Tuesday, February 5, 2019

ತನುಷ್ ಕೋಟ್ಯಾನ್ ಅಂಡರ್ 19 ಭಾರತ ತಂಡದ ಕ್ರಿಕೆಟ್ ಆಟಗಾರ







ತನುಷ್ ಕೋಟ್ಯಾನ್  ಅಂಡರ್ 19 ಕ್ರಿಕೆಟ್ ಭಾರತ ತಂಡದ ಪ್ರತಿಭಾನ್ವಿತ ಆಟಗಾರ ಆಫ್ ಸ್ಪಿನ್ನಿಂಗ್ ಆಲ್ರೌಂಡರ್ ಆಗಿರುವ ತನುಷ್'ರ ಹೆತ್ತವರಾದ ಕರುಣಾಕರ್ ಹಾಗೂ ಮಲ್ಲಿಕಾ ಕೋಟ್ಯಾನ್ ಮೂಲತಃ ಉಡುಪಿ ಸಮೀಪದ ಪಾಂಗಳದವರಾಗಿದ್ದಾರೆ. ಮುಂಬಯಿನ ಚೆಂಬೂರಿನಲ್ಲಿ ಹುಟ್ಟಿ ಬೆಳೆದ ತನುಷ್ ಪ್ರಸ್ತುತ ಮುಂಬಯಿನಲ್ಲಿನ ರಾಮಾನಿರಾಜನ್ ಜುನ್ಜುನ್ ವಾಲ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಶಾಲಾ ದಿನಗಳಲ್ಲೇ ಕ್ರಿಕೆಟ್ ಬಗ್ಗೆ ಹೆಚ್ಚಿನ ಅಸಕ್ತಿ ಹೊಂದಿದ್ದ ತನುಷ್ ಪೋಷಕರ ಹಾಗೂ ಅಧ್ಯಾಪಕರ ಪ್ರೋತ್ಸಾಹದಿಂದ ಕ್ಲಬ್ ಲೆವೆಲ್ ಪಂದ್ಯಾಟಗಳಲ್ಲಿ ಗುರುತಿಸಿಕೊಂಡಿದ್ದರು. ತನುಷ್ ಅವರಿಗೆ ಕ್ರಿಕೆಟ್ ನಲ್ಲಿ ಅತೀ ಹೆಚ್ಚಿನ ಒಲವಿದ್ದು. ತನ್ನಷ್ಟಕ್ಕೆ ತಾನೇ ಕಲಿತು ಅಡುತ್ತಾ ಕ್ರಿಕೆಟ್ ನಲ್ಲಿ ಸಾಧನೆ ಮಾಡಿದ್ದಾರೆ. ತಂದೆ ಕರುಣಾಕರ ಕೋಟ್ಯಾನ್ ಮುಂಬಯಿನಲ್ಲಿ A ಡಿವಿಜನ್ ಕ್ರಿಕೆಟ್ ಆಟವಾಡುತ್ತಿದ್ದವರು. ತನ್ನ ವಿರಾಮದ ಸಮಯದಲ್ಲಿಯೇ ಮಗನಿಗೆ ಕ್ರಿಕೆಟ್ ತರಬೇತಿ ನೀಡುತ್ತಿದ್ದರು. ತಂದೆಯೇ ಈತನ ತರಬೇತಿ ನೀಡಿದ ಗುರುಗಳು.

ವಿನೂ ಮಂಕಡ್ ಅಂಡರ್ 19 ಟ್ರೋಫಿ ಪಂದ್ಯಾಟದಲ್ಲಿ ಹತ್ತು ಒವರುಗಳಲ್ಲಿ 31 ರನ್ನುಗಳಿಗೆ 6 ವಿಕೆಟುಗಳನ್ನು ಪಡೆದು ಶ್ರೇಷ್ಟ ಪ್ರದರ್ಶನ ನೀಡಿದ್ದರು. ನಾರಾಯಣ ತಮ್ಹಾನ್ಹೆ ಟ್ರೋಫಿಯಲ್ಲಿ ತನುಶ್ 116 ರನ್ ಹಾಗೂ 4 ವಿಕೆಟ್ ಗಳ ಸಾಧನೆ ಮುಂಬೈ ಕ್ಲಬ್ ಕ್ರಿಕೆಟ್ ಮಟ್ಟದಲ್ಲಿ 3ನೇ ಅತ್ಯುತ್ತಮ ಆಟಗಾರ ಎಂಬ ಸ್ಥಾನ ಪಡೆದಿದ್ದಾರೆ. 2018ರಲ್ಲಿ ಮಲೇಶ್ಯಾದಲ್ಲಿ ನಡೆದಿದ ಏಶ್ಯಾ ಕಪ್  ಪಂದ್ಯಾಟಗಳಲ್ಲಿ ಆಫ್ ಸ್ಪಿನ್ - ಅಲ್‌ರೌಂಡರ್‌ ಆಟಗಾರರಾಗಿ ತನುಷ್‌ ಕೋಟ್ಯಾನ್ ಅಂಡರ್ 19‌ ಭಾರತ ತಂಡವನ್ನು ಪ್ರತಿನಿಧಿಸಿ ಕ್ರಿಕೆಟ್ನಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿದರು.ಇವರು ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಯಶಸ್ಸು ಗಳಿಸಿ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಬಿಲ್ಲವಾ'ಸ್ ಪೂಜಾರಿ'ಸ್ ಕಡೆಯಿಂದ ಶುಭಹಾರೈಕೆಗಳು. ©Billavas Poojarys

0 comments: