Saturday, February 2, 2019

ನಾವು_ಬಿಲ್ಲವರು_ಎಲ್ಲ_ಬಲ್ಲವರು

ನಾವು ಬಿಲ್ಲವರು ಎಲ್ಲ ಬಲ್ಲವರ ನ್ಯಾಯ ನೀತಿಗೆ ಸಹನೆ ಶಾಂತಿಗೆ ಹೆಸರ ತಂದವರು. ಕಲ್ಪ ವೃಕ್ಷವನೇರಿ ಸುರೆಯತಂದೆವು ಕುಡಿದವರು ಪ್ರತಿಫಲವ ನೀಡದೆ ವಂಚಿಸಿದರೂ ತಲೆಯ ಬಾಗದವರು ಇಂದೋ ಆಗಸವನೇರಿ ಈ ಭೂಮಿಗೆ ಏಣಿಯನ್ನಿಟ್ಟವರು.

ನಾವು #ಬಿಲ್ಲವರು #ಎಲ್ಲ #ಬಲ್ಲವರು ದೇಹ ಶಕ್ತಿಯನು ಗದ್ದೆಗಿಳಿಸಿ ಮಳೆ ಬಿಸಿಲಿಗು ಧೃತಿಗೆಡದೆ ಹೊರೆಯ ಕಟ್ಟಿ ತೆನೆಯ ಹೊತ್ತೆವು ಉಳ್ಳವರು ಭೂಮಿ ಕಸಿದರೂ ತಲೆಯ ಬಾಗದವರು ಇಂದು ಜಮೀನು ದಾರರು ಸಾಹುಕಾರರಾದೆವು.

#ನಾವು #ಬಿಲ್ಲವರು #ಎಲ್ಲ #ಬಲ್ಲವರು ಪ್ಲೇಟು ತಟ್ಟೆಯ ಒರೆಸಿ ಇಟ್ಟೆವು ಪಾತ್ರೆ ಪಗಡಿಯ ಸಾಲಲಿಟ್ಟೆವು ಮಾಡಿದ ಕೆಲಸ ಸರಿಯಿಲ್ಲವೆಂದು ಉಟ್ಟ ವಸ್ತ್ರ ದೆ ಹೊರ ಹಾಕಿದರೂ ತಲೆಯ ಬಾಗಲಿಲ್ಲ ಇಂದು ಕೆಲಸ ಕೊಡುವ ಹೋಟೆಲ್ ನ ಧಣಿಗಳಾದೆವು.

#ನಾವು #ಬಿಲ್ಲವರು #ಎಲ್ಲ #ಬಲ್ಲವರು ಮಠ ಮಂದಿರದ ಸುತ್ತ ಸ್ವಚ್ಛ ಗೊಳಿಸಿದೆವು ದೇವರನಂದು ನೋಡ ಬಿಡಲೆ ಇಲ್ಲ ಅವರು ನಾವೋ ತಲೆಯ ಬಾಗಲೆ ಇಲ್ಲ ಇಂದು ದೇವಾಲಯ ದೈವಸ್ಥಾನ ಗುಡಿ ಗೋಪುರ ಕಟ್ಟುವಲ್ಲೆಲ್ಲನಮ್ಮದೇ ಹೆಸರು.

#ನಾವು #ಬಿಲ್ಲವರು #ಎಲ್ಲಬಲ್ಲವರು ಅಂದು ವಿದ್ಯೆಯು ಉಳ್ಳವರ ಸ್ವತ್ತು ಅಕ್ಷರ ಜ್ಞಾನ ಹತ್ತ ಬಿಡಲಿಲ್ಲ ನಾವೊ ತಲೆಯ ಬಾಗಲಿಲ್ಲ ಕಟ್ಟಿದೆವು ಶಿಕ್ಷಣ ವ ಕೊಡುವ ಕೊಡಿಸುವ ವಿದ್ಯಾ ದೇಗುಲವ ವಿದ್ಯಾ ವಾರಿಧಿಯ ಹರಿಸುತಿಹೆವು ಸುತ್ತ ಮುತ್ತ.

#ನಾವು #ಬಿಲ್ಲವರು #ಎಲ್ಲ #ಬಲ್ಲವರು ರಾಜನಧಿಕಾರವಿತ್ತಂದು ನಮಗರಿಯದೆಯೆ ಕಸಿದರವರು ಸೇವಕರಾಗಲು ನೀವು ಸರಿ ಎಂದು ನಕ್ಕರೂ ನಾವು ತಲೆಯ ಬಾಗಲಿಲ್ಲ ಇಂದು ರಾಜಕೀಯವಾಗಿ ನಾವೇ ಮುಂದು ಕೇಳುತಿಹುದು ಮೇಲ್ಮನೆಯಲೂ ನಮ್ಮದೆ ಸದ್ದು.

#ನಾವು #ಬಿಲ್ಲವರು #ಎಲ್ಲ #ಬಲ್ಲವರು ನಾಟಿ ಮದ್ದನು ಅರಗಿಸಿಕೊಂಡವರು ಆದರೂ ನಮ್ಮನು ಮುಟ್ಟ ಬಿಡಲಿಲ್ಲ ನಾವೋ ತಲೆಯ ಬಾಗಲಿಲ್ಲ ಇಂದೋ ವೈದ್ಯಕೀಯ ದಲೂ ನಮ್ಮದೇ ಹೆಸರು ಎಲ್ಲರನೂ ಮುಟ್ಟಿ ತಟ್ಟಿ ಮದ್ದ ಕೊಡುವೆವು.

ನಾವು ಬಿಲ್ಲವರು ಎಲ್ಲ ಬಲ್ಲವರು ವ್ಯಾಪಾರ ವಹಿವಾಟು ಏನುಂಟು ಏನಿಲ್ಲ ಎಲ್ಲೆಲ್ಲೂ ನಮ್ಮದೇ ಹೆಸರು ಕೋಟಿ ಚೆನ್ನಯ್ಯರು ಉದಯಿಸಿದ ಈ ಮಣ್ಣಲಿ ಗುರು ನಾರಾಯಣ ರು ಹರಸಿರುವ ಈ ಮಣ್ಣಲಿ ಹುಟ್ಟಿರುವ ನಾವು ಬಿಲ್ಲವರು ಎಲ್ಲ ಬಲ್ಲವರು ದಶ ದಿಕ್ಕುಗಳಿಗು ಹೆಸರ ಪಸರಿಸಿರುವ ನಾವು ಬಿಲ್ಲವರು. ರಚನೆ: ವಾಸಂತಿ ಅಂಬಲಪಾಡಿ. #ಯೂತ್ #ಬಿಲ್ಲವ(ರಿ.)#ಕಾರ್ಕಳ.

0 comments: