Friday, January 11, 2019

ಕಿಲಾಡಿಗಳ ಕಿಲಾಡಿ ಕಾಮಿಡಿ ಕಿಲಾಡಿ ಅನೀಶ್ ಅಮೀನ್



✍ಚಂದ್ರಹಾಸ ಬಳಂಜ

ಮಾತಿನಿಂದ ಮನಸ್ಸು ಅಳೆಯಲಾಗದು, ಮುಖ ಭಾವದಿಂದ ವ್ಯಕ್ತಿತ್ವ ಹೇಳಲಾಗದು, ಹಾಗೆಯೆ ಒಬ್ಬರ ಮಾತು, ಗಂಭೀರ ನಡವಳಿಕೆಯಿಂದ ಪ್ರತಿಭೆಯನ್ನು ಹೇಳಲಾಗದು.
ನಾ ಈಗ ಹೇಳುವವರು ಅಂತವರೇ ಇವರನ್ನ ಮೊದಲ ಸಲ ನೊಡಿದರೆ, ಇವರ.ಮಾತನ್ನ ಕೇಳಿದರೆ ಇವರಿಗೂ ಹಾಸ್ಯಕ್ಕೂ ಸಂಬಂಧ ಇದೆ ಎನ್ನಲೂ ಸಾಧ್ಯವಿಲ್ಲ ಆದರೆ ಅದು ಸುಳ್ಳು ಇವರೊಬ್ಬ ರಾಜ್ಯ ಮೆಚ್ಚಿದ ಪ್ರತಿಭಾನ್ವಿತ ಹಾಸ್ಯ ಕಲಾವಿದ. 
ಎಲ್ಲಾರ ಜೊತೆ.ಸಮಾನವಾಗಿ ಬೆರೆಯುವ ಮನಸ್ಸು, ಪರಿಶ್ರಮದಿ ಮುಂದೆ ಬಂದ ಗ್ರಾಮೀಣ ಪ್ರತಿಭೆ, ಶಿಸ್ತಿಗೆ ಪ್ರಮುಖ್ಯತೆ ಕೊಟ್ಟು,ಸಮಾಜದ ಅಭಿವೃಧ್ದಿಗೆ ಚಿಂತಿಸೋ ಚಿಂತಕ, ನಮ್ಮೆಲ್ಲರನ್ನ ತಮ್ಮ ಅಧ್ಭುತ ನಟನೆಯ ಮೂಲಕ.ಅದರಲ್ಲೂ ಹುಡುಗಿಯರ ಪಾತ್ರದಲ್ಲಿ ಮಿಂಚಿ, ಗಂಬೀರ ಪಾತ್ರಗಳಿಗೆ ಜೀವ ನೀಡಿ ಸೈ ಎನಿಸಿಕ್ಕೊಂಡ *ಕಾಮಿಡಿ ಕಿಲಾಡಿ ಅನೀಶ್ ಅಮಿನ್ ವೇಣೂರು*

ನಿಮಗೆ ಇವರೊಬ್ಬ ನಟ ಅಂತ ಗೊತ್ತು ಆದರೆ ಉಳಿದದ್ದು ನಾವು ಹೇಳುತ್ತೆವೆ, ವಿದ್ಯಾರ್ಥಿ ಜೀವನಿದಿಂದಲೇ ಕಲಾ ಆರಾಧನೆಯಲ್ಲಿ ತೊಡಗಿಕ್ಕೊಂಡ ಇವರು ಅಲ್ಲಿಂದಲೇ ಸಾಧನೆಯ ಮೆಟ್ಟಿಲೇರುತ್ತ ಬಂದವರು ನಾಟಕ,ಪ್ರಹಸನಗಳಲ್ಲಿ ಬಣ್ಣ ಹಚ್ಚಿ, ಏಕಪಾತ್ರಭಿನಯದ.ಮೂಲಕ.ಪಾತ್ರಕ್ಕೆ ಜೀವ ತುಂಬಿದವರು ಇದರ ಜೊತೆಗೆ ಇವರೊಬ್ಬ ಉತ್ತಮ ಹಾಡುಗಾರ. *ಶ್ರೀ ಗುರು ಮಿತ್ರ ಸಮೂಹ ಬೆಳ್ತಂಗಡಿಯ* ಸಕ್ರೀಯ ಸದಸ್ಯರು, *ರಾಜ್ಯ ಮಟ್ಟದಲ್ಲಿ ಪ್ರಶಸ್ತಿ* ಬಾಚಿದವರು,ಇವರು ನಮ್ಮವರು ಎನ್ನುವುದು ನಮಗೆ ಹೆಮ್ಮೆ. 
ಇಷ್ಟೆ ಅಲ್ಲದೆ ಇವರೊಬ್ಬ ಉತ್ತಮ ಬರಹಗಾರ, *ಮರ್ಲ್ ಕಟ್ಟೊರ್ಚಿ* ಎಂಬ ಹಾಸ್ಯ ನಾಟಕ ಬರೆದು ಯಶಸ್ವಿಗಳಿಸಿದವರು ಜೊತೆಗೆ ಒಬ್ಬ ಉತ್ತಮ ನಿರೂಪಕ,ಮಾತುಗಾರ ಕಾರ್ಯಕ್ರಮ ಸಂಯೋಜಕ, ತೀರ್ಪುಗಾರ. 
ಕನ್ನಡದಲ್ಲಿ ಎಂ.ಎ ಪದವಿ ಪಡೆದು ಕಿರಿ ವಯಸ್ಸಿನಲ್ಲಿಯೇ ಶಾಲಾ ಮುಖ್ಯೋಪಾಧ್ಯಯರಾಗಿ ಕರ್ತವ್ಯ ನೀರ್ವಾಹಿಸಿ ನಮ್ಮೆಲ್ಲರನ್ನ ಹಾಸ್ಯದ ಮೂಲಕ ರಂಜಿಸಿದವರು..
ಒಟ್ಟಾರೆಯಾಗಿ ಇವರೊಬ್ಬ ಬಹುಮುಖ ಪ್ರತಿಭೆ, ಚಿಂತಕ, ನಗುತ್ತ ನಗಿಸುತ್ತ ಎಲ್ಲರೊಡನೆ ಬೆರೆಯುವ ಕಾಮಿಡಿ ಕಿಲಾಡಿ.
ನಿಮ್ಮ ಇನ್ನಷ್ಟೂ ಪ್ರತಿಭೆಯನ್ನ ಹೊರ ಜಗತ್ತಿಗೆ ಪರಿಚಯಿಸುವ ಅವಕಾಶ ಲಭಿಸಲಿ, ನಿಮ್ಮ ಈ ಸಾಧನೆ,ಕಲಾ ಸೇವೆ ಹೀಗೆ ನಿರಂತರವಾಗಿರಲಿ, ಬದುಕು.ಬಂಗಾರವಾಗಲಿ ಎಂಬುವುದು ನಮ್ಮ ಹಾರೈಕೆ.

✍ಚಂದ್ರಹಾಸ ಬಳಂಜ

0 comments: