾಗೂ ಜಯಪ್ರಕಾಶ್ ಹೆಗ್ಡೆ ಎದುರು ಸೋಲು ಅನುಭವಿಸಿದರೂ ನಂತರ ಸತತ,ಮೂರು ಭಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ,ಜಗದೀಶ್ ಶೆಟ್ಟರ್ ಸರಕಾರದಲ್ಲಿ ಮುಜರಾಯಿ ಸಚಿವನಾಗಿ ರಾಜ್ಯವೇ ಮೆಚ್ಚುವಂತಹ ಕೆಲಸ ಮಾಡಿ ಸೈ ಎನಿಸಿಕೊಂಡರು,ಈ ಭಾರಿ ವಿಧಾನ ಸಭೆ ಚುನಾವಣೆಯ ಉಡುಪಿ ಜಿಲ್ಲಾ ಬಿಜೆಪಿ ಉಸ್ತವಾರಿ ವಹಿಸಿಕೊಂಡ ತರುವಾಯ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿತು, ಇವತ್ತಿಗೆ ಏರಿದ ಈ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸ್ಥಾನ ಕೋಟ ಶ್ರೀನಿವಾಸ ಪೂಜಾರಿಯವರ ಹೋರಾಟದ ರಾಜಕೀಯ ಬದುಕಿಗೆ  ಅರ್ಹವಾಗಿಯೇ ಸಿಕ್ಕಿದ ಹುದ್ದೆ ಎಂದರೆ ಯಾವ ಅತಿಶೋಯಕ್ತಿಯೂ ಆಗದು..!!

ಪಾತ್ರ ವಹಿಸಿದ ಕೋಟ ಪೂಜಾರ್ರು,ಕಾರಂತರ ಥಿಂ ಪಾರ್ಕ್ ನಿರ್ಮಾಣ  ಹಾಗೂ 'ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ' ಆರಂಭಿಸುವಲ್ಲಿ  ಮುಂಚೂಣಿಯಲ್ಲಿ ಕಾಣಿಸಿಕೊಂಡರು,94ಸಿ ಹಕ್ಕುಪತ್ರ ವಿತರಣೆ ಮಾಡುವಂತೆ ಉಡುಪಿ ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸಿ,ಎಸಿ ಕಚೇರಿಗೆ  ಮುತ್ತಿಗೆಯನ್ನೂ ಹಾಕಿದರು,ಅಸಮರ್ಪಕ ಮರಳು ನೀತಿ ವಿರುದ್ದ ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ನಡೆದ ಧರಣಿಯಲ್ಲಿ ಮುಂಚೂಣಿಯಲ್ಲಿ ಕುಳಿತರು

ಹವ್ಯಾಸಿ ಅಂಕಣಕಾರರೂ ಆದ ಇವರು ವಡ್ಡರ್ಸೆ ರಘುರಾಮ ಶೆಟ್ಟರ ಮುಂಗಾರು ಪತ್ರಿಕೆಗೆ 'ಕೊಶ್ರಿಪು' ಹೆಸರಿನಲ್ಲಿ ನಿರಂತರ ಲೇಖನಗಳನ್ನು ಬರೆಯುತ್ತಿದ್ದವರು,ಇವತ್ತಿಗೂ ಎಡೆಬಿಡದ ಕೆಲಸದ ನಡುವೆಯೂ ಅನೇಕ ದಿನಪತ್ರಿಕೆಗಳ ಅಂಕಣಗಳಿಗೆ ಲೇಖನಗಳ&; ಬಿಡದೇ ಬರೆಯುತ್ತಾರೆ!!ಹಿಂದೊಮ್ಮೆ ಕೋಟದಲ್ಲಿ ಕ್ರಿಕೇಟ್ ಪಂದ್ಯಾಟವೊಂದು ನಡೆದಾಗ ಅದರ ಉದ್ಘಾಟನೆ ನೆರವೆರಿಸಿದ ಶಿವರಾಮ ಕಾರಂತರು ತೆಂಡುಲ್ಕರ್ ಸ್ಟೈಲಿನಲ್ಲಿ ಬ್ಯಾಟ್  ಹಿಡಿದು ನಿಂತ; ಅದೊಂದು ಪೋಟೊ ಕಂಡಾಗಲೆಲ್ಲಾ ಕ್ಯಾಮೆರಾ ಹಿಡಿದು ನಿಂತ ಶ್ರೀನಿವಾಸ ಪೂಜಾರ್ರು ಕಣ್ಣೆದುರು ನಿಲ್ಲುತ್ತಾರೆ,ಏಕೆಂದರೆ ಇವತ್ತಿಗೂ ಶಿವರಾಮ ಕಾರಂತರ ಅನೇಕ ಡಾಕ್ಯುಮೆಂಟರಿಗಳಲ್ಲಿ ಕಾಣಸಿಗುವ ಆ ಚಿತ್ರವನ್ನು ಕ್ಲಿಕ್ಕಿಸಿದ್ದು ಅವತ್ತು ಪೊಟೊಗ್ರಾಫರ್ ಆಗಿದ್ದ ಕೋಟ ಶ್ರೀನಿವಾಸ ಪೂಜಾರ್ರು..!!

0 comments: