Monday, February 4, 2019

"ಸಿಗ್ನೇಚರ್" ಕನ್ನಡ ಸಿನೆಮಾದಲ್ಲಿ ಮಿಂಚಲಿದ್ದಾರೆ ಬಾಲ ನಟಿ ಮಾನ್ಯ_ಭಾಸ್ಕರ_ಪೂಜಾರಿ

ಸಿಗ್ನೇಚರ್" ಕನ್ನಡ ಸಿನೆಮಾದಲ್ಲಿ ಮಿಂಚಲಿದ್ದಾರೆ ಬಾಲ ನಟಿ #ಮಾನ್ಯ_ಭಾಸ್ಕರ_ಪೂಜಾರಿ ಭಾಸ್ಕರ್ ಪೂಜಾರಿ ಮತ್ತು ತಾಯಿ ಪೂರ್ಣಿಮ ಭಾಸ್ಕರ ಪೂಜಾರಿ ದಂಪತಿಗಳ ಮುದ್ದಿನ ಸುಪುತ್ರಿ ಬೇಬಿ ಮಾನ್ಯ ಬೆಂಗಳೂರಿನ ಚಂದ್ರ ಲೇಔಟ್‌ನಲ್ಲಿರುವ ಬೆಂಗಳೂರು ಸೆಂಟ್ರಲ್ ಸ್ಕೂಲ್‌ನಲ್ಲಿ ಆರನೇ ತರಗತಿಯಲ್ಲಿ ವಿದ್ಯಾರ್ಥಿಯಾದ ಮಾನ್ಯಯವರಿಗೆ ಬಾಲ್ಯದಿಂದಲ್ಲೂ ಕಲಾರಂಗದ ಕಡೆಗೆ ಒಲವಿತ್ತು. ಅದನ್ನು ಗುರುತಿಸಿ ಪೋಷಕರಾದ ಭಾಸ್ಕರ್ ಹಾಗೂ ಪೂರ್ಣಿಮಾ ಪೂಜಾರಿಯವರು ಅವಳ ಇಚ್ಛೆಯಂತೆ ಅಭಿನಯ, ನೃತ್ಯ, ಸಂಗೀತದಲ್ಲಿ ಒಂದಷ್ಟು ತರಬೇತಿಯನ್ನು ನೀಡಿದರು. ಈಗ ಅವಳ ಪ್ರತಿಭೆಯನ್ನು ನೋಡಿ ಸಿನಿಮಾ, ಸೀರಿಯಲ್‌ಸ್ನಲ್ಲಿ ಹಲವು ಆಫರ್‌ಗಳು ಬಂದಿವೆ. ತನಗೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ, ನೋಡುಗರಿಗೆ ಇಷ್ಟವಾಗುವ ರೀತಿಯಲ್ಲಿ ಅಭಿನಯಿಸುವ ಕಲೆಯನ್ನು ಬೆಳೆಸಿಕೊಂಡಿದ್ದಾರೆ.

ಗೀತಾಂಜಲಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ, ಹಿರಿತೆರೆಯ ‘ದಂಡುಪಾಳ್ಯ-3’ ಮತ್ತು ‘ಸಂದಿಗ್ಧ’ ಚಿತ್ರದಲ್ಲಿ ನಟಿಸಿರುವ ಬಾಲ ನಟಿಯಾಗಿ ನಟಿಸಿದ ಮಾನ್ಯ ಮುಂಬರುವ ಬಹುನಿರೀಕ್ಷೀತ ಕನ್ನಡದ ‘ಸಿಗ್ನೇಚರ್’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲ್ಯದಿಂದಲೂ ಅಭಿನಯ, ನೃತ್ಯ, ಸಂಗೀತ ಹೀಗೆ ವಿವಿಧ ಕಲೆಗಳ ಆಸಕ್ತಿಯನ್ನು ಬೆಳೆಸಿಕೊಂಡ ಮಾನ್ಯ ಜಿಲ್ಲಾಧಿಕಾರಿಯ ಮಗಳ ಪಾತ್ರದಲ್ಲಿ ಮಿಂಚಲಿದ್ದಾರೆ.

#ಭಾಸ್ಕರ್ ಪೂಜಾರಿ ಬರೆದಿರುವ ಕಥೆಗೆ, ಸುಮಾರು 15 ವರ್ಷಗಳಿಂದ ಸಹಾಯಕ ನಿರ್ದೇಶಕನಾಗಿದ್ದ ಗುರು ಮದ್ಲೇಸರ ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಉಡುಪಿ, ಹೆಬ್ರಿ, ಮಲ್ಪೆ, ಮರವಂತೆ ಹೀಗೆ ಕಡಲ ತಡಿಯ ಅನೇಕ ಸುಂದರ ತಾಣಗಳ ಜತೆಗೆ ಚಿತ್ರೀಕರಣವನ್ನು ನಡೆಸಲಾಗುತ್ತಿದೆ. ‘ಎಂ.ಎಂ.ಕೆ. ಮೂವೀಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ #ಪೂರ್ಣಿಮಾ_ಭಾಸ್ಕರ್_ಪೂಜಾರಿ ಬಂಡವಾಳ ಹೂಡುತ್ತಿದ್ದಾರೆ. ಮಯೂರಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ‘ಸಿಗ್ನೇಚರ್’ನಲ್ಲಿ ಹೊಸ ಹುಡುಗ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಸುನೀಲ್ ಪುರಾಣಿಕ್, ಸೂರ್ಯ ಕಿರಣ್, ಬೇಬಿ ಮಾನ್ಯ, ಕಿಶೋರ್, ವಿ. ಮನೋಹರ್, ಆರ‌್ಯನ್ (ಬಾಂಬೆ), ಗಿರೀಶ್ ಜತ್ತಿ, ಭೋಜರಾಜ್ ಕೋಣಿ ಮೊದಲಾದವರು ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ವಿ.ಮನೋಹರ್ ಅವರ ಸಾಹಿತ್ಯ ಮತ್ತು ಸಂಗೀತವಿದ್ದು, ರಾಜೇಶ್ ಸಾಲುಂಡಿ ಸಂಭಾಷಣೆ ಬರೆದಿದ್ದಾರೆ. ಜೀವನ್ ಗೌಡ ಅವರ ಛಾಯಾಗ್ರಹಣವಿದೆ.

ಅತೀ ಶೀಘ್ರದಲ್ಲಿ ಬಿಡುಗಡೆಯಾಗಲಿರುವ ಸಿನೆಮಾ ಸಿಗ್ನೇಚರ್ ಚಿತ್ರತಂಡಕ್ಕೆ ಹಾಗೂ ಬೇಬಿ ಮಾನ್ಯ ಪೂಜಾರಿಯವರ ಹೆಸರು ನಿರೀಕ್ಷೆಗೂ ಮೀರಿ ದೊಡ್ಡಮಟ್ಟದಲ್ಲಿ ಬೆಳಗುವಂತಾಗಲೆಂದು ನಮ್ಮಲೆರ ಶುಭಹಾರೈಕೆಗಳು..

0 comments: