ಡಿ. 31 ರಂದು ಬಂಟ್ವಾಳದ ವಿಟ್ಲ ಮಂಗಲಪದಲವು ನಿವಾಸಿ, ಬಸ್ ನಿರ್ವಾಹಕ ಹರಿಣಾಕ್ಷ(32) ಎಂಬುವರು ಸುಬ್ರಹ್ಮಣ್ಯದಲ್ಲಿ ಬೈಕ್ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದರು. ನಂತರ ಅವರನ್ನು ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದ ಹಿನ್ನೆಲೆ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ವಿಚಾರವನ್ನು ಆಸ್ಪತ್ರೆ ವೈದ್ಯರು ಹರಿಣಾಕ್ಷನ ಮನೆಯವರಿಗೆ ತಿಳಿಸಿದ್ದರು. ಅಲ್ಲದೆ, ಅಂಗಾಂಗ ದಾನ ಮಾಡುವಂತೆ ತಿಳುವಳಿಕೆಯನ್ನು ಮೂಡಿಸಿದ್ದರು.ಈ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಹರಿಣಾಕ್ಷನ ಕುಟುಂಬ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಅಂಗಾಂಗ ಅವಶ್ಯಕ ಇರುವ ಆಸ್ಪತ್ರೆಗಳಿಗೆ ಮಾಹಿತಿ ನೀಡಿ ಗುರುವಾರ ಬೆಳಗ್ಗೆ ಝೀರೋ ಟ್ರಾಫಿಕ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಸಾಗಿಸಿ, ಅಲ್ಲಿಂದ ವಿಮಾನದಲ್ಲಿ ಹರಿಣಾಕ್ಷನ ಅಂಗಾಂಗವನ್ನು ಬೆಂಗಳೂರಿಗೆ ರವಾನಿಸಲಾಯಿತು.ಬೆಂಗಳೂರು ಹಾಗೂ ಮಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಮೂತ್ರಪಿಂಡ ಮತ್ತು ಹೃದಯ ಕವಾಟವನ್ನು ರವಾನಿಸಲಾಯಿತು. ಮೃತ ಹರಿಣಾಕ್ಷಗೆ ತಂದೆ ಸಂಜೀವ ಪೂಜಾರಿ, ತಾಯಿ ಹಾಗೂ ಐವರು ಸಹೋದರರಿದ್ದಾರೆ.
0 comments: